ಆರ್ಡರ್ ಮಾಡಿದ್ದು 70,000 ರು ಐಪೋನ್ – ಬಂದಿದ್ದು 10 ರುಪಾಯಿಯ ಸೋಪ್.
ಎಪ್ಪತ್ತು ಸಾವಿರ ರುಪಾಯಿ ಮೌಲ್ಯದ ಐಪೋನ್ 12 ನ ಆರ್ಡರ್ ಮಾಡಿದ್ರೆ 10 ರುಪಾಯಿ ಡಿಶ್ ವಾಶ್ ಸೋಪ್ ಮತ್ತು 5 ರುಪಾಯಿ ನಾಣ್ಯ ಡಿಲೆವರಿ ಮಾಡಿರುವ ಘಟನೆ ಕೇರಳಲ್ಲಿ ನಡೆದಿದೆ…
ನೂರುಲ್ಲ ಅಮೀನ್ ಎನ್ನುವ ಕೇರಳದ ಅನಿವಾಸಿ ಭಾರತೀಯರೊಬ್ಬರು ಅಮೇಜಾನ್ ಮೂಲಕ ಅಕ್ಟೋಬರ್ 12 ರಂದು ತನ್ನ ಕ್ರೆಡಿಟ್ ಕಾರ್ಡ್ ಬಳಸಿ ಐಪೋನ್ 12 ನ ಆರ್ಡರ್ ಮಾಡಿದ್ದರು..ಇವರು ಅಮೇಜಾನ್ ನಿಯಮಿತ ಗ್ರಾಹಕರಾಗಿದ್ದು ಹೈದರಬಾದ್ ಮೂಲದ ಮಾರಟಗಾರರ ಮೂಲಕ ಪ್ರಾಡಕ್ಟ್ ತಲುಪಬೇಕಾಗಿತ್ತು.
ಹೈದರಾಬಾದ್ನಲ್ಲಿ ಪ್ಯಾಕ್ ಆಗಿ ಹೊರಟ್ಟಿದ್ದ ಪೋನ್ ಸೇಲಂ ಜಿಲ್ಲೆಯಲ್ಲಿ ಕೆಲದಿನ ಸ್ಥಗಿತಗೊಂಡಿತ್ತು ಇದರಿಂದ ಅನುಮಾನ ಗೊಂಡ ಗ್ರಾಹಕ ನೂರುಲ್ಲ ಅಮೀನ್ ಪ್ರಾಡಕ್ಟ್ ಮನೆ ತಲುಪಿದಾಗ ಡೆಲವರಿ ಬಾಯ್ ಎದುರುಗಡೆಯೇ ವಿಡಿಯೋ ಮಾಡಿ ಬಾಕ್ಸ್ ಓಪನ್ ಮಾಡಿದರು. ಅನುಮಾನ ನಿಜವಾಗುವಂತೆ ಬಾಕ್ಸ್ ಒಳಗಡೆ ಪೋನಿಗೆ ಬದಲಾಗಿ ವಿಮ್ ಬಾರ್ ಸೋಪ್ ಮತ್ತು ಐದು ರುಪಾಯಿ ನಾಣ್ಯ ಬಂದಿದೆ..ತಕ್ಷಣ ಅಮೇಜಾನ್ ಗ್ರಾಹಕ ಸೇವಾ ಅಧಿಕಾರಿ ಗೆ ಕರೆಮಾಡಿ ವಿಷಯವನ್ನ ತಿಳಿಸಿದ್ದಾರೆ. ನಂತರ ಸ್ಥಳಿಯ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಮ್ ಪೊಲೀಸರು ಅಮೇಜಾನ್ ಅಧಿಕಾರಿಗಳ ಮೂಲಕ ತೆಲಂಗಾಣದಲ್ಲಿ ಮೊಬೈಲ್ ಮಾರಾಟಗಾರರನ್ನ ಸಂಪರ್ಕಿಸಿದಾಗ ಇವರಿಗೆ ಕಳಿಸಿದ್ದ ಪೋನ್ ಜಾರ್ಖಂಡ್‌ನಲ್ಲಿ ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ.. ಮಾರಾಟಗಾರರು ಹಣವನ್ನ ನೂರುಲ್ಲ ಅಮೀನ್ ಅವರಿಗೆ ಮರುಪಾವತಿಸಿದ್ದಾರೆ.