ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬಾಲಾಕೋಟ್ ಮೇಲಿನ ಏರ್‌ಸ್ಟ್ರೈಕ್‌ಗೆ (Balakote Airstrike) ಕುರಿತು ಮಾಹಿತಿ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಪ್ರದಾನಿ ನರೇಂದ್ರ ಮೋದ ಅವರು ಆಗ ನಡೆದಿದ್ದ ಏರ್ ಸ್ಟ್ರೈಕ್ ನ ವಿಚಾರ ಹೇಳಿದ್ದಾರೆ. ಮೋದಿ (PM Narendra Modi) ಪಾಕಿಸ್ತಾನಕ್ಕೆ ಕರೆ ಮಾಡಿದ ವಿಚಾರವನ್ನು ಮೊದಲ ಬಾರಿಗೆ ದೇಶದ ಜನರ ಮುಂದೆ ತಿಳಿಸಿದ್ದಾರೆ.
ಈ ಮೋದಿ ಎದೆ ಉಬ್ಬಸಿ, ಕಣ್ಣಲ್ಲಿ ಕಣ್ಣಿಟ್ಟು ನಿಲ್ಲುತ್ತಾನೆಯೇ ಹೊರತು ಹೇಡಿಗಳಂತೆ ಹಾಗೂ ವಿರೋಧಿಗಳಂತೆ ಹಿಂದಿನಿಂದ ಮಾಡುವುದಿಲ್ಲ. ನಾವು ಬಾಲಾಕೋಟ್ ಮೇಲೆ ಏರ್ ಸ್ಟ್ರೈಕ್ ಮಾಡಿದಾಗ ನಾನು ಪಾಕ್ ಗೆ (Pakistan) ಮೊದಲೇ ಸೂಚನೆ ನೀಡುತ್ತೇನೆ ಎಂದು ಹೇಳಿದ್ದೆ. ಆ ಸಮಯದಲ್ಲಿ ಪಾಕಿಸ್ತಾನದವರು ನನ್ನ ಪೋನ್ ಸ್ವೀಕರಿಸಲಿಲ್ಲ. ಕೊನೆಗೆ ರಾತ್ರಿ 12 ಗಂಟೆಗೆ ಅವರು ನನ್ನ ಫೋನ್ ರಿಸೀವ್ ಮಾಡಿದರು. ಆಗ ಏರ್ ಸ್ಟ್ರೈಕ್ ಬಗ್ಗೆ ತಿಳಿಸಿದೆ. ನಂತರ ಆ ವಿಷಯ ಇಡಿ ಜಗತ್ತಿಗೆ ಬಹಿರಂಗವಾಯಿತು ಎಂದು ಹೇಳಿದ್ದಾರೆ.
ಇನ್ನು ಮುಂದೆ ಯಾರಾದರೂ ನಮ್ಮ ಮೇಲೆ ದಾಳಿ ನಡೆಸಿದರೆ, ಈ ಹೊಸ ಭಾರತ ನಿಮ್ಮ ಮನೆಗೆ ನುಗ್ಗಿ ಹೊಡೆಯುತ್ತದೆ. ಯಾವುದಕ್ಕೂ ನಾವು ಹೆದರುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಾಗಲಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ್, ವಿಜಯಪುರದ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರ ಮತಯಾಚಿಸಿದರು.