ಇಂಡೋ-ಪಾಕ್ ಪಂದ್ಯ | ಇದು ರನ್ ಮೆಷಿನ್ ಗಳ ಕಾಳಗ
ದುಬೈ : ಐಸಿಸಿ ಟಿ 20 ವಿಶ್ವಕಪ್ ಮಹಾ ಸಂಗ್ರಾಮದಲ್ಲಿ ಇಂದು ಮಹಾ ಕಾಳಗ ನಡೆಯಲಿದೆ. ಕ್ರಿಕೆಟ್ ಲೋಕದ ಬದ್ಧವೈರಿಗಳಾದ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಇಂದು ಸೆಣಸಾಡಲಿವೆ. ಈ ರಣರೋಚಕ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈ ಪಂದ್ಯದಲ್ಲಿ ಮತ್ತೊಂದು ಆಕರ್ಷಣೆ ಅಂದ್ರೆ ಅದು.. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್.
ಹೌದು..! ಹೈವೋಲ್ಟೆಜ್ ಮ್ಯಾಚ್ ನಲ್ಲಿ ಎಲ್ಲರ ಕಣ್ಣು ಈ ಇಬ್ಬರು ರನ್ ಮೆಷಿನ್ ಗಳ ಮೇಲೆ ಇರಲಿದೆ. ಯಾಕೆಂದರೆ ಟೀಂ ಇಂಡಿಯಾದಲ್ಲಿ ಕಿಂಗ್ ಕೊಹ್ಲಿ ರನ್ ಮೆಷಿನ್ ಆಗಿ ಗುರುತಿಸಿಕೊಂಡರೆ, ಪಾಕಿಸ್ತಾನ ತಂಡದಲ್ಲಿ ಬಾಬರ್ ಬ್ಯಾಟಿಂಗ್ ಮಾಂತ್ರಿಕರಾಗಿ ವಿಶ್ವದ ಗಮನಸೆಳೆದಿದ್ದಾರೆ.
ವಿರಾಟ್ ಕೊಹ್ಲಿ 89 ಟಿ20 ಪಂದ್ಯಗಳಿಂದ 28 ಅರ್ಧಶತಕ ಸಹಿತ 3,159 ರನ್ ಸಿಡಿಸಿದರೆ, ಬಾಬರ್ ಅಜಮ್ ಆಡಿರುವ 61 ಟಿ20 ಪಂದ್ಯಗಳಲ್ಲಿ 1 ಶತಕ, 20 ಅರ್ಧಶತಕ ಸಹಿತ 2,204 ರನ್ ಚಚ್ಚಿದ್ದಾರೆ.
ಈ ಇಬ್ಬರು ಒಂದು ಬಾರಿ ಕ್ರೀಸ್ ಗೆ ಕಚ್ಚಿ ನಿಂತರೇ ಅಲ್ಲಿ ಎದುರಾಳಿ ಬೌಲರ್ ಗಳ ಮಾರಣಹೋಮ ನಡೆಯೋದು ಗ್ಯಾರೆಂಟಿ. ಕ್ರಿಕೆಟ್ ಮೈದಾನದಲ್ಲಿ ರನ್ ಸುನಾಮಿಯನ್ನ ಸೃಷ್ಠಿಸೋ ತಾಕತ್ತು ಈ ಇಬ್ಬರ ಬ್ಯಾಟಿಂಗ್ ಗೆ ಇದೆ. ಹೀಗಾಗಿ ಈ ಇಬ್ಬರು ಬ್ಯಾಟಿಂಗ್ ಮಾಂತ್ರಿಕರ ಆಟ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.









