ADVERTISEMENT
Friday, November 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮುಂಬೈ, ದೆಹಲಿಗಿಂತ ಮುಂದೆ: ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದ ಬೆಂಗಳೂರು

admin by admin
November 27, 2026
in Newsbeat, State, ರಾಜ್ಯ
bengaluru-tops-city-vitality-index-cvi-2026-q3-ahead-of-mumbai-delhi-economic-hub-india

bengaluru-tops-city-vitality-index-cvi-2026-q3-ahead-of-mumbai-delhi-economic-hub-india

Share on FacebookShare on TwitterShare on WhatsappShare on Telegram

ಬೆಂಗಳೂರು: ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಬೆಂಗಳೂರು ಮೊದಲ ಸ್ಥಾನದಲ್ಲೇ ಮುಂದುವರಿದಿದೆ ಎಂದು ಡನ್ ಆ್ಯಂಡ್ ಬ್ರಾಡ್‌ಸ್ಟ್ರೀಟ್ (ಡಿ&ಬಿ) ಮತ್ತು ಮಾಸ್ಟರ್‌ಕಾರ್ಡ್ ಜಂಟಿಯಾಗಿ ಬಿಡುಗಡೆ ಮಾಡಿರುವ 2026ರ ಮೂರನೇ ತ್ರೈಮಾಸಿಕದ ‘ಸಿಟಿ ವೈಟಾಲಿಟಿ ಇಂಡೆಕ್ಸ್’ (ಸಿವಿಐ) ವರದಿ ತಿಳಿಸಿದೆ.

ನೂತನ ಪಟ್ಟಿಯಲ್ಲಿ ಬೆಂಗಳೂರಿನ ನಂತರ ಮುಂಬೈ, ದೆಹಲಿ, ಚೆನ್ನೈ ಮತ್ತು ಗುರುಗ್ರಾಮ್ ನಗರಗಳು ಸ್ಥಾನ ಪಡೆದಿವೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ, ಈ ಬಾರಿ ಮುಂಬೈನ ಸಿ.ವಿ.ಐ ಅಂಕ 123ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

Related posts

r-ashoka-slams-congress-govt-over-486-crore-pending-milk-incentive-to-dairy-farmers-karnataka

ಹಾಲಿನ ದರ ಏರಿಸಿದರೂ ಹೈನುಗಾರರಿಗೆ ಪ್ರೋತ್ಸಾಹಧನ ನೀಡಿಲ್ಲ: ₹486 ಕೋಟಿ ಬಾಕಿ ಉಳಿಸಿಕೊಂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

November 27, 2026
rohit-sharma-returns-as-mumbai-indians-captain-for-ipl-20th-season-nita-ambani-akash-ambani

ಮುಂಬೈ ಇಂಡಿಯನ್ಸ್ಗೆ ಮತ್ತೆ ರೋಹಿತ್ ಶರ್ಮಾ ನಾಯಕ

November 27, 2026

ಸಣ್ಣ ನಗರಗಳಲ್ಲೂ ಬೆಳವಣಿಗೆ; ತಮಿಳುನಾಡು ನಂ. 1

ರಾಜ್ಯ ಮಟ್ಟದ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದು, ದೆಹಲಿ ಮತ್ತು ಮಹಾರಾಷ್ಟ್ರ ನಂತರದ ಸ್ಥಾನಗಳಲ್ಲಿವೆ. ಈ ರಾಜ್ಯಗಳ ಆರ್ಥಿಕ ವ್ಯವಸ್ಥೆ ಎಷ್ಟು ಬಲವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ವರದಿ ಉಲ್ಲೇಖಿಸಿದೆ.

ಮತ್ತೊಂದೆಡೆ, ದೊಡ್ಡ ಮೆಟ್ರೋ ನಗರಗಳ ಹೊರತಾಗಿಯೂ ಅಲ್ಮೋರಾ, ಸಹಿಬ್ಜಾದ ಅಜಿತ್‌ ಸಿಂಗ್‌ ನಗರ (ಮೊಹಾಲಿ), ಶ್ರೀನಗರ, ಜಮ್ಮು ಮತ್ತು ಮಹಬೂಬಾಬಾದ್‌ನಂತಹ ನಗರಗಳು ಆರ್ಥಿಕ ಬೆಳವಣಿಗೆಯಲ್ಲಿ ಉತ್ತಮ ಪ್ರಗತಿ ದಾಖಲಿಸಿವೆ. ಮುಂದಿನ ಆರ್ಥಿಕ ಅವಕಾಶಗಳು ಕೇವಲ ದೊಡ್ಡ ಮೆಟ್ರೋಗಳಿಂದಲೇ ಬರಬೇಕಿಲ್ಲ ಎಂಬುದನ್ನು ಇದು ತೋರಿಸಿದೆ.

