ಅಲ್ಪಸಂಖ್ಯಾತರನ್ನ ಮುಗಿಸಿದ್ದು ಸಿದ್ದರಾಮಯ್ಯ ಅಲ್ಲ ಕುಮಾರಸ್ವಾಮಿ – ಜಮೀರ್
ಹುಬ್ಬಳ್ಳಿ : ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿರೋ ಜಮೀರ್ ಅವರು ಕುಮಾರಸ್ವಾಮಿ ಉಪಚುನಾವಣೆಯಲ್ಲಿ ಸೂಟ್ ಕೇಸ್ ರಾಜಕಾರಣ ಮಾಡಿ, ಅಲ್ಪಸಂಖ್ಯಾತರನ್ನ ಬಲಿ ತೆಗೆದುಕೊಂಡಿದ್ದಾರೆ. ಹಾನಗಲ್‌ನಲ್ಲಿ ಸೂಟ್‌ಕೇಸ್ ಬರದ ಕಾರಣ ಒಂದೇ ದಿನ ಪ್ರಚಾರ ಮಾಡಿದ್ದಾರೆ. ಸೂಟ್‌ಕೇಸ್ ಪದ್ದತಿಯ ಬಗ್ಗೆ ನಾನು ಹೇಳ್ತಿಲ್ಲ, ದೇವೇಗೌಡ್ರ ಮೊಮ್ಮಗ ಸಂಸದ ಪ್ರಜ್ವಲ್ ಹೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ಕುಮಾರಸ್ವಾಮಿಯವರು ಬಹಳ ಮುಸ್ಲಿಂ ಜನರನ್ನ ಬಲಿ ತೆಗೆದುಕೊಂಡಿದ್ದಾರೆ. ತನ್ವೀರ್ ಶೇಠ್‌ರನ್ನ ಸೋಲಿಸಿದ್ದೇ ಕುಮಾರಸ್ವಾಮಿ. ಕುಮಾರಸ್ವಾಮಿಯವರ ಟಾರ್ಗೆಟ್ ಕೇವಲ ಅಲ್ಪಸಂಖ್ಯಾತರು. ಅಲ್ಪಸಂಖ್ಯಾತರನ್ನ ಮುಗಿಸಿದ್ದು ಸಿದ್ದರಾಮಯ್ಯ ಅಲ್ಲ ಕುಮಾರಸ್ವಾಮಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ನಾನು ಹಾನಗಲ್ ಉಪಚುನಾವಣೆಯ ಪ್ರಚಾರಕ್ಕಾಗಿ ಬಂದಿದ್ದೇನೆ. ಸಿಂಧಗಿಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಹಾನಗಲ್‌ನಲ್ಲಿ ಶ್ರೀನಿವಾಸ ಮಾನೆ ಒಳ್ಳೆಯ ಕೆಲಸ ಮಾಡಿದ್ದಾರೆ. ಶ್ರೀನಿವಾಸ ಮಾನೆ ಯಾರೂ ಮಾಡದ ಕೆಲಸ ಮಾಡಿದ್ದಾರೆ, ಅವರು ಜಯ ನಿಶ್ಚಿತ ಎಂದು ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಸಿಎಂ ಉದಾಸಿ ರೈಟ್ ಪರ್ಸನ್, ಇನ್ ರಾಂಗ್ ಪಾರ್ಟಿಯಲ್ಲಿದ್ದರು. ಬಿಜೆಪಿಯಿಂದ ಅವರ ಕುಟುಂಬಕ್ಕೆ ಟಿಕೇಟ್ ಕೊಡಬೇಕಾಗಿತ್ತು. ಉದಾಸಿ ಕುಟುಂಬಕ್ಕೆ ಟಿಕೇಟ್ ನೀಡದ ಕಾರಣಕ್ಕೆ ಅವರು ಸೋತು ಬಿಟ್ಟಿದ್ದಾರೆ. ಎರಡೂ ಉಪಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲ. ಬಸವಕಲ್ಯಾಣದಲ್ಲಿ ಜೆಡಿಎಸ್ ನೋಡಿ ಮತ ಹಾಕಿಲ್ಲ. ಅಲ್ಲಿನ ವ್ಯಕ್ತಿಯ ನೋಡಿ ಮತ ಹಾಕಿದ್ದಾರೆ. ಇದರಿಂದ ಅಲ್ಲಿ ಬಿಜೆಪಿ ಗೆಲ್ಲಲು ಸಹಾಯವಾಗಿದೆ ಎಂದಿದ್ದಾರೆ.