ಹೆಬ್ಬಾವನ್ನು ಕಂಬಕ್ಕೆ ಕಟ್ಟಿ ಹಾಕಿದ ಭೂಪ odisha saaksha tv
ಸಂಬಲ್ ಪುರ : ವ್ಯಕ್ತಿಯೊಬ್ಬ ಬೃಹತ್ python ಹೆಬ್ಬಾವನ್ನು ಕಂಬಕ್ಕೆ ಕಟ್ಟಿ ಹಾಕಿರುವ ವಿಚಿತ್ರ ಘಟನೆ ಒಡಿಶಾದ ಮಾಣೇಶ್ವರ್ ಬ್ಲಾಕ್ ನ ತಲ್ಪಾಲಿ ಎಂಬ ಗ್ರಾಮದಲ್ಲಿ ನಡೆದಿದೆ.
ತಲ್ಪಾಲಿ ಗ್ರಾಮದ ಭಕ್ತ ಪ್ರಧಾನ್ ಮನೆಯ ಬಳಿ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದೆ.
ಇದನ್ನು ಗಮನಿಸಿದ ಪ್ರಧಾನ್, ಹೆಬ್ಬಾವನ್ನು ಕಂಬಕ್ಕೆ ಕಟ್ಟಿಹಾಕಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.







