ADVERTISEMENT
Friday, July 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

fifaworldcup -ಕ್ರೀಡಾಪತ್ರಕರ್ತ ಬಿತ್ತಿದ್ದ ಫಿಫಾ ಬೀಜ..! ಫಿಫಾ ವಿಶ್ವಕಪ್ ಟ್ರೋಫಿಯ ಮೂಲಕ ಹೆಮ್ಮರವಾಗಿ ಬೆಳೆಸಿದ್ದ ವಕೀಲ..! ಫುಟ್‍ಬಾಲ್ ಕ್ರೀಡೆಯ ಇತಿಹಾಸವನ್ನೇ ಬದಲಾಯಿಸಿದ್ದ #229ರ ರೋಚಕ ಕಥೆ..!

admin by admin
July 17, 2026
in Newsbeat, Sports, ಕ್ರೀಡೆ
fifa world cup trophy

fifa world cup trophy

Share on FacebookShare on TwitterShare on WhatsappShare on Telegram

Related posts

ಸ್ವಚ್ಛ ಬೆಂಗಳೂರು ಎಂಬುದು ಕೇವಲ ಘೋಷಣೆಯೇ?ಅಭಿವೃದ್ಧಿಯ ಮಂತ್ರ ಜಪಿಸುವ ಅಧಿಕಾರಿಗಳೇ, ಈ ಕಸದ ರಾಶಿಯೇ ನಿಮ್ಮ ಸಾಧನೆಯೇ? 500 ಕುಟುಂಬಗಳ ಉಸಿರು ಕಟ್ಟುತ್ತಿದೆ ಈ ಡಂಪಿಂಗ್ ಯಾರ್ಡ್!ಹೆಮ್ಮಿಗೆಪುರ ನಿವಾಸಿಗಳ ಕಣ್ಣೀರಿನ ಕಥೆ

ಸ್ವಚ್ಛ ಬೆಂಗಳೂರು ಎಂಬುದು ಕೇವಲ ಘೋಷಣೆಯೇ?ಅಭಿವೃದ್ಧಿಯ ಮಂತ್ರ ಜಪಿಸುವ ಅಧಿಕಾರಿಗಳೇ, ಈ ಕಸದ ರಾಶಿಯೇ ನಿಮ್ಮ ಸಾಧನೆಯೇ? 500 ಕುಟುಂಬಗಳ ಉಸಿರು ಕಟ್ಟುತ್ತಿದೆ ಈ ಡಂಪಿಂಗ್ ಯಾರ್ಡ್!ಹೆಮ್ಮಿಗೆಪುರ ನಿವಾಸಿಗಳ ಕಣ್ಣೀರಿನ ಕಥೆ

July 17, 2026
ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಹಣ ಬಂದಿದೆಯೇ ಮನೆಯಲ್ಲೇ ಕುಳಿತು ಚೆಕ್ ಮಾಡಲು ಹೀಗೆ ಮಾಡಿ ಸಾಕು

ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಹಣ ಬಂದಿದೆಯೇ ಮನೆಯಲ್ಲೇ ಕುಳಿತು ಚೆಕ್ ಮಾಡಲು ಹೀಗೆ ಮಾಡಿ ಸಾಕು

July 17, 2026

 

fifa founders meeting
fifa founders first meeting

# 229…!

ಇದು ಪ್ಯಾರಿಸ್ ನಗರದ ಐತಿಹಾಸಿಕ ರೂ ಸೇಂಟ್ – ಹೋನೋರೆ ರಸ್ತೆಯಲ್ಲಿರುವ ಹೆಸರಿಲ್ಲದ ಹಳೆಯ ಕಟ್ಟಡದ ಡೋರ್ ನಂಬರ್.
ಫ್ರಾನ್ಸ್ ಕ್ರೀಡಾ ಒಕ್ಕೂಟದ ಅಧಿಕೃತ ವಿಳಾಸ.

ಅದು ಮೇ 21. 1904.

ರೂ ಸೇಂಟ್ – ಹೋನೋರೆ ರಸ್ತೆ ಅಂದ್ರೆ ಪ್ಯಾರಿಸ್‍ನ ಹೃದಯ ಭಾಗ. ಪ್ರತಿ ದಿನ ಜನ ಜಂಗುಳಿಯದ್ದೇ ಸದ್ದು ಗದ್ದಲ. ಅದೇ ರೀತಿ ಡೋರ್ ನಂಬರ್ 229ರ ಸಣ್ಣ ಕಚೇರಿಯಲ್ಲೂ ದಿನಪೂರ್ತಿ ಕ್ರೀಡಾಚಟುವಟಿಕೆಗಳಿಂದ ಗಿಜುಗುಡುತ್ತಿತ್ತು. ಆದ್ರೆ ಆ ದಿನ ಅಲ್ಲಿ ಯಾವ ಅಧಿಕಾರಿಗಳು ಇರಲಿಲ್ಲ. ಕ್ರೀಡಾಪಟುಗಳು ಇರಲಿಲ್ಲ.

ಬದಲಾಗಿ ಅಲ್ಲಿದ್ದದ್ದು ಜಗತ್ತಿನ ಕ್ರೀಡಾ ಇತಿಹಾಸವನ್ನು ಬದಲಾಯಿಸಲು ಹೊರಟ್ಟಿದ್ದ ಏಳು ದೇಶದ ಕ್ರಾಂತಿಕಾರಿ ಪ್ರತಿನಿಧಿಗಳು. ಮಹತ್ವದ ಸಭೆಯಲ್ಲಿ ಏಳು ಮಂದಿ ಕೂಡ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು. ನಂತರ ತೆಗೆದುಕೊಂಡಿದ್ದು ಒಕ್ಕೊರಳ ಧ್ವನಿಯ ಒಂದು ಐತಿಹಾಸಿಕ ನಿರ್ಧಾರವನ್ನು.

ಸಭೆಯ ಬಳಿಕ ಫ್ರಾನ್ಸ್ ಪ್ರತಿನಿಧಿ ಹೇಳಿದ್ದು ಹೀಗೆ…

“ಇನ್ನು ಮುಂದೆ ಫುಟ್‍ಬಾಲ್ ಆಟ ನಮ್ದು..! ಮೈದಾನವೂ ನಮ್ದೆ..! ರೂಲ್ಸ್ ನಮ್ದೆ..! ನಮ್ಮನ್ನು ಕಡೆಗಣಿಸಿದವರಿಗೆ ಉತ್ತರ ಕಾಲ್ಚೆಂಡಿನ ಆಟವೇ ನೀಡುತ್ತದೆ” ಅಂದಾಗ ಆರು ದೇಶಗಳ ಪ್ರತಿನಿಧಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ರು.

ಫ್ರಾನ್ಸ್ ಪ್ರತಿನಿಧಿ ಹೆಮ್ಮೆಯಿಂದ ಬೀಗುತ್ತಾ ತನ್ನ ಕನಸಿನ ಜಾಗತಿಕ ಫುಟ್‍ಬಾಲ್ ಸಂಸ್ಥೆಯ ಹೆಸರನ್ನು ಘೋಷಣೆ ಮಾಡಿದ್ದರು.

ಫಿಫಾ..!
ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಫುಟ್‍ಬಾಲ್ ಅಸೋಸಿಯೇಷನ್.

robert guerin fifa founder
robert guerin fifa founder

ಕ್ರೀಡಾಪತ್ರಕರ್ತನ ಮನದಲ್ಲಿ ಮೂಡಿದ್ದ ಫಿಫಾ ಕನಸು..!

ಅಂದ ಹಾಗೇ 122 ವರ್ಷಗಳ ಹಿಂದೆ ಐತಿಹಾಸಿಕ ತೀರ್ಮಾನ ಮತ್ತು ಘೋಷಣೆ ಮಾಡಿದ್ದ ವ್ಯಕ್ತಿ ಕೇವಲ ಫ್ರಾನ್ಸ್ ಪ್ರತಿನಿಧಿಯಾಗಿರಲಿಲ್ಲ. ಫುಟ್‍ಬಾಲ್ ಆಟವನ್ನು ಮನಸಾರೆ ಪ್ರೀತಿಸಿ ಬರೆಯುತ್ತಿದ್ದ ಒಬ್ಬ ಕ್ರೀಡಾಪತ್ರಕರ್ತನಾಗಿದ್ದರು. (ಬಳಿಕ ಕ್ರೀಡಾ ಸಂಪಾದಕನಾಗಿದ್ದರು)

ಆಗಿನ ಕಾಲದಲ್ಲಿ ಫುಟ್‍ಬಾಲ್ ಆಟಕ್ಕೆ ಸರಿಯಾದ ನೀತಿ ನಿಯಮಗಳು ಇರಲಿಲ್ಲ. ಬ್ರಿಟಿಷರು ಹೇಳಿದ್ದೇ ರೂಲ್ಸ್. ದುಡ್ಡು ಇದ್ದವರು ಮಾತ್ರ ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡುತ್ತಿದ್ದರು. ಬಡ ಹಾಗೂ ವೃತ್ತಿಪರ ಆಟಗಾರರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿತ್ತು. ಕೇವಲ ಹವ್ಯಾಸಿ ಆಟಗಾರರಿಗೆ ಮಾತ್ರ ಅವಕಾಶ ಸಿಗುತ್ತಿತ್ತು. ಒಲಿಂಪಿಕ್ಸ್‍ನ ಆರಂಭದ ಕಾಲಘಟ್ಟದಲ್ಲಿ ಫುಟ್‍ಬಾಲ್ ಆಟವನ್ನು ಬರೀ ಪ್ರದರ್ಶನ ಕ್ರೀಡೆಯಾಗಿ ಆಡಿಸಲಾಗುತ್ತಿತ್ತು..

ಕಣ್ಣೇದುರೇ ನಡೆಯುತ್ತಿದ್ದ ಅನ್ಯಾಯಗಳ ಬಗ್ಗೆ ಒಬ್ಬ ಕ್ರೀಡಾಪತ್ರಕರ್ತನಾಗಿ ತನ್ನ ಲೇಖನಿಯ ಮೂಲಕ ಖಂಡಿಸುತ್ತಿದ್ದರು. ಬ್ರಿಟಿಷರ ದರ್ಪ, ಹಠಮಾರಿ ಧೋರಣೆ ಬಗ್ಗೆ ಗಟ್ಟಿ ಧ್ವನಿಯಲ್ಲಿ ಟೀಕಿಸುತ್ತಿದ್ದರು.

ಅಂದು ಕ್ರಾಂತಿಯ ಕಿಡಿ.. ಇಂದು ಫುಟ್‍ಬಾಲ್ ಆಟವನ್ನು ಬೆಳಗಿಸುವ ನಂದಾದೀಪ..!

ಯಾಕಂದ್ರೆ ಫುಟ್‍ಬಾಲ್ ಆಟದ ಮುಂದಿನ ಭವಿಷ್ಯ ಏನು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಫುಟ್‍ಬಾಲ್ ಅಂದ್ರೆ ಬರೀ ಒಂದು ದೇಶಕ್ಕೆ ಸೀಮಿತವಾಗಬಾರದು. ದೇಶ ದೇಶಗಳ ನಡುವೆ ಕೊಂಡಿಯಾಗಬೇಕು. ಇಡೀ ಬ್ರಹ್ಮಾಂಡವನ್ನು ಒಟ್ಟುಗೂಡಿಸುವ ಜಾಗತಿಕ ವೇದಿಕೆಯಾಗಬೇಕು. ಮನಸು ಮಾಡಿದ್ರೆ ಯಾವುದು ಅಸಾಧ್ಯವಲ್ಲ ಎಂಬ ಅಚಲ ನಂಬಿಕೆ ಅವರದ್ದಾಗಿತ್ತು.

ಹೀಗೆ ತನ್ನ ದೂರದೃಷ್ಟಿಯ ಫಿಫಾ ಯೋಜನೆಯನ್ನು ಫ್ರಾನ್ಸ್ ನ ಫುಟ್‍ಬಾಲ್ ಅಧಿಕಾರಿಗಳ ಮುಂದೆ ಮಂಡಿಸಿದ್ರು. ನಂತರ ಯೂರೋಪ್‍ನ ದೇಶಗಳಿಗೂ ಪ್ರಸ್ತಾವನೆಯನ್ನು ಕಳುಹಿಸಿದ್ರು. ಈ ಪ್ರಸ್ತಾಪಕ್ಕೆ ಬ್ರಿಟನ್ ಸಹಮತ ಸೂಚಿಸಲಿಲ್ಲ. ಅಸಡ್ಡೆಯಿಂದಲೇ ಕಡೆಗಣಿಸಿತ್ತು. ಆಗಲೇ ಬ್ರಿಟಿಷರ ಗರ್ವಭಂಗ ಮಾಡಲೇಬೇಕು ಎಂದು ಕ್ರೀಡಾಪತ್ರಕರ್ತ ಹಠಕ್ಕೆ ಬಿದ್ದಿದ್ದರು.

ಹಲವು ದೇಶಗಳ ಫುಟ್‍ಬಾಲ್ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ರೂ ಯಾರು ಮುಂದೆ ಬರಲಿಲ್ಲ. ಕೊನೆಗೆ ಏಳು ದೇಶದ ಫುಟ್‍ಬಾಲ್ ಸಂಸ್ಥೆಗಳ ಪ್ರತಿನಿಧಿಗಳು ಈ ಕ್ರೀಡಾಪತ್ರಕರ್ತನ ಕನಸನ್ನು ಸಾಕಾರಗೊಳ್ಳುವಂತೆ ಮಾಡಿದ್ದರು.

# 229ರ ಕಟ್ಟಡದ ಕೊಠಡಿಯಲ್ಲಿ ಸ್ಫೋಟಗೊಂಡ ಒಂದು ಸಣ್ಣ ಕ್ರಾಂತಿಯ ಕಿಡಿ, ಇಂದು ಜಾಗತಿಕ ಮಟ್ಟದಲ್ಲಿ ಫುಟ್‍ಬಾಲ್ ಆಟವನ್ನು ಬೆಳಗಿಸುವ ನಂದಾದೀಪವಾಗಿದೆ.

ಕ್ರೀಡಾಪತ್ರಕರ್ತನೇ ಫಿಫಾ ಸೃಷ್ಟಿಕರ್ತ..!

ಅಂದ ಹಾಗೇ, ಬ್ರಿಟಿಷರ ಅಹಂಕಾರವನ್ನು ಕುಗ್ಗಿಸಿ ಫಿಫಾ ಸಂಸ್ಥೆಗೆ ಭದ್ರ ಅಡಿಪಾಯ ಹಾಕಿಕೊಟ್ಟ ಫ್ರಾನ್ಸ್‍ನ ಆ ಕ್ರೀಡಾ ಪತ್ರಕರ್ತನ ಹೆಸರು

ರಾಬರ್ಟ್ ಗ್ವೆರಿನ್.

ಫ್ರಾನ್ಸ್ ನ  ಪ್ರಮುಖ ದಿನಪತ್ರಿಕೆಯಾಗಿದ್ದ ಲೇ ಮ್ಯಾಟಿನ್ ಪ್ರತಿಕೆಯ ಕ್ರೀಡಾ ಪತ್ರಕರ್ತರು/ ಕ್ರೀಡಾ ಸಂಪಾದಕರು.

ಫಿಫಾ ಕ್ರಾಂತಿಗೆ ಜೊತೆಯಾದ ದೇಶಗಳು, ಬೆಲ್ಜಿಯಂ, ಡೆನ್ಮಾರ್ಕ್, ನೆದರ್ಲೆಂಡ್, ಸ್ಪೇನ್, ಸ್ವೀಡನ್ ಮತ್ತು ಸ್ವಿಜರ್‍ಲೆಂಡ್.

ಕ್ರೀಡಾ ಪತ್ರಕರ್ತನೇ ಫಿಫಾದ ಮೊದಲ ಅಧ್ಯಕ್ಷರು..!

ಏಳು ದೇಶಗಳ ಪ್ರತಿನಿಧಿಗಳೊಂದಿಗೆ ಶುರುವಾದ ಫಿಫಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ರಾಬರ್ಟ್ ಗ್ವೆರಿನ್ ಅವಿರೋಧವಾಗಿ ಆಯ್ಕೆಯಾಗಿದ್ದರು.

ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರಾಬರ್ಟ್ ಗ್ವೆರಿನ್, ಸಂವಿಧಾನದ ಕಾನೂನುಗಳಂತೆ ಫಿಫಾದ ನೀತಿ, ನಿಯಮಗಳನ್ನು ರಚಿಸಿ ಸಂಸ್ಥೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದರು.

ಈ ನಡುವೆ ಹಿಡಿತ ಕೈತಪ್ಪುವ ಆತಂಕದಲ್ಲಿದ್ದ ಇಂಗ್ಲೆಂಡ್ ಕೂಡ 1905ರಲ್ಲಿ ಫಿಫಾ ಜೊತೆ ಸೇರಿಕೊಂಡಿತ್ತು. ಆದ್ರೆ ಫಿಫಾ ಆಡಳಿತ ಮತ್ತು ನೀತಿ, ನಿಯಮಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ರಾಬರ್ಟ್ ಅವರಿಗೆ ಕಿರಿಕಿರಿಯನ್ನುಂಟು ಮಾಡುತ್ತಿತ್ತು.

ಇನ್ನೊಂದೆಡೆ, ರಾಬರ್ಟ್ ಗ್ವೆರಿನ್ ಫಿಫಾ ಅಧ್ಯಕ್ಷರಾಗಿದ್ರೂ ಪತ್ರಿಕಾ ವೃತ್ತಿಯನ್ನು ಮಾತ್ರ ಕೈಬಿಟ್ಟಿರಲಿಲ್ಲ. ಹೀಗಾಗಿ ಹೆಚ್ಚಿನ ಸಮಯವನ್ನು ಫಿಫಾ ಬೆಳವಣಿಗೆಗೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಹಾಗೇ ಫ್ರಾನ್ಸ್ ಕ್ರೀಡಾ ಒಕ್ಕೂಟಗಳು ಕೂಡ ಸಹಕಾರ ನೀಡುತ್ತಿರಲಿಲ್ಲ. ಪ್ರತಿಷ್ಠಿತ ಫಿಫಾ ಟೂರ್ನಿಯನ್ನು ಆಯೋಜನೆ ಮಾಡಬೇಕು ಎಂಬ ಕನಸಿದ್ರೂ ಆರ್ಥಿಕ ಸಮಸ್ಯೆ ಅಡ್ಡಿಯಾಗುತ್ತಿತ್ತು. ಅಧಿಕಾರದ ಆಸೆಗೆ ಬಿದ್ದಿದ್ದ ಬ್ರಿಟನ್ ಕೂಡ ಸಹಾಯ ಮಾಡುತ್ತಿರಲಿಲ್ಲ..

ಕೊನೆಗೆ ರಾಬರ್ಟ್ 1906ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಇಂಗ್ಲೆಂಡ್‍ನ ಡೇನಿಯಲ್ ಬರ್ಲಿ ವೂಲ್ಫಾಲ್ 1918ರವರೆಗೆ ಫಿಫಾದ ಚುಕ್ಕಾಣಿ ಹಿಡಿದಿದ್ದರು. ಬ್ರಿಟಿಷರ ಗರ್ವಭಂಗ ಮಾಡಿ, ಅವರ ಸಹಕಾರವಿಲ್ಲದೆ ರಾಬರ್ಟ್ ಗ್ವೆರಿನ್ ಫಿಫಾ ಸಂಸ್ಥೆಯನ್ನು ಕಟ್ಟಿದ್ದರು. ಆದ್ರೆ ಇಂಗ್ಲೆಂಡ್‍ನ ಆರ್ಥಿಕ ನೆರವು ಇಲ್ಲದೆ ಫಿಫಾ ಬೆಳವಣಿಗೆ ಅಸಾಧ್ಯ ಎಂಬುದನ್ನು ಅಷ್ಟೇ ಬೇಗ ಅರಿತುಕೊಂಡಿದ್ದರು.

ಹೀಗಾಗಿಯೇ ಬ್ರಿಟನ್‍ಗೆ ಫಿಫಾ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟು ರಾಬರ್ಟ್ ಗ್ವೆರಿನ್ ದೊಡ್ಡತನ ಮೆರೆದಿದ್ದರು. ಆದ್ರೆ, ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಮಾತನ್ನು ಫುಟ್‍ಬಾಲ್ ಜಗತ್ತಿನಲ್ಲೂ ಅನಾವರಣಗೊಳಿಸಿದ್ದರು.

jules rimet fifa world cup founder
jules rimet fifa world cup founder

ಒಬ್ಬ ಹಠಮಾರಿ ವಕೀಲನ ಕೈಯಲ್ಲಿ ಬೆಳೆದ ಫಿಫಾ ವಿಶ್ವಕಪ್ ಕೂಸು..!

1921ರಲ್ಲಿ ಫಿಫಾ ಮನೆಯೊಳಗೆ ಒಬ್ಬ, ಹಠಮಾರಿ ಹಾಗೂ ದೂರದೃಷ್ಟಿಯ ಆಡಳಿತಗಾರನ ಎಂಟ್ರಿಯಾಗಿತ್ತು. ಅವರ ಹೆಸರು

ಫ್ರಾನ್ಸ್ ನ  ಜೂಲ್ಸ್ ರಿಮೆಟ್.

ಬಡ ಕಾರ್ಮಿಕನ ಮಗನಾಗಿದ್ದ ರಿಮೆಟ್, ವೃತ್ತಿಯಲ್ಲಿ ವಕೀಲನಾಗಿದ್ದರು. ದೇಶದ ಪರ ಯುದ್ಧದಲ್ಲಿ ಹೋರಾಡಿದ್ದ ಸೈನಿಕನಾಗಿದ್ದರು. ಬಡ ಮತ್ತು ಕೆಳವರ್ಗದ ಜನರ ಕಷ್ಟಗಳನ್ನು ತುಂಬಾ ಹತ್ತಿರದಂದ ಕಂಡಿದ್ದರು. ಫುಟ್‍ಬಾಲ್ ಆಟದಲ್ಲಿ ಆಗುತ್ತಿದ್ದ ತಾರತಮ್ಯಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಶೋಷಿತ ವರ್ಗದ ಯುವಕರಿಗಾಗಿಯೇ ರೆಡ್ ಸ್ಟಾರ್ ಎಂಬ ಫುಟ್‍ಬಾಲ್ ಕ್ಲಬ್ ಅನ್ನು ಸ್ಥಾಪಿಸಿದ್ದರು. ವೃತ್ತಿಪರ ಹಾಗೂ ಬಡ ಆಟಗಾರರಿಗೂ ಸಮಾಜದಲ್ಲಿ ಗೌರವ ಸಿಗಬೇಕು ಎಂಬ ಧ್ಯೇಯ ಹೊಂದಿದ್ದರು.

ದೂರದೃಷ್ಟಿ ನಾಯಕನ ಕ್ರಾಂತಿಕಾರಿ ಹೆಜ್ಜೆಗಳು..!

ಇಂತಹ ದೂರದೃಷ್ಟಿಯ ನಾಯಕ ಜೂಲ್ಸ್ ರಿಮೆಟ್, ಫಿಫಾ ಚುಕ್ಕಾಣಿ ಹಿಡಿಯುತ್ತಿದ್ದಂತೆ ಕ್ರಾಂತಿಕಾರಿ ನಿರ್ಧಾರಗಳಿಗೆ ಮುನ್ನುಡಿ ಬರೆದಿದ್ದರು. ಮೊದಲು ಬ್ರಿಟಿಷರ ಹಸ್ತಕ್ಷೇಪಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಿದ್ದರು. ಒಲಿಂಪಿಕ್ಸ್ ಸಮಿತಿಯ ನಿರ್ಧಾರಗಳಿಗೂ ತಿರುಗಿಬಿದ್ದಿದ್ದರು. ಹಠಮಾರಿಯಂತೆ ಪ್ರತ್ಯೇಕ ಟೂರ್ನಿಯನ್ನು ಸಂಫಟಿಸುವ ಮಹತ್ವದ ನಿರ್ಧಾರಕ್ಕೂ ಕೈ ಹಾಕಿದ್ದರು.

ಅಷ್ಟೇ ಅಲ್ಲ, ಫುಟ್‍ಬಾಲ್‍ನಲ್ಲಿ ವೃತ್ತಿಪರತೆಯ ಆಟಕ್ಕೂ ಅಧಿಕೃತ ಮುದ್ರೆ ಒತ್ತಿದ್ದರು. ಆಟವನ್ನು ಜಾಗತಿಕರಣಗೊಳಿಸಲು ಹಗಲಿರುಳು ಶ್ರಮಪಟ್ಟಿದ್ದರು. ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿದ್ದರು. ದೇಶ ದೇಶಗಳ ನಡುವಿನ ಸ್ನೇಹಕ್ಕೆ ಫುಟ್‍ಬಾಲ್ ಆಟವನ್ನೇ ದಾಳವನ್ನಾಗಿಸಿಕೊಂಡಿದ್ದರು. ದೇಶಗಳ ಶಕ್ತಿ ಮತ್ತು ಸಾಮಥ್ರ್ಯ ಪರೀಕ್ಷೆಗೆ ಮೈದಾನವನ್ನೇ ವೇದಿಕೆಯಾಗಿ ಕಲ್ಪಿಸಿದ್ದರು. ಫುಟ್‍ಬಾಲ್ ಆಟವನ್ನು ರಾಷ್ಟ್ರೀಯ ಹೆಮ್ಮೆಯ ಸಂಕೇತವನ್ನಾಗುವಂತೆ ಬಿಂಬಿಸಿದ್ದರು.

ರಾಬರ್ಟ್ ಗ್ವೆರಿನ್ ಬಿತ್ತಿದ್ಧ ಫಿಫಾ ಬೀಜವನ್ನು ಹೆಮ್ಮರವಾಗಿ ಬೆಳೆಯುವಂತೆ ಮಾಡಿದ್ದರು. ಫ್ರಾನ್ಸ್‍ನ ಇಬ್ಬರು ಹಠಮಾರಿ ಆಡಳಿತಗಾರರು ಫಿಫಾ ಸಾಮ್ರಾಜ್ಯ ವಿಸ್ತರಣೆಗೆ ಭದ್ರ ಅಡಿಪಾಯ ಹಾಕಿರುವುದನ್ನು ಎಂದಿಗೂ ಮರೆಯುವ ಹಾಗಿಲ್ಲ.

1930ರ ಚೊಚ್ಚಲ ಉರುಗ್ವೆ ಫಿಫಾ ವಿಶ್ವಕಪ್‍ನಲ್ಲಿ 13 ತಂಡಗಳು..!

ಅದೇನು ಆತ್ಮವಿಶ್ವಾಸವೋ ಗೊತ್ತಿಲ್ಲ. ಯುರೋಪ್ ದೇಶಗಳು ಆರ್ಥಿಕ ತೊಂದರೆಗೆ ಸಿಲುಕಿದ್ದವು. ಇದರ ಮಧ್ಯೆಯೇ ಜುಲ್ಸ್ ರಿಮೆಟ್ ಮೊದಲ ಫಿಫಾ ವಿಶ್ವಕಪ್ ಟೂರ್ನಿಯನ್ನು ಘೋಷಣೆ ಮಾಡಿದ್ದರು. ಆದ್ರೆ ಯುರೋಪ್ ದೇಶಗಳು ಆತಿಥ್ಯ ವಹಿಸಲು ಹಿಂದೇಟು ಹಾಕಿದ್ದವು. ಆಗ ಜೂಲ್ಸ್ ರಿಮೆಟ್‍ನ ಕೈ ಹಿಡಿದಿದ್ದು ದಕ್ಷಿಣ ಅಮೆರಿಕಾದ ಉರುಗ್ವೆ ದೇಶ.

ಸಮುದ್ರ ದಾಟಿ ಹೋಗಬೇಕಾಗಿರುವುದರಿಂದ ಯುರೋಪ್ ದೇಶಗಳು ಮತ್ತೆ ತಗಾದೆ ತೆಗೆದಿದ್ದವು. ಫ್ರಾನ್ಸ್ ಮತ್ತು ಬೆಲ್ಜಿಯಂ ಒಪ್ಪಿಗೆ ನೀಡಿದ್ರೂ, ರೊಮೇನಿಯಾ, ಯುಗೊಸ್ಲಾವಿಯ ದೇಶಗಳನ್ನು ಮನವೋಲಿಸಲು ರಿಮೆಟ್ ಯಶಸ್ವಿಯಾಗಿದ್ದರು. ಕೊನೆಗೆ ನಾಲ್ಕು ದೇಶಗಳ ಆಟಗಾರರು ಎರಡು ವಾರಗಳ ಕಾಲ ಒಂದೇ ಹಡಗಿನಲ್ಲಿ ಪ್ರಯಾಣ ಬೆಳೆಸಿದ್ದರು.

ಅಚ್ಚರಿ ಅಂದ್ರೆ ಜೂಲ್ಸ್ ರಿಮೆಟ್, ಯಾರಿಗೂ ಗೊತ್ತಿಲ್ಲದಂತೆ ಚಿನ್ನದ ಫಿಫಾ ಟ್ರೋಫಿಯನ್ನು ತನ್ನ ಸೂಟ್‍ಕೇಸ್‍ನಲ್ಲಿಟ್ಟುಕೊಂಡು ಅದೇ ಹಡಗಿನಲ್ಲಿ ಉರುಗ್ವೆ ತಲುಪಿದ್ದರು. ಆದ್ರೆ ಫಿಫಾ ಸ್ಥಾಪನೆಗೆ ಕೈ ಜೋಡಿಸಿದ್ದ ಐದು ದೇಶಗಳು ಚೊಚ್ಚಲ ಫಿಫಾ ವಿಶ್ವಕಪ್ ಟೂರ್ನಿಯನ್ನು ಮಿಸ್ ಮಾಡಿಕೊಂಡಿದ್ದವು.

ಹೀಗೆ ರಿಮೆಟ್ ಸಾರಥ್ಯದಲ್ಲಿ 1938ರ ತನಕ ಮೂರು ಫಿಫಾ ವಿಶ್ವಕಪ್ ಟೂರ್ನಿಯನ್ನು ಸಂಘಟಿಸಲಾಗಿತ್ತು. ನಂತರ 1942 ಮತ್ತು 1946ರ ಎರಡನೇ ಮಹಾಯುದ್ದದಿಂದ ಫಿಫಾ ವಿಶ್ವಕಪ್ ಟೂರ್ನಿ ಕೂಡ ಸ್ಥಗಿತಗೊಂಡಿತ್ತು.

ಭೀಕರ ಯುದ್ಧದ ಪರಿಣಾಮದಿಂದ ಯೂರೋಪ್‍ನಲ್ಲಿ ಮತ್ತೆ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಹೀಗಾಗಿ ಫಿಫಾ ಟೂರ್ನಿಯನ್ನು ಆಯೋಜನೆ ಮಾಡಲು ಯಾವ ದೇಶದ ಬಳಿಯೂ ಶಕ್ತಿ ಇರಲಿಲ್ಲ. ಆದ್ರೆ ಚಾಣಕ್ಯ ಜೂಲ್ಸ್ ರಿಮೆಟ್ ಬ್ರೆಜಿಲ್ ನಲ್ಲಿ 12 ವರ್ಷಗಳ ನಂತರ ಫಿಫಾ ವಿಶ್ವಕಪ್‍ಗೆ ಮರುಜೀವ ನೀಡಿದ್ದರು.

fifa world cup trophy
fifa world cup trophy

ಇನ್ನು, 80ರ ಇಳಿವಯಸ್ಸಿನಲ್ಲೂ ಜೂಲ್ಸ್ ರಿಮೆಟ್‍ಗೆ ಫುಟ್‍ಬಾಲ್ ಪ್ರೀತಿ ಒಂಚೂರು ಕಡಿಮೆಯಾಗಿರಲಿಲ್ಲ. ತನ್ನ ಅಧ್ಯಕ್ಷತೆಯಲ್ಲಿ ಐದು ಫಿಫಾ ವಿಶ್ವಕಪ್ ಆಯೋಜನೆ ಮಾಡಿರುವ ಹೆಗ್ಗಳಿಕೆ ಇವರದ್ದು. ಪ್ರತಿ ಟೂರ್ನಿಯಲ್ಲೂ ಹೊಸತನದ ಪ್ರಯೋಗದಿಂದಲೇ ಖ್ಯಾತಿ ಪಡೆದಿದ್ದ ರಿಮೆಟ್, ಸ್ವಿಜರ್‍ಲೆಂಡ್ ಆತಿಥ್ಯದ ಫಿಫಾ ವಿಶ್ವಕಪ್ ಮನೆ ಮನೆಗೆ ತಲುಪುವಂತೆ ಮಾಡಿದ್ದರು. ಮೊದಲ ಬಾರಿ ಫಿಫಾ ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ನೇರ ಪ್ರಸಾರ ಮಾಡಲಾಯ್ತು.

33 ವರ್ಷಗಳ ಕಾಲ ಫಿಫಾ ಚುಕ್ಕಾಣಿ ಹಿಡಿದಿದ್ದ ರಿಮೆಟ್ ಕೊನೆಯ ಬಾರಿ ಫಿಫಾ ಟ್ರೋಫಿಯನ್ನು ಹಿಡಿದಿದ್ದು 1954ರ ಫೈನಲ್ ಪಂದ್ಯದ ಸಮಾರೋಪ ಸಮಾರಂಭದಲ್ಲಿ. ಜರ್ಮನಿ ತಂಡದ ನಾಯಕನಿಗೆ ತನ್ನ ಹೆಸರಿನೊಂದಿಗೆ ಅಲಂಕೃತಗೊಂಡಿದ್ದ ಜೂಲ್ಸ್ ರಿಮೆಟ್ ಫಿಫಾ ವಿಶ್ವಕಪ್ ಟ್ರೋಫಿಯನ್ನು ಹಸ್ತಾಂತರಿಸಿದ್ದು ಫುಟ್‍ಬಾಲ್ ಜಗತ್ತಿನ ಅತ್ಯಂತ ಅವಿಸ್ಮರಣೀಯ ಕ್ಷಣ.

ಫಿಫಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಾಗ ಜೂಲ್ಸ್ ರಿಮೆಟ್ ಅವರಿಗೆ ಗೌರವಾನ್ವಿತ ಫಿಫಾ ಅಧ್ಯಕ್ಷ ಎಂಬ ಅತ್ಯುನ್ನತ ಬಿರುದುಕೊಟ್ಟು ಗೌರವಿಸಲಾಗಿತ್ತು. 1946ರಲ್ಲಿ ರಿಮೆಟ್ ಅವರ 25 ವರ್ಷದ ಬೆಳ್ಳಿಹಬ್ಬದ ಸೇವೆಗಾಗಿ ಫಿಫಾ ಟ್ರೋಫಿಗೆ ಅವರದ್ದೇ ಹೆಸರನ್ನಿಡಲಾಗಿತ್ತು. 1946ರಿಂದ 1970ರವರೆಗೆ ಜೂಲ್ಸ್ ರಿಮೆಟ್ ಫಿಫಾ ವಿಶ್ವಕಪ್ ಟ್ರೋಪಿ ಅಂತನೇ ಕರೆಯಲಾಗುತ್ತಿತ್ತು. ಆದ್ರೆ ಬ್ರೆಜಿಲ್ ಮೂರು ವಿಶ್ವಕಪ್ ಗೆದ್ದು ಶಾಶ್ವತವಾಗಿ ಟ್ರೋಫಿಯನ್ನು ಕೈ ವಶಪಡಿಸಿಕೊಂಡಿತ್ತು. 1974ರಿಂದ ಹೊಸ ವಿನ್ಯಾಸದ ಫಿಫಾ ವಿಶ್ವಕಪ್ ಟ್ರೋಫಿಯನ್ನು ನೀಡಲಾಗುತ್ತಿದೆ.

ಅಂದು ಏಳು ದೇಶಗಳ ಪ್ರತಿನಿಧಿಗಳು ಒಂದು ಕೊಠಡಿಯಲ್ಲಿ ತೆಗೆದುಕೊಂಡ ಐತಿಹಾಸಿಕ ನಿರ್ಧಾರದಿಂದ ಇಂದು 211 ದೇಶಗಳನ್ನು ಒಗ್ಗೂಡುವಂತೆ ಮಾಡಿದೆ. ಸ್ವೀಜರ್‍ಲೆಂಡ್‍ನ ಜ್ಯೂರಿಚ್‍ನಲ್ಲಿ ಫಿಫಾದ ಪ್ರಧಾನ ಕಚೇರಿ ಇದೆ. ಮೇಲ್ನೋಟಕ್ಕೆ ಇದು ಕೇವಲ 2 ಮಹಡಿಗಳ ಕಟ್ಟಡದಂತೆ ಕಾಣುತ್ತದೆ. ಆದರೆ ನೆಲಮಹಡಿಯಲ್ಲಿರುವ ಐದು ಅಂತಸ್ತುಗಳೇ ಫಿಫಾ ಸಾಮ್ರಾಜ್ಯದ ರಹಸ್ಯ ಲಾಕರ್‍ಗಳು. # 229ರ ಕೊಠಡಿಯಿಂದ ಶುರುವಾದ ಫಿಫಾ ಪಯಣ ನಿಜಕ್ಕೂ ವಿಸ್ಮಯವೇ ಸರಿ..!

ಒಟ್ಟಿನಲ್ಲಿ ಒಬ್ಬ ಪತ್ರಕರ್ತ ಸೃಷ್ಟಿಸಿದ್ದ ಫಿಫಾ ಸಂಸ್ಥೆಯು ಇಂದು ಜಗತ್ತಿನ ಕೋಟ್ಯಾಂತರ ಮಂದಿಯ ಬಾಳಿಗೆ ಬೆಳಕಾಗಿದೆ. ಜೂಲ್ಸ್ ರಿಮೆಟ್ ಎಂಬ ವಕೀಲನ ದೂರದೃಷ್ಟಿಯ ನಾಯಕತ್ವದಿಂದ ಫಿಫಾ ವಿಶ್ವಕಪ್ ವಿಶ್ವದ ಮಹಾ ಕ್ರೀಡಾ ಹಬ್ಬವಾಗಿದೆ. ಹೇಗಿದೆ ಫಿಫಾ ಇತಿಹಾಸ..?

ಸನತ್ ರೈ

Tags: #FIFAWorldCup #FootballHistory #JulesRimet #SanathRai #FootballLover #FIFA #fifaworldcup #fifaworldcup2026
ShareTweetSendShare
Join us on:

Related Posts

ಸ್ವಚ್ಛ ಬೆಂಗಳೂರು ಎಂಬುದು ಕೇವಲ ಘೋಷಣೆಯೇ?ಅಭಿವೃದ್ಧಿಯ ಮಂತ್ರ ಜಪಿಸುವ ಅಧಿಕಾರಿಗಳೇ, ಈ ಕಸದ ರಾಶಿಯೇ ನಿಮ್ಮ ಸಾಧನೆಯೇ? 500 ಕುಟುಂಬಗಳ ಉಸಿರು ಕಟ್ಟುತ್ತಿದೆ ಈ ಡಂಪಿಂಗ್ ಯಾರ್ಡ್!ಹೆಮ್ಮಿಗೆಪುರ ನಿವಾಸಿಗಳ ಕಣ್ಣೀರಿನ ಕಥೆ

ಸ್ವಚ್ಛ ಬೆಂಗಳೂರು ಎಂಬುದು ಕೇವಲ ಘೋಷಣೆಯೇ?ಅಭಿವೃದ್ಧಿಯ ಮಂತ್ರ ಜಪಿಸುವ ಅಧಿಕಾರಿಗಳೇ, ಈ ಕಸದ ರಾಶಿಯೇ ನಿಮ್ಮ ಸಾಧನೆಯೇ? 500 ಕುಟುಂಬಗಳ ಉಸಿರು ಕಟ್ಟುತ್ತಿದೆ ಈ ಡಂಪಿಂಗ್ ಯಾರ್ಡ್!ಹೆಮ್ಮಿಗೆಪುರ ನಿವಾಸಿಗಳ ಕಣ್ಣೀರಿನ ಕಥೆ

by Shwetha
July 17, 2026
0

ಬೆಂಗಳೂರು ದಕ್ಷಿಣದ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯಲ್ಲಿರುವ ಕಾವೇರಿ ಪೈಪ್ ಲೈನ್ ರಸ್ತೆ ಇಂದು ಅಭಿವೃದ್ಧಿಯ ಸಂಕೇತವಾಗುವ ಬದಲು, ಅನಾರೋಗ್ಯದ ಅಗರವಾಗಿ ಮಾರ್ಪಟ್ಟಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ...

ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಹಣ ಬಂದಿದೆಯೇ ಮನೆಯಲ್ಲೇ ಕುಳಿತು ಚೆಕ್ ಮಾಡಲು ಹೀಗೆ ಮಾಡಿ ಸಾಕು

ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಹಣ ಬಂದಿದೆಯೇ ಮನೆಯಲ್ಲೇ ಕುಳಿತು ಚೆಕ್ ಮಾಡಲು ಹೀಗೆ ಮಾಡಿ ಸಾಕು

by Shwetha
July 17, 2026
0

ಕೋಟ್ಯಂತರ ಖಾಸಗಿ ವಲಯದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) 2025-26ನೇ ಹಣಕಾಸು ವರ್ಷದ ವಾರ್ಷಿಕ ಬಡ್ಡಿ ಹಣವನ್ನು...

ಸಚಿವ ಸ್ಥಾನಕ್ಕೆ ಅವಕಾಶ ನೀಡಿ; ವರಿಷ್ಠರಿಗೆ ಶಾಸಕ ಅಶೋಕ್ ಪಟ್ಟಣ್ ಮನವಿ

ಸಚಿವ ಸ್ಥಾನಕ್ಕೆ ಅವಕಾಶ ನೀಡಿ; ವರಿಷ್ಠರಿಗೆ ಶಾಸಕ ಅಶೋಕ್ ಪಟ್ಟಣ್ ಮನವಿ

by Shwetha
July 17, 2026
0

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಮತ್ತೆ ತೀವ್ರಗೊಂಡಿರುವ ನಡುವೆ, ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಅವರು ಸಚಿವ ಸ್ಥಾನಕ್ಕಾಗಿ ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ...

ಸಾರ್ವಜನಿಕರೇ ಗಮನಿಸಿ ಬಿಎಲ್‌ಒ ಸೋಗಿನಲ್ಲಿ ಬರುವ ಕರೆಗಳಿಗೆ ಒಟಿಪಿ ನೀಡಿದರೆ ಖಾಲಿಯಾಗಲಿದೆ ನಿಮ್ಮ ಹಣ

ಸಾರ್ವಜನಿಕರೇ ಗಮನಿಸಿ ಬಿಎಲ್‌ಒ ಸೋಗಿನಲ್ಲಿ ಬರುವ ಕರೆಗಳಿಗೆ ಒಟಿಪಿ ನೀಡಿದರೆ ಖಾಲಿಯಾಗಲಿದೆ ನಿಮ್ಮ ಹಣ

by Shwetha
July 17, 2026
0

ಸದ್ಯ ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಂದರೆ ಎಸ್‌ಐಆರ್ ಪ್ರಕ್ರಿಯೆಯು ಅತ್ಯಂತ ವೇಗವಾಗಿ ನಡೆಯುತ್ತಿದೆ. ಮತದಾನದ ಹಕ್ಕನ್ನು ಪಡೆಯಲು ಅಥವಾ ತಿದ್ದುಪಡಿ ಮಾಡಲು ಲಕ್ಷಾಂತರ...

9ನೇ ತರಗತಿಯಲ್ಲಿ ಮೂರನೇ ಭಾಷೆ ಸೂಕ್ತವಲ್ಲ: ನ್ಯಾ. ಬಿ.ವಿ. ನಾಗರತ್ನ

9ನೇ ತರಗತಿಯಲ್ಲಿ ಮೂರನೇ ಭಾಷೆ ಸೂಕ್ತವಲ್ಲ: ನ್ಯಾ. ಬಿ.ವಿ. ನಾಗರತ್ನ

by Shwetha
July 17, 2026
0

ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, CBSE 9ನೇ ತರಗತಿ ಪಠ್ಯಕ್ರಮದಲ್ಲಿ ಹೊಸ ಮೂರನೇ ಭಾಷೆಯನ್ನು ಪರಿಚಯಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಸರ್ಕಾರವು ಹೈಕೋರ್ಟ್ ತೀರ್ಪನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram