ಇಂದಿನಿಂದ ಪ್ರಾಥಮಿಕ ಶಾಲೆಗಳು ಪುನರಾರಂಭ
1 ರಿಂದ 5 ನೇ ತರಗತಿಯವ ವರೆಗಿನ ಪ್ರಾಥಮಿಕ ಶಾಲೆಗಳು ಇಂದಿನಿಂದ ಪುನರಾರಂಭಗೊಳ್ಳಲಿವೆ ಸುಮಾರು ಎರಡು ವರ್ಷಗಳ ನಂತರ ಶಾಲೆಗಳು ಮತ್ತೆ ತೆರೆಯಲಿದ್ದು ವಿರ್ಧ್ಯಾಥಿಗಳನ್ನ ಶಾಲೆಗೆ ಸೆಳೆಯಲು ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು ಸಹ ತುಂಬಾ ಉತ್ಸಾಹದಿಂದ ಮಕ್ಕಳನ್ನ ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ.
ಹಲವು ಶಾಲೆಗಳು ತಳಿರು ತೋರಣಗಳಿಂದ ಸಿಂಗರಿಸಲ್ಪಟ್ಟಿವೆ ಖಾಸಗಿ ಶಾಲೆಗಳು ನಿನ್ನೆಯೇ ಪೋಷಕರಿಗೆ ಮಾಹಿತಿಗಳನ್ನ ತಿಳಿಸಿ, ಮಕ್ಕಳನ್ನ ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಆದರೆ ಕೆಲ ಪೋಷಕರು ಮಕ್ಕಳಿಗೆ ಲಸಿಕೆ ಹಾಕಿದ ನಂತರವೆ ಶಾಲೆಗಳನ್ನ ತೆರೆಯಬೇಕಿತ್ತು ಎಂದು ಅಸಮಧಾನ ಹೊರಹಾಕಿದ್ದಾರೆ. ಆದರೆ ಕೆಲವು ಪೋಷಕರು ಶಾಲೆಗಳು ಓಪನ್ ಆಗಿದ್ದಕ್ಕೆ ಸಂತಸಗೊಂಡಿದ್ದು ಮಕ್ಕಳು ಮನೆಯಲ್ಲಿ ಓದುವುದಿಲ್ಲ ಕಲಿತಿರುವ ಎಲ್ಲವನ್ನ ಮರೆತಿದ್ದಾರೆ. ಮತ್ತೆ ಶಾಲೆಗಳು ಪುನಾರಾಂಭಗೊಂಡಿದ್ದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.
1ರಿಂದ 5ನೇ ತರಗತಿಗಳನ್ನು ಆರಂಭಿಸಲು ತೀರ್ಮಾನಿಸಿರುವ ಸರ್ಕಾರ ಹಲವು ಮಾರ್ಗಸೂಚಿಯನ್ನೂ ಪ್ರಕಟಿಸಿದೆ. ಅಕ್ಟೋಬರ್ 30ರವರೆಗೆ ಅರ್ಧ ದಿನ ಮಾತ್ರ ತರಗತಿ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ, ತರಗತಿ ನಡೆಸಬೇಕು ಎಂದು ಸರ್ಕಾರ ಸೂಚಿಸಿದೆ. ನವೆಂಬರ್ 2ರಿಂದ ಪೂರ್ಣಾವಧಿ ತರಗತಿಗಳು ಅಂದರೆ, ಬೆಳಗ್ಗೆ 10ರಿಂದ ಸಂಜೆ 4.30ರವರೆಗೂ ತರಗತಿಗಳು ನಡೆಯಲಿವೆ.