ADVERTISEMENT
Wednesday, November 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ನೆಫ್ರೋಪ್ಲಸ್‌ ಲಾಭದಲ್ಲಿ ಭರ್ಜರಿ ಶೇ. 34.7ರಷ್ಟು ಏರಿಕೆ, ಕಜಕಿಸ್ತಾನಕ್ಕೂ ಕಾಲಿಟ್ಟ ಭಾರತದ ಕಂಪನಿ

admin by admin
November 4, 2026
in National, Newsbeat, ದೇಶ - ವಿದೇಶ
nephroplus-34-7-percent-profit-growth-kazakhstan-expansion-2026

nephroplus-34-7-percent-profit-growth-kazakhstan-expansion-2026

Share on FacebookShare on TwitterShare on WhatsappShare on Telegram

* 2026-27ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 585.2 ಕೋಟಿ ರೂ. ಆದಾಯ, ಶೇ. 23.6ರಷ್ಟು ಏರಿಕೆ
* ನಿವ್ವಳ ಲಾಭದಲ್ಲಿ ಶೇ. 34.7ರಷ್ಟು ಭಾರಿ ಜಿಗಿತ, ₹76.1 ಕೋಟಿ ಲಾಭ ದಾಖಲು
* ಕಜಕಿಸ್ತಾನ್ ಪ್ರವೇಶದೊಂದಿಗೆ 6 ದೇಶಗಳಿಗೆ ಸೇವೆ ವಿಸ್ತರಣೆ, ಒಟ್ಟು 570 ಕ್ಲಿನಿಕ್‌ಗಳ ಬೃಹತ್ ಜಾಲ.
* ಕಂಪನಿಯ ಒಟ್ಟು ಆದಾಯದಲ್ಲಿ ವಿದೇಶಿ ವಹಿವಾಟಿನ ಪಾಲು ಶೇ. 47ಕ್ಕೆ ಏರಿಕೆ

ಬೆಂಗಳೂರು: ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ನೆಟ್‌ವರ್ಕ್ ನಿರ್ವಹಿಸುತ್ತಿರುವ ನೆಫ್ರೋಪ್ಲಸ್‌ 2026ರ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕ ಹಾಗೂ ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದ ಅತ್ಯುತ್ತಮ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದೆ.

Related posts

rajinikanth-kamal-haasan-dharman-movie-sreeleela-official-announcement

ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ: ಅಧಿಕೃತ ಘೋಷಣೆ

November 4, 2026
swiggy-instamart-ev-rental-battery-swapping-facility-delivery-partners

ಇನ್‌ಸ್ಟಾಮಾರ್ಟ್ ಮಳಿಗೆಗಳಲ್ಲೇ ಬಾಡಿಗೆಗೆ ಸಿಗಲಿದೆ ಇವಿ, ಬ್ಯಾಟರಿ ಸ್ವಾಪಿಂಗ್ ಸೌಲಭ್ಯ; ಸ್ವಿಗ್ಗಿ ನಡೆಗೆ ಗಡ್ಕರಿ ಮೆಚ್ಚುಗೆ

November 4, 2026

ಕಂಪನಿಯು ಈ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಬರೋಬ್ಬರಿ 585.2 ಕೋಟಿ ರೂ. ಆದಾಯ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 23.6ರಷ್ಟು ಭಾರಿ ಪ್ರಗತಿ ಸಾಧಿಸಿದೆ. ಇದೇ ಅವಧಿಯಲ್ಲಿ ಕಾರ್ಯಾಚರಣೆ ಲಾಭ (ಎಬಿಟ್ಡಾ) ಶೇ. 15.3ರಷ್ಟು ಏರಿಕೆ ಕಂಡು 134.4 ಕೋಟಿ ರೂ.ಗೆ ತಲುಪಿದೆ. ಹಾಗೆಯೇ, ನಿವ್ವಳ ಲಾಭ ಶೇ. 34.7ರಷ್ಟು ಗಣನೀಯ ಏರಿಕೆ ಕಂಡು 76.1 ಕೋಟಿ ರೂ.ಗೆ ಮುಟ್ಟಿದೆ.

ಚಿಕಿತ್ಸಾ ಸೇವೆಗಳ ಸಂಖ್ಯೆಯಲ್ಲಿ ಹೆಚ್ಚಳ

ಕಳೆದ 6 ತಿಂಗಳ ಅವಧಿಯಲ್ಲಿ ಕಂಪನಿಯು ಒಟ್ಟು 21.01 ಲಕ್ಷ ಡಯಾಲಿಸಿಸ್ ಚಿಕಿತ್ಸೆಗಳನ್ನು ಒದಗಿಸಿದ್ದು, ಇದರಲ್ಲಿ ಶೇ. 12.6ರಷ್ಟು ವಾರ್ಷಿಕ ಏರಿಕೆ ದಾಖಲಾಗಿದೆ. ಕೇವಲ ಚಿಕಿತ್ಸೆಗಳ ಸಂಖ್ಯೆಯಲ್ಲಷ್ಟೇ ಅಲ್ಲದೆ, ಪ್ರತಿ ಚಿಕಿತ್ಸೆಯಿಂದ ಬರುವ ಆದಾಯವು ಶೇ. 9.7ರಷ್ಟು ಏರಿಕೆಯಾಗಿ 2,785 ರೂ.ಗೆ ತಲುಪಿದೆ.

ಕಜಕಿಸ್ತಾನ್ ಪ್ರವೇಶ

ತನ್ನ ಸೇವಾ ಜಾಲವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ವಿಸ್ತರಿಸಿರುವ ನೆಫ್ರೋಪ್ಲಸ್, ಕಜಕಿಸ್ತಾನದ ಅಲ್ಮಾಟಿಯಲ್ಲಿ 34 ಯಂತ್ರಗಳಿರುವ ಎರಡು ಕ್ಲಿನಿಕ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಆ ದೇಶಕ್ಕೂ ಯಶಸ್ವಿಯಾಗಿ ಕಾಲಿಟ್ಟಿದೆ.

ಕಳೆದ ಆರು ತಿಂಗಳಲ್ಲಿ ಕಂಪನಿಯು ಬಂಡವಾಳ ವೆಚ್ಚಕ್ಕಾಗಿ 102 ಕೋಟಿ ರೂ. ಹೂಡಿಕೆ ಮಾಡಿದ್ದು, ಭಾರತದಲ್ಲಿ 40 ಮತ್ತು ಫಿಲಿಪೈನ್ಸ್‌ನಲ್ಲಿ 11 ಹೊಸ ಕ್ಲಿನಿಕ್‌ಗಳನ್ನು ಆರಂಭಿಸಿದೆ. ಸೌದಿ ಅರೇಬಿಯಾದ ರಿಯಾದ್ ಮತ್ತು ಜೆದ್ದಾದಲ್ಲಿ ‘ಹೋಮ್ ಡಯಾಲಿಸಿಸ್’ ಸೇವೆ ಪ್ರಾರಂಭವಾಗಿದ್ದು, ಸೌದಿಯ ಆರೋಗ್ಯ ಸಚಿವಾಲಯದ ಬಹುದೊಡ್ಡ ಟೆಂಡರ್ ಪ್ರಕ್ರಿಯೆಯಲ್ಲೂ ನೆಫ್ರೋಪ್ಲಸ್ ಅರ್ಹತೆ ಪಡೆದುಕೊಂಡಿದೆ.

ಇದರೊಂದಿಗೆ ಕಂಪನಿಯು ಪ್ರಸ್ತುತ ವಿಶ್ವದ 6 ದೇಶಗಳಲ್ಲಿ ಒಟ್ಟು 570 ಕ್ಲಿನಿಕ್‌ಗಳನ್ನು ಹೊಂದಿದಂತಾಗಿದೆ. ವಿಶೇಷವೆಂದರೆ, ಕಂಪನಿಯು ಗಳಿಸುತ್ತಿರುವ ಒಟ್ಟು ಆದಾಯದಲ್ಲಿ ಸರಿಸುಮಾರು ಶೇ. 47ರಷ್ಟು ಪಾಲು ಅಂತಾರಾಷ್ಟ್ರೀಯ ವಹಿವಾಟಿನಿಂದಲೇ ಬರುತ್ತಿದೆ.

ಅಕಾಡೆಮಿ ಸ್ಥಾಪನೆ

ಅಂತರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆ ಪೂರೈಸಲು ಮತ್ತು ನುರಿತ ಸಿಬ್ಬಂದಿಯನ್ನು ರೂಪಿಸಲು ‘ನೆಫ್ರೋಪ್ಲಸ್ ಇಂಟರ್ನ್ಯಾಷನಲ್ ಡಯಾಲಿಸಿಸ್ ಅಕಾಡೆಮಿ (ಎನ್‌ಐಡಿಎ)’ ಸ್ಥಾಪಿಸಲಾಗಿದ್ದು, ಇಲ್ಲಿ ಭಾರತ ಮತ್ತು ಫಿಲಿಪೈನ್ಸ್‌ನ ನರ್ಸ್‌ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

ಪಂಜಾಬ್‌ನಲ್ಲಿ ‘ಪೆರಿಟೋನಿಯಲ್ ಡಯಾಲಿಸಿಸ್’ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, 50 ರೋಗಿಗಳು ನೋಂದಣಿಯಾಗಿದ್ದಾರೆ. ತಂತ್ರಜ್ಞಾನದ ಬಳಕೆಯ ಮೂಲಕ ರೋಗಿಗಳ ಪ್ರತಿಕ್ರಿಯೆಗಳನ್ನು ಪಡೆಯಲು ಸ್ವಯಂಚಾಲಿತ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ.

ಆಡಳಿತ ಮಂಡಳಿ ಹರ್ಷ

ಹಣಕಾಸು ಫಲಿತಾಂಶಗಳ ಕುರಿತು ಮಾತನಾಡಿದ ಕಂಪನಿಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ (ಎಂಡಿ