ಶಾರ್ಜಾದಲ್ಲಿ ಲೋ ಪ್ರೊಫೈಲ್ ಮ್ಯಾಚ್- ಅಫ್ಘಾನಿಸ್ತಾನಕ್ಕೆ ಸ್ಕಾಟ್ಲೆಂಡ್ ಚಾಲೆಂಜ್..!
ಟಿ20 ವಿಶ್ವಕಪ್ ನ ಸೂಪರ್ 12 ಹಣಾಹಣಿಯಲ್ಲಿ ಇದು ಲೊ ಪ್ರೊಫೈಲ್ ಚಾಲೆಂಜ್. ಆದರೆ ಮ್ಯಾಚ್ ನ ತೀವ್ರತೆ ಮಾತ್ರ ಹೈ ಆಗಿರಲಿದೆ. ಶಾರ್ಜಾದಲ್ಲಿ ಅಫ್ಘಾನಿಸ್ತಾನ ಮತ್ತು ಸ್ಕಾಟ್ಲೆಂಟ್ ಗೆಲುವಿಗಾಗಿ ಹಣಾಹಣಿ ನಡೆಸಲಿವೆ. ಅಫ್ಘಾನಿಸ್ತಾನ ಸೂಪರ್ 12 ಗೆ ನೇರವಾಗಿ ಅರ್ಹತೆ ಪಡೆದಿದ್ದರೆ, ಸ್ಕಾಟ್ಲೆಂಡ್ ಅರ್ಹತಾ ಸುತ್ತಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮೂರನ್ನೂ ಗೆದ್ದು ಸೂಪರ್ 12 ಪ್ರವೇಶ ಪಡೆದಿದೆ.
ಅಫ್ಘಾನಿಸ್ತಾನ ತಂಡದ ನಾಯಕತ್ವ ಕೊನೆಯ ಕ್ಷಣದಲ್ಲಿ ಮೊಹಮ್ಮದ್ ನಬಿ ಕೈ ಸೇರಿದೆ. ಅಭ್ಯಾಸ ಪಂದ್ಯದಲ್ಲಿ ಅಫ್ಘಾನ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡರೆ, ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ದಾಖಲಿಸಿತ್ತು. ಅಷ್ಟೇ ಅಲ್ಲ ಆಡಿರುವ ಕಳೆದ 5 ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಗೆಲುವು ದಾಖಲಿಸಿದೆ. ಹಝರತ್ ಉಲ್ ಝಝಾಯಿ, ಮೊಹ್ಮದ್ ಶೆಹಜಾದ್, ರಹ್ಮತುಲ್ಲಾ ಗರ್ಬಾಝ್ ರಂತಹ ಬ್ಯಾಟ್ಸ್ ಮನ್ ಗಳಿದ್ದಾರೆ. ರಶೀದ್ ಖಾನ್, ಮೊಹಮ್ಮದ್ ನಬಿಯಂತಹ ಆಲ್ ರೌಂಡರ್ ಗಳಿದ್ದಾರೆ. ವೇಗದ ಬೌಲಿಂಗ್ ನಲ್ಲೂ ಅಫ್ಘಾನಿಸ್ತಾನ ಚೆನ್ನಾಗಿ ಕಾಣುತ್ತಿದೆ.
ಇನ್ನು ಸ್ಕಾಟ್ಲೆಂಡ್ ವಿಚಾರಕ್ಕೆ ಬಂದರೆ ಅರ್ಹತಾ ಸುತ್ತಿನಲ್ಲಿ ಬಾಂಗ್ಲಾದೇಶಕ್ಕೆ ಸೋಲುಣಿಸಿದ ಸಾಧನೆ ಮಾಡಿತ್ತು. ಕ್ಯಾಪ್ಟನ್ ಕೈ ಕೊಯ್ಟ್ಜರ್, ರಿಚರ್ಡ್ ಬೆರಿಂಗ್ಟನ್ ಮತ್ತು ಜಾರ್ಜ್ ಮುನ್ಶಿ ಮಿಂಚಿನ ಆಟ ಆಡಿದ್ದಾರೆ. ಬೌಲಿಂಗ್ ನಲ್ಲೂ ಸ್ಕಾಟ್ಲೆಂಡ್ ಚೆನ್ನಾಗಿದೆ. ಶಾರ್ಜಾದಲ್ಲಿ ಎರಡು ಲೊ ಪ್ರೊಫೈಲ್ ತಂಡಗಳು ಅಖಾಡಕ್ಕೆ ಇಳಿದರೂ ರೋಚಕತೆಗೆ ಏನೂ ಕಡಿಮೆ ಇರುವುದಿಲ್ಲ.
ಸಂಭಾವ್ಯ XI
ಅಫ್ಘಾನಿಸ್ತಾನ:
1. ಹಝರತ್ ಉಲ್ಲಾ ಝಝಾಯಿ, 2. ಮೊಹಮ್ಮದ್ ಶೆಹಜಾದ್, 3. ರೆಹಮತ್ ಉಲ್ಲಾ ಗುರ್ಬಾಜ್, 4. ನಜೀಬ್ ಜರ್ದಾನ್, 5. ಅಸ್ಗರ್ ಅಫ್ಘಾನ್, 6. ಮೊಹಮ್ಮದ್ ನಬಿ, 7. ಕರಿಮ್ ಜನತ್, 8. ಗುಲ್ಬಾದಿನ್ ನೈಬ್, 9. ರಶೀದ್ ಖಾನ್, 10. ಮುಜೀಬ್ ಉರ್ ರೆಹಮಾನ್, 11. ನವೀನ್ ಉಲ್ ಹಕ್
ಸ್ಕಾಟ್ಲೆಂಡ್:
1. ಜಾರ್ಜ್ ಮುನ್ಶಿ, 2. ಕೈಲ್ ಕೊಯ್ಟ್ಜರ್, 3. ಮ್ಯಾಥ್ಯೂ ಕ್ರಾಸ್, 4. ರಿಚರ್ಡ್ ಬೆರಿಂಗ್ಟನ್, 5. ಕಾಲ್ಯುಮ್ ಮೆಕ್ ಲಾಯ್ಡ್, 6. ಮೈಕಲ್ ಲಿಸ್ಕ್, 7. ಕ್ರಿಸ್ ಗ್ರೀವ್ಸ್, 8. ಮಾರ್ಕ್ ವ್ಯಾಟ್, 9. ಜೋಶ್ ಡೆವಿ, 10. ಸಫ್ಯಾನ್ ಶರಿಫ್, 11. ಬ್ರಾಡ್ ವೀಲ್








