ಮಸೀದಿಯಲ್ಲಿ ಬಂದೂಕು ದಾಳಿ – 18ಕ್ಕೂ ಹೆಚ್ಚು ಜನರ ಸಾವು.
ನೈಜೀರಿಯಾದ ಮಸೀದಿಯೊಂದರಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು ಕನಿಷ್ಟ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ವರೆದಿಯಾಗಿದೆ. ಸೋಮವಾರ ಮುಂಜಾನೆ ಪ್ರಾರ್ಥನಾ ಸಮಯದಲ್ಲಿ ಈ ಘಟನೆ ನಡೆದಿದೆ.
ನೈಜರ್ ರಾಜ್ಯದ ಮಶೆಗು ಸ್ಥಳೀಯ ಆಡಳಿತ ಪ್ರದೇಶದ ಮಜಕುಕಾ ಗ್ರಾಮದಲ್ಲಿ ಈ ದಾಳಿ ನಡೆದಿದೆ. ಗ್ರಾಮಸ್ಥರು ಮತ್ತು ಫುಲಾನಿ ಕುರಿಗಾಹಿಗಳ ನಡುವಿನ ಸಂಘರ್ಷ ಈ ದಾಳಿಗೆ ಕಾರಣವಾಗಿದೆ ಎಂದು ನೈಜರ್ ಪೊಲೀಸ್ ಕಮಿಷನರ್ ಕುರ್ಯಾಸ್ ಹೇಳಿದ್ದಾರೆ.
“ಬಂದೂಕುಧಾರಿಗಳು ಮಸೀದಿಯ ಸುತ್ತಲೂ ಬಂದು ಗುಂಡು ಹಾರಿಸಲು ಪ್ರಾರಂಭಿಸಿದರು” ಎಂದು ಸ್ಥಳೀಯ ಆಡಳಿತ ಪ್ರದೇಶದ ಅಧ್ಯಕ್ಷ ಅಲ್ಹಾಸನ್ ಇಸಾ ತಿಳಿಸಿದರು. ಇದೇ ರೀತಿಯ ಜನಾಂಗೀಯ ಹಿಂಸಾಚಾರ ಈ ವರ್ಷ ನೈಜೀರಿಯಾದ ನೂರಾರು ಪ್ರಜೆಗಳ ಸಾವಿಗೆ ಕಾರಣವಾಗಿದೆ.