ಆದಾಗ್ಯೂ, ದೇಶದ ಹಲವು ಭಾಗಗಳಿಗೆ ಆರ್ಥಿಕ ಚಟುವಟಿಕೆ ಹರಡುತ್ತಿದ್ದರೂ, ಮೆಟ್ರೋ ಮತ್ತು ಮೆಟ್ರೋಯೇತರ ಪ್ರದೇಶಗಳ ನಡುವೆ ಇನ್ನೂ 260 ಅಂಕಗಳಷ್ಟು ಆರ್ಥಿಕ ಅಂತರವಿರುವುದು ಸೂಚ್ಯಂಕದಲ್ಲಿ ದಾಖಲಾಗಿದೆ.

ಪಿನ್‌ಕೋಡ್ ಮಟ್ಟದಲ್ಲೇ ಆರ್ಥಿಕತೆ ಅಳತೆ

ಡನ್ ಆ್ಯಂಡ್ ಬ್ರಾಡ್‌ಸ್ಟ್ರೀಟ್ ಮತ್ತು ಮಾಸ್ಟರ್‌ಕಾರ್ಡ್ ಸಂಸ್ಥೆಗಳು ತಮ್ಮ ಸಿ.ವಿ.ಐ ಸೂಚ್ಯಂಕವನ್ನು ಸುಧಾರಿಸಿ ಬಿಡುಗಡೆ ಮಾಡಿವೆ. ದೇಶದ 750ಕ್ಕೂ ಹೆಚ್ಚು ಜಿಲ್ಲೆಗಳು ಮತ್ತು 18,000ಕ್ಕೂ ಅಧಿಕ ಪಿನ್‌ಕೋಡ್‌ಗಳಲ್ಲಿ ನಡೆಯುತ್ತಿರುವ ಆರ್ಥಿಕ ಚಟುವಟಿಕೆಗಳನ್ನು ಈ ಸೂಚ್ಯಂಕವು ಪರಿಶೀಲಿಸಿದೆ.

ಡನ್ ಆ್ಯಂಡ್ ಬ್ರಾಡ್‌ಸ್ಟ್ರೀಟ್‌ನ ಉದ್ಯಮ ಮಾಹಿತಿ ಹಾಗೂ ಮಾಸ್ಟರ್‌ಕಾರ್ಡ್‌ನ ಒಟ್ಟುಗೂಡಿಸಿದ, ಯಾರ ಗುರುತನ್ನೂ ಬಹಿರಂಗಪಡಿಸದ ವಹಿವಾಟಿನ ಮಾಹಿತಿಯನ್ನು ಇದರಲ್ಲಿ ಬಳಸಲಾಗಿದೆ. ವಿಶಾಲ ಉದ್ಯಮ ವಲಯಗಳು ಮತ್ತು ವಿವರವಾದ ಉಪ-ವಲಯಗಳ ಮಾಹಿತಿಯ ಜೊತೆಗೆ, ಗ್ರಾಹಕರ ಖರ್ಚಿನ ವಿಭಾಗಗಳ ವಿವರವನ್ನೂ ಇದು ಒಳಗೊಂಡಿದೆ.

ರಾಷ್ಟ್ರ, ರಾಜ್ಯ ಹಾಗೂ ನಗರಗಳ ಒಟ್ಟಾರೆ ಸರಾಸರಿಗಳಿಗಿಂತ ಆಳಕೆಕ ಇಳಿದು ನೋಡಿದಾಗ ಸ್ಥಳೀಯ ಮಟ್ಟದ ಬೇಡಿಕೆ, ಜನರ ಖರ್ಚಿನ ಬದಲಾವಣೆ ಮತ್ತು ವ್ಯಾಪಾರದ ಅಪಾಯಗಳನ್ನು ಮೊದಲೇ ಗುರುತಿಸಲು ಇದು ಸಹಾಯ ಮಾಡಲಿದೆ. ಮಾರುಕಟ್ಟೆ ವಿಸ್ತರಣೆ, ಪೂರೈಕೆ, ಮಾರಾಟ, ಹೂಡಿಕೆ ಹಾಗೂ ಸಾಲ ನೀಡಿಕೆಯಂತಹ ವಿಷಯಗಳಲ್ಲಿ ಕಂಪನಿಗಳು ನಿರ್ಧಾರ ತೆಗೆದುಕೊಳ್ಳಲು ಇದು ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡನ್ ಆ್ಯಂಡ್ ಬ್ರಾಡ್‌ಸ್ಟ್ರೀಟ್ ಇಂಡಿಯಾದ ಮುಖ್ಯ ಆರ್ಥಿಕ ತಜ್ಞ ಅರುಣ್ ಸಿಂಗ್, “ಭಾರತದ ಆರ್ಥಿಕತೆ ಬೆಳೆಯುತ್ತಿದೆಯೇ ಎಂಬುದಷ್ಟೇ ಈಗ ಮುಖ್ಯ ಪ್ರಶ್ನೆಯಲ್ಲ. ಬದಲಾಗಿ ಆ ಬೆಳವಣಿಗೆ ಎಲ್ಲಿ ಕಾಣಿಸಿಕೊಳ್ಳುತ್ತಿದೆ, ಯಾವ ವಲಯಗಳು ಅದಕ್ಕೆ ಕಾರಣವಾಗುತ್ತಿವೆ ಮತ್ತು ಆ ವೇಗ ಎಷ್ಟು ಬೇಗ ಬದಲಾಗುತ್ತಿದೆ ಎಂಬುದು ಮುಖ್ಯ. ಬದಲಾವಣೆ ಎಲ್ಲರಿಗೂ ಕಾಣಿಸುವ ಮೊದಲೇ, ಜಿಲ್ಲೆ ಮತ್ತು ಪಿನ್‌ಕೋಡ್ ಮಟ್ಟದಲ್ಲಿ ಅದನ್ನು ಗುರುತಿಸಲು ಈ ಸೂಚ್ಯಂಕ ಸಹಕಾರಿಯಾಗಲಿದೆ,” ಎಂದು ಹೇಳಿದ್ದಾರೆ.

“ಸಂಕೀರ್ಣ ಮಾರುಕಟ್ಟೆ ಸಂಕೇತಗಳನ್ನು ಎಷ್ಟು ವೇಗವಾಗಿ ಕಾರ್ಯರೂಪಕ್ಕೆ ತರಲಾಗುತ್ತದೆ ಎಂಬುದರ ಮೇಲೆ ಉದ್ಯಮದ ಅವಕಾಶಗಳು ನಿಂತಿರುತ್ತವೆ. ಗ್ರಾಹಕರು ಮತ್ತು ಉದ್ಯಮಗಳ ಟ್ರೆಂಡ್‌ಗಳ ಸ್ಪಷ್ಟ ಚಿತ್ರಣ ಸಿಗುವುದರಿಂದ ಕಂಪನಿಗಳು ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿ ದೀರ್ಘಕಾಲದ ಬೆಳವಣಿಗೆಗೆ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ,” ಎಂದು ಮಾಸ್ಟರ್‌ಕಾರ್ಡ್‌ನ ದಕ್ಷಿಣ ಏಷ್ಯಾ ಸಲಹಾ ಸೇವೆಗಳ ಹಿರಿಯ ಉಪಾಧ್ಯಕ್ಷೆ ರಶ್ಮಿ ಘೋಷ್ ತಿಳಿಸಿದ್ದಾರೆ.

ShareTweetSendShare
Join us on:

Related Posts

r-ashoka-slams-congress-govt-over-486-crore-pending-milk-incentive-to-dairy-farmers-karnataka

ಹಾಲಿನ ದರ ಏರಿಸಿದರೂ ಹೈನುಗಾರರಿಗೆ ಪ್ರೋತ್ಸಾಹಧನ ನೀಡಿಲ್ಲ: ₹486 ಕೋಟಿ ಬಾಕಿ ಉಳಿಸಿಕೊಂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

by admin
November 27, 2026
0

ಗ್ರಾಹಕರ ಜೇಬಿಗೆ ಕತ್ತರಿ, ಹೈನುಗಾರರಿಗೆ ಅನ್ಯಾಯ; 28.84 ಲಕ್ಷ ಹಾಲು ಉತ್ಪಾದಕರಿಗೆ ಕಳೆದ ಆಗಸ್ಟ್‌ನಿಂದ ಪ್ರೋತ್ಸಾಹಧನ ಬಿಡುಗಡೆ ಮಾಡದ ಸರ್ಕಾರ ಬೆಂಗಳೂರು: ಹಾಲಿನ ಮಾರಾಟ ದರವನ್ನು ಹೆಚ್ಚಿಸಿ ಗ್ರಾಹಕರ...

rohit-sharma-returns-as-mumbai-indians-captain-for-ipl-20th-season-nita-ambani-akash-ambani

ಮುಂಬೈ ಇಂಡಿಯನ್ಸ್ಗೆ ಮತ್ತೆ ರೋಹಿತ್ ಶರ್ಮಾ ನಾಯಕ

by admin
November 27, 2026
0

ಮುಂಬೈ,: ಮುಂದಿನ ವರ್ಷದ ಐಪಿಎಲ್ (IPL) 20ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಮತ್ತೆ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡ ಶುಕ್ರವಾರ ಘೋಷಿಸಿದೆ. ಫ್ರಾಂಚೈಸಿಯು ತನ್ನ...

gajakesari-yoga-guru-pushya-yoga-benefits-adhika-masa-born-personality-horoscope-kannada

ಗಜಕೇಸರಿ ಯೋಗ ಮತ್ತೆ ಪುಷ್ಕರ ಯೋಗ ಯಾವ ಯಾವ ರಾಶಿಗಳಿಗೆ  ಫಲಿಸಲಿದೆ? 

by admin
November 27, 2026
0

ಗಜಕೇಸರಿ ಯೋಗ ಮತ್ತೆ ಪುಷ್ಕರ ಯೋಗ ಯಾವ ಯಾವ ರಾಶಿಗಳಿಗೆ  ಫಲಿಸಲಿದೆ? ಖಂಡಿತ. ನೋಡಿ ಯಾವುದೇ ಒಂದು ಯೋಗಗಳು ಸೃಷ್ಟಿ ಆಗ್ಬೇಕಾದ್ರೆ ಒಂದು ಗ್ರಹದ ಜೊತೆ ಇನ್ನೊಂದು...

ಸಿಎಂ ರೇಸ್‌ನಲ್ಲಿ ಯೋಗಿ ಆದಿತ್ಯನಾಥ್ ಫೇವರಿಟ್: ಅಖಿಲೇಶ್ ಯಾದವ್‌ಗೆ ಎರಡನೇ ಸ್ಥಾನ, ಕೇವಲ 1 ಸೀಟಿಗೆ ಕುಸಿಯಲಿದೆಯೇ ಬಿಎಸ್‌ಪಿ?

ಸಿಎಂ ರೇಸ್‌ನಲ್ಲಿ ಯೋಗಿ ಆದಿತ್ಯನಾಥ್ ಫೇವರಿಟ್: ಅಖಿಲೇಶ್ ಯಾದವ್‌ಗೆ ಎರಡನೇ ಸ್ಥಾನ, ಕೇವಲ 1 ಸೀಟಿಗೆ ಕುಸಿಯಲಿದೆಯೇ ಬಿಎಸ್‌ಪಿ?

by Shwetha
November 27, 2026
0

ಲಕ್ನೋ: ದೇಶದ ರಾಜಕೀಯ ದಿಕ್ಸೂಚಿ ಎಂದೇ ಗುರುತಿಸಲ್ಪಡುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವಂತಹ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೊರಬಿದ್ದಿದೆ....

ಸೌಜನ್ಯ ಪ್ರಕರಣ: SIT ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ

ಸೌಜನ್ಯ ಪ್ರಕರಣ: SIT ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ

by Shwetha
November 27, 2026
0

ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಇಂದು ಮಂಗಳೂರಿನ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸುವಂತೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram