ಬೆಂಗಳೂರಿನ ದೂರವಾಣಿ ನಗರದ ಐ.ಟಿ.ಐ ಸೆಂಟ್ರಲ್ ಶಾಲೆಯಲ್ಲಿ ಎನ್.ಸಿ.ಸಿ ಟ್ರೂಪ್ ನ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಮಕ್ಕಳಿಂದ ಕಾರ್ಗಿಲ್ ವಿಜಯದ 25 ವರ್ಷಗಳ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದೇಶಕ್ಕಾಗಿ ಪ್ರಾಣ ತೆತ್ತ ಅಮರರನ್ನು ನೆನೆಸಿಕೊಳ್ಳವ ಸಲುವಾಗಿ ಹಾಗೂ ಅವರ ಹೋರಾಟದ ಹಾದಿಯನ್ನು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಿಸಲಿಕ್ಕಾಗಿ ಎನ್.ಸಿ.ಸಿ. ಕೆಡೆಟ್ ಗಳಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕೆಡೆಟ್ ಗಳಿಂದ ವೀರ ಯೋಧರ ಭಾವಚಿತ್ರಗಳಿಗೆ ಪುಷ್ಪವರ್ಷ ಸಲ್ಲಿಸಿ ಪರೇಡ್ ನಡೆಸುವ ಮೂಲಕ ಕಾರ್ಯಕ್ರಮ ಆರಂಭಿಸಿ ಅಮರರ ಬಗ್ಗೆ ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ವಿವಿಧ ಅಣಕಗಳನ್ನು ವಾಚಿಸಲಾಯಿತು. ಹಾಡು ಮತ್ತು ನೃತ್ಯದ ಮೂಲಕ ನಮನಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪೊನ್ಮಲಾರ್, ಉಪಪ್ರಾಂಶುಪಾಲರಾದ ಶೈಲಜಾ ಆರಾಧ್ಯ, ಮುಖ್ಯಶಿಕ್ಷಕಿ ಅರುಣಾ ಜಾನಕಿರಾಮನ್, ಶಿಕ್ಷಕರು, ಸಿಬ್ಬಂದಿ ವರ್ಗ ಇದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ಎನ್.ಸಿ.ಸಿ. ಅಧಿಕಾರಿ ಬಾಲಕೃಷ್ಣ ವಿ.ಚ್. ವಹಿಸಿದ್ದರು.
1999 ರ “ಲಾಹೋರ್ ಶಾಂತಿ ಒಪ್ಪಂದ”ದ ಗುಂಗಿನಲ್ಲಿದ್ದ ಭಾರತಕ್ಕೆ ಪಾಕಿಸ್ತಾನದ ಸೈನಿಕರು ಕಾಶ್ಮೀರದ ದುರ್ಗಮ ಗಿರಿಶಿಖರಗಳಲ್ಲಿ ಅವಿತಿಟ್ಟುಕೊಂಡು ಕಾಶ್ಮೀರವನ್ನು ಕಬಳಿಸಲು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಲು ಭಾರತೀಯ ಸೈನ್ಯ ಮಾಡಿದ ದಿಟ್ಟ ಹೋರಾಟವೇ ಈ ಜುಲೈ 26ರ ಕಾರ್ಗಿಲ್ ವಿಜಯ್ ದಿವಸ್ ಆಗಿದೆ.







