ಎಕ್ಸ್ ಯು ವಿ ಕಾರು ಉಡುಗೊರೆಯಾಗಿ ಪಡೆದ ನೀರಜ್ ಚೋಪ್ರಾ
ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಮಹೀಂದ್ರಾ ಎಕ್ಸ್ ಯು ವಿ ಕಾರನ್ನ ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ..
ಟೋಕಿಯೋದಲ್ಲಿ ನಡೆದ ಒಲಂಪಿಕ್ ಜಾವೆಲಿನ್ ಎಸತದಲ್ಲಿ ನೀರಜ್ ಚಿನ್ನ ಗೆದ್ದಿದ್ದರು. ಆ ಸಮಯದಲ್ಲಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಮ್ಮ ಕಂಪನಿಯ SUV XUV700 ಕಾರನ್ನ ನೀರಜ್ ಚೋಪ್ರಾ ಅವರಿಗೆ ಉಡುಗೊರೆಯಾಗಿ ನೀಡುವ ಭರವಸೆಯನ್ನು ಕೊಟ್ಟಿದ್ದರು. ಅದರಂತೆ ಇಂದು ನೀರಜ್ ಚೋಪ್ರಾ ಅವರಿಗೆ ಕಸ್ಟಮೈಸ್ಡ್ ವಾಹನವನ್ನ ನೀಡಿ ಭರವಸೆಯನ್ನ ಉಳಿಸಿಕೊಂಡಿದ್ದಾರೆ.
ನೀರಜ್ ಚೋಪ್ರಾ ಅವರಿಗೆ ನೀಡಿರುವ ಗಾಡಿಯ ಮೇಲೆ 87.58 ಎನ್ನುವ ಸ್ಟಿಕ್ಕರ್ ಅನ್ನು ಸಹ ಅಂಟಿಸಲಾಗಿದೆ. ನೀರಜ್ ಚೋಪ್ರಾ ಅವರು ಒಲಂಪಿಕ್ ನಲ್ಲಿ 87.58 ದೂರದ ವರೆಗೆ ಜಾವೆಲಿನ್ ಎಸೆದಿದ್ದರು.
ನೀರಜ್ ಚೋಪ್ರಾ ಜೊತೆಗೆ ಪ್ಯಾರ ಒಲಂಪಿಕ್ ನಲ್ಲಿಯೂ ಭಾರತಕ್ಕೆ ಜಾವೆಲೆನ್ ಎಸೆತದಲ್ಲಿ ಪದಕವನ್ನ ತಂದುಕೊಟ್ಟಿದ್ದ ಸುಮಿತ್ ಆಂಟಿಲ್ ಅವರಿಗೂ ಸಹ ಕಾರನ್ನೂ ಉಡುಗೊರೆಯಾಗಿ ನೀಡಲಾಗಿದೆ.
‘ಧನ್ಯವಾದಗಳು ಅನಂದ್ ಮಹೀಂದ್ರ. ನನಗಾಗಿ ವಿಶೇಷ ಕಸ್ಟಮೈಸ್ಡ್ ಗಾಡಿಯನ್ನ ಕೊಟ್ಟಿದ್ದಕ್ಕೆ. ನಾನು ಶೀಘ್ರದಲ್ಲೆ ಕಾರನ್ನ ಹೊರತೆಗೆದು ತಿರುಗಾಡಲು ಹೋಗುತ್ತೆನೆ’ ಎಂದು ನೀರಜ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.
https://twitter.com/Neeraj_chopra1/status/1454443995753369606?ref_src=twsrc%5Etfw%7Ctwcamp%5Etweetembed%7Ctwterm%5E1454443995753369606%7Ctwgr%5E%7Ctwcon%5Es1_&ref_url=https%3A%2F%2Fwww.businesstoday.in%2Flatest%2Ftrends%2Fstory%2Fanand-mahindra-gifts-xuv700-to-neeraj-chopra-paralympics-gold-winner-sumit-antil-310939-2021-10-30








