ADVERTISEMENT
Wednesday, November 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಇನ್‌ಸ್ಟಾಮಾರ್ಟ್ ಮಳಿಗೆಗಳಲ್ಲೇ ಬಾಡಿಗೆಗೆ ಸಿಗಲಿದೆ ಇವಿ, ಬ್ಯಾಟರಿ ಸ್ವಾಪಿಂಗ್ ಸೌಲಭ್ಯ; ಸ್ವಿಗ್ಗಿ ನಡೆಗೆ ಗಡ್ಕರಿ ಮೆಚ್ಚುಗೆ

admin by admin
November 4, 2026
in National, Newsbeat, ದೇಶ - ವಿದೇಶ
swiggy-instamart-ev-rental-battery-swapping-facility-delivery-partners

swiggy-instamart-ev-rental-battery-swapping-facility-delivery-partners

Share on FacebookShare on TwitterShare on WhatsappShare on Telegram

* ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ ‘ಇವಿ ಮೊಬಿಲಿಟಿ ಕಾನ್‌ಕ್ಲೇವ್’ಗೆ ಚಾಲನೆ
* ಡೆಲಿವರಿ ಸಿಬ್ಬಂದಿಯ ಸಮಯ, ಶ್ರಮ ಉಳಿತಾಯದ ಜೊತೆಗೆ ಆದಾಯ ಹೆಚ್ಚಳಕ್ಕೆ ಒತ್ತು
* ಸ್ವಿಗ್ಗಿ ಆ್ಯಪ್‌ನಲ್ಲಿ ಕೇವಲ 4 ಟ್ಯಾಪ್‌ಗಳಲ್ಲಿ ಸುಲಭವಾಗಿ ಎಲೆಕ್ಟ್ರಿಕ್ ವಾಹನ ಬಾಡಿಗೆಗೆ ಲಭ್ಯ
* ಇವಿ ಬಳಕೆಯಿಂದ 17,791 ಟನ್ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ತಡೆಗಟ್ಟಿದ ಸ್ವಿಗ್ಗಿ

ಬೆಂಗಳೂರು: ಭಾರತದ ಪ್ರಮುಖ ಆನ್‌ಲೈನ್‌ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ, ತನ್ನ ಡೆಲಿವರಿ ಪಾಲುದಾರರಿಗೆ ಅನುಕೂಲ ಮಾಡಿಕೊಡುವ ಹಾಗೂ ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.

Related posts

rajinikanth-kamal-haasan-dharman-movie-sreeleela-official-announcement

ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ: ಅಧಿಕೃತ ಘೋಷಣೆ

November 4, 2026
nephroplus-34-7-percent-profit-growth-kazakhstan-expansion-2026

ನೆಫ್ರೋಪ್ಲಸ್‌ ಲಾಭದಲ್ಲಿ ಭರ್ಜರಿ ಶೇ. 34.7ರಷ್ಟು ಏರಿಕೆ, ಕಜಕಿಸ್ತಾನಕ್ಕೂ ಕಾಲಿಟ್ಟ ಭಾರತದ ಕಂಪನಿ

November 4, 2026

ʼಪವರಿಂಗ್ ದಿ ಲಾಸ್ಟ್ ಮೈಲ್ʼ ಎಂಬ ವಿಷಯದಡಿ ದೆಹಲಿಯಲ್ಲಿ ಆಯೋಜಿಸಿದ್ದ ‘ಇವಿ ಮೊಬಿಲಿಟಿ ಕಾನ್‌ಕ್ಲೇವ್’ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸ್ವಿಗ್ಗಿಯ ಈ ಹೊಸ ಇವಿ (ಎಲೆಕ್ಟ್ರಿಕ್ ವಾಹನ) ಉಪಕ್ರಮಗಳಿಗೆ ಚಾಲನೆ ನೀಡಿದರು. ಇವಿ ತಯಾರಕರು, ಬ್ಯಾಟರಿ-ಸ್ವಾಪಿಂಗ್ ಪೂರೈಕೆದಾರರು, ಫೈನಾನ್ಶಿಯರ್‌ಗಳು ಮತ್ತು ಡೆಲಿವರಿ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ವಿನೂತನ ಪ್ರಯತ್ನ ಇದಾಗಿತ್ತು.

ಏನಿದು ಹೊಸ ಸೌಲಭ್ಯ? ಸಿಬ್ಬಂದಿಗೆ ಏನು ಲಾಭ?

ಡೆಲಿವರಿ ಸಿಬ್ಬಂದಿಯ ಸಮಯ ಮತ್ತು ಶ್ರಮವನ್ನು ಉಳಿಸಲು ಸ್ವಿಗ್ಗಿ ಈ ಕೆಳಗಿನ ಹೊಸ ಸೌಲಭ್ಯಗಳನ್ನು ಪರಿಚಯಿಸಿದೆ:

* ಇನ್‌ಸ್ಟಾಮಾರ್ಟ್‌ನಲ್ಲೇ ಬ್ಯಾಟರಿ ಸ್ವಾಪಿಂಗ್: ಡೆಲಿವರಿ ಸಿಬ್ಬಂದಿ ದಿನಕ್ಕೆ ಸರಾಸರಿ 20 ಬಾರಿ ಇನ್‌ಸ್ಟಾಮಾರ್ಟ್ ಮಳಿಗೆಗಳಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಸಮಯ ಉಳಿಸುವ ಉದ್ದೇಶದಿಂದ ಸ್ವಿಗ್ಗಿಯು 25 ಸ್ಥಳಗಳಲ್ಲಿರುವ ಇನ್‌ಸ್ಟಾಮಾರ್ಟ್ ಪಾಡ್‌ಗಳಲ್ಲೇ ಬ್ಯಾಟರಿ ಬದಲಿಸುವ ಕೇಂದ್ರ ಆರಂಭಿಸಿದೆ.

* ಇವಿ ಬಾಡಿಗೆ ಸೌಲಭ್ಯ: ಇನ್‌ಸ್ಟಾಮಾರ್ಟ್ ಮಳಿಗೆಗಳಲ್ಲೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ಪಡೆಯುವ ಸೌಲಭ್ಯವನ್ನೂ ಪರಿಚಯಿಸಲಾಗಿದೆ. ಇದರಿಂದ ಸಿಬ್ಬಂದಿಯು ಆರ್ಡರ್ ಪಡೆಯುವ ಸ್ಥಳದಲ್ಲೇ ವಾಹನವನ್ನೂ ಪಡೆಯಬಹುದು.

* ಆ್ಯಪ್‌ನಲ್ಲಿ 4 ಟ್ಯಾಪ್‌ಗಳಲ್ಲಿ ವಾಹನ: ಸ್ವಂತ ವಾಹನ ಇಲ್ಲದವರು ಸ್ವಿಗ್ಗಿ ಆ್ಯಪ್ ಮೂಲಕ ಕೇವಲ ನಾಲ್ಕು ಟ್ಯಾಪ್‌ಗಳಲ್ಲಿ ಸುಲಭವಾಗಿ ಇವಿ ಬಾಡಿಗೆಗೆ ಪಡೆಯಬಹುದು. ದೈನಂದಿನ, ಸಾಪ್ತಾಹಿಕ ಅಥವಾ ಮಾಸಿಕ ಬಾಡಿಗೆ ಯೋಜನೆಗಳಿದ್ದು, ಬಾಡಿಗೆ ಹಣವನ್ನು ನೇರವಾಗಿ ಅವರ ಡೆಲಿವರಿ ಪೇ-ಔಟ್‌ನಿಂದಲೇ ಕಡಿತಗೊಳಿಸಲಾಗುತ್ತದೆ.

ಈ ವ್ಯವಸ್ಥೆಯಿಂದ ವಾಹನ ಚಾರ್ಜಿಂಗ್‌ಗಾಗಿ ಹುಡುಕಾಡುವ ಸಮಯ ಉಳಿಯಲಿದ್ದು, ಆ ಅಮೂಲ್ಯ ಸಮಯದಲ್ಲಿ ಹೆಚ್ಚಿನ ಆರ್ಡರ್‌ಗಳನ್ನು ತಲುಪಿಸಿ ಅಧಿಕ ಆದಾಯ ಗಳಿಸಲು ಸಿಬ್ಬಂದಿಗೆ ಸಾಧ್ಯವಾಗಲಿದೆ.

ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, “ಸ್ವಚ್ಛ, ದಕ್ಷ ಹಾಗೂ ಕೈಗೆಟುಕುವ ಸಾರಿಗೆಯ ಮೇಲೆ ಭಾರತದ ಬೆಳವಣಿಗೆ ಅವಲಂಬಿತವಾಗಿದೆ. ಡೆಲಿವರಿ ಪಾರ್ಟ್ನರ್‌ಗಳು ಹೊಸ ಆರ್ಥಿಕತೆಯ ಬೆನ್ನೆಲುಬು. ಅವರು ಇವಿ ಬಳಸುವುದರಿಂದ ಅವರ ಆದಾಯ ಹೆಚ್ಚುವುದಲ್ಲದೆ, ನಮ್ಮ ನಗರಗಳು ಮತ್ತು ಪರಿಸರಕ್ಕೂ ಲಾಭವಾಗಲಿದೆ. ಇಂತಹ ಪ್ರಾಯೋಗಿಕ ಪರಿಹಾರಗಳನ್ನು ತಂದಿರುವ ಸ್ವಿಗ್ಗಿ ಹಾಗೂ ಅದರ ಪಾಲುದಾರ ಸಂಸ್ಥೆಗಳ ಕಾರ್ಯ ಶ್ಲಾಘನೀಯ,” ಎಂದರು.

ಸ್ವಿಗ್ಗಿ ಸಿಇಒ ಮತ್ತು ಸಹ-ಸಂಸ್ಥಾಪಕ ಶ್ರೀಹರ್ಷ ಮಜೇಟಿ ಪ್ರತಿಕ್ರಿಯಿಸಿ, “ಪ್ರತಿ ಆರ್ಡರ್ ಹಿಂದೆಯೂ ಒಬ್ಬ ವ್ಯಕ್ತಿ ಇರುತ್ತಾನೆ, ಅವರೇ ಡೆಲಿವರಿ ಪಾಲುದಾರರು. ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಅವರ ದಿನನಿತ್ಯದ ಕೆಲಸಕ್ಕೆ ಪೂರಕವಾಗಿರುವ ಸೌಲಭ್ಯಗಳನ್ನು ನೀಡಿದಾಗ, ಅವರು ಸಹಜವಾಗಿಯೇ ಇವಿಗಳತ್ತ ಆಕರ್ಷಿತರಾಗುತ್ತಾರೆ. ಅವರ ಕೆಲಸವನ್ನು ಸುಲಭ ಮತ್ತು ಲಾಭದಾಯಕವಾಗಿಸುವುದೇ ನಮ್ಮ ಪ್ರಮುಖ ಉದ್ದೇಶ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ವಿಗ್ಗಿ ಪ್ಲಾಟ್‌ಫಾರ್ಮ್‌ನಲ್ಲಿನ ಇವಿ ಡೆಲಿವರಿಗಳ ಮೂಲಕ 2025 ಮತ್ತು 2026ನೇ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 17,791 ಟನ್ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಗಟ್ಟಲಾಗಿದೆ. ಹಾಗೆಯೇ, ‘ಇಕೋ ಸೇವರ್’ ಆಯ್ಕೆಯನ್ನು ಬಳಸುವ ಮೂಲಕ 2026ರ ಆರ್ಥಿಕ ವರ್ಷದಲ್ಲಿ 89 ಲಕ್ಷ ಕಿ.ಮೀ. ಪ್ರಯಾಣದ ದೂರವನ್ನು ಉಳಿಸಲಾಗಿದೆ.

ಇದರೊಂದಿಗೆ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದೊಂದಿಗೆ (ಯುಎನ್‌ಇಪಿ) ಸೇರಿ ಆಹಾರ ಮತ್ತು ದಿನಸಿ ಡೆಲಿವರಿ ವೇದಿಕೆಗಳ ಮೈತ್ರಿಕೂಟವಾದ ‘ಡೆಲಿವರ್-ಇ ಕೋಯಲಿಷನ್’ನ ಸ್ಥಾಪಕ ಸದಸ್ಯನಾಗಿಯೂ ಸ್ವಿಗ್ಗಿ ಗುರುತಿಸಿಕೊಂಡಿದೆ.

ಇದೇ ವೇಳೆ ಕಾರ್ಯಕ್ರಮದಲ್ಲಿ ಇವಿ ಪರಿಸರ ವ್ಯವಸ್ಥೆ ನಿರ್ಮಿಸಲು ನೆರವಾದ ಇಂಡೋಫಾಸ್ಟ್ ಎನರ್ಜಿ, ಯುಲು, ಬೌನ್ಸ್ ಡೈಲಿ, ಹಾಲಾ ಮೊಬಿಲಿಟಿ ಸೇರಿದಂತೆ ಹಲವು ಪಾಲುದಾರ ಸಂಸ್ಥೆಗಳನ್ನು ಹಾಗೂ ಇವಿ ಬಳಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಉಮೇಶ್, ಸಜನ್ ಲಾಲ್ ಮುಂತಾದ ಡೆಲಿವರಿ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ShareTweetSendShare
Join us on:

Related Posts

rajinikanth-kamal-haasan-dharman-movie-sreeleela-official-announcement

ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ: ಅಧಿಕೃತ ಘೋಷಣೆ

by admin
November 4, 2026
0

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಹಾಗೂ ಕಮಲ್ ಹಾಸನ್ ನಿರ್ಮಿಸುತ್ತಿರುವ ಬಹುನಿರೀಕ್ಷಿತ 'ಧರ್ಮನ್' ಚಿತ್ರದ ತಾರಾಗಣ ದಿನದಿಂದ ದಿನಕ್ಕೆ ಮತ್ತಷ್ಟು ಬಲಿಷ್ಠಗೊಳ್ಳುತ್ತಿದೆ. ಇದೀಗ ಚಿತ್ರತಂಡಕ್ಕೆ ನಟಿ ಶ್ರೀಲೀಲಾ...

nephroplus-34-7-percent-profit-growth-kazakhstan-expansion-2026

ನೆಫ್ರೋಪ್ಲಸ್‌ ಲಾಭದಲ್ಲಿ ಭರ್ಜರಿ ಶೇ. 34.7ರಷ್ಟು ಏರಿಕೆ, ಕಜಕಿಸ್ತಾನಕ್ಕೂ ಕಾಲಿಟ್ಟ ಭಾರತದ ಕಂಪನಿ

by admin
November 4, 2026
0

* 2026-27ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 585.2 ಕೋಟಿ ರೂ. ಆದಾಯ, ಶೇ. 23.6ರಷ್ಟು ಏರಿಕೆ * ನಿವ್ವಳ ಲಾಭದಲ್ಲಿ ಶೇ. 34.7ರಷ್ಟು ಭಾರಿ ಜಿಗಿತ, ₹76.1...

jio-15-rupees-unlimited-5g-data-plan-24-hours

ಕೇವಲ 15 ರೂ.ಗೆ ಅನಿಯಮಿತ 5ಜಿ ಡೇಟಾ ಪ್ಲಾನ್ ಬಿಡುಗಡೆ ಮಾಡಿದ ಜಿಯೋ

by admin
November 4, 2026
0

* 4K ವೀಡಿಯೊ ಸ್ಟ್ರೀಮಿಂಗ್, ಆನ್ ಲೈನ್ ಗೇಮಿಂಗ್ ಮತ್ತು ದೊಡ್ಡ ಫೈಲ್ ಗಳನ್ನು ಡೌನ್ ಲೋಡ್ ಮಾಡುವುದು ಲಭ್ಯ * ಮೈಜಿಯೋ ಆ್ಯಪ್, ಜಿಯೋ ವೆಬ್ಸೈಟ್...

bharatiya-herbal-bath-traditional-ayurvedic-bathing-benefits

ಭಾರತೀಯ ಪರಂಪರೆಯ ಗಿಡಮೂಲಿಕೆಗಳ ಸ್ನಾನ – ದೇಹ, ಮನಸ್ಸು ಮತ್ತು ಆತ್ಮಕ್ಕೆ ನೈಸರ್ಗಿಕ ನೆಮ್ಮದಿ

by admin
November 4, 2026
0

ಭಾರತೀಯ ಸಂಸ್ಕೃತಿಯಲ್ಲಿ ಸ್ನಾನವೆಂಬುದು ಕೇವಲ ದೇಹದ ಸ್ವಚ್ಛತೆಯ ವಿಧಾನವಲ್ಲ; ಅದೊಂದು ಪವಿತ್ರ ಆಚರಣೆ, ಆತ್ಮಶುದ್ಧಿ ಮತ್ತು ಸ್ವಯಂ ಆರೈಕೆಯ ಸುಂದರ ಸಂಪ್ರದಾಯವಾಗಿದೆ. ತಲೆಮಾರುಗಳಿಂದ ಭಾರತೀಯ ಮನೆಗಳಲ್ಲಿ ಪ್ರಕೃತಿಯ...

kuladevata-swapna-vidhana-for-divine-guidance-and-blessings

ನೀವು ಕುಲದೇವತೆಯೊಂದಿಗೆ ಮಾತನಾಡಲು ಬಯಸುತ್ತೀರಾ? ‘ಸ್ವಪ್ನ ವಿಧಾನ’ದ ರಹಸ್ಯ!

by admin
November 4, 2026
0

"ನಾವು ಕುಲದೇವತೆಯ ಬಳಿ ಒಂದು ವಿಷಯವನ್ನು ಕೇಳಿದರೆ ಅದಕ್ಕೆ ಸೂಕ್ತ ಉತ್ತರ ಅಥವಾ ಮಾರ್ಗದರ್ಶನ ಸಿಗಬೇಕು. ಯಾವುದೇ ಕೆಲಸವನ್ನು ಮಾಡಬೇಕೋ ಅಥವಾ ಬೇಡವೋ ಎಂಬ ಗೊಂದಲವಿದ್ದಾಗ ಕುಲದೇವರು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram