ಕಂಠೀರವ ಸ್ಟುಡಿಯೋದತ್ತ ಅಪ್ಪು ಅಭಿಮಾನಿಗಳ ದಂಡು
ಬೆಂಗಳೂರು : ಅಪ್ಪು ಸಮಾಧಿ ಬಳಿಗೆ ಇನ್ನೂ ಎರಡು ದಿನಗಳ ಕಾಲ ಅವಕಾಶ ಇಲ್ಲ ಎಂದು ಗೊತ್ತಿದ್ದರೂ ಪುನೀತ್ ಅಭಿಮಾನಿಗಳು ಕಂಠೀರವ ಸ್ಟುಡಿಯೋಯತ್ತ ಆಗಮಿಸುತ್ತಿದ್ದಾರೆ.
ಅಪ್ಪು ಸಮಾಧಿಯನ್ನ ನೋಡಲು ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳ ದಂಡು ಬರುತ್ತಿದೆ.
ಅಪ್ಪುಗೆ ರಾಜ್ ಕುಟುಂಬದಿಂದ ಇಂದು ಹಾಲು-ತುಪ್ಪ ವಿಧಿವಿಧಾನ ಕಾರ್ಯ ನಡೆಯುತ್ತಿದೆ.
ಹೀಗಾಗಿ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಮಾಧಿ ಬಳಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಬರುವ ಸಾಧ್ಯತೆ ಇರುವುದರಿಂದ ಭದ್ರತೆ ನಿಟ್ಟಿನಲ್ಲಿ ಆರ್.ಎ.ಎಫ್, ಕೆ.ಎಸ್.ಆರ್.ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಕಂಠೀರವ ಸ್ಟುಡಿಯೋ ಬಳಿ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆ ಒದಗಿಸಲಾಗಿದೆ.
ಇನ್ನು ಹಾಲು ತುಪ್ಪ ಕಾರ್ಯದಲ್ಲಿ ರಾಜ್ ಕುಟುಂಬಸ್ಥರು ಮತ್ತು ಕುಟುಂಬದ ಆಪ್ತರು ಭಾಗಿಯಾಗಿದ್ದಾರೆ.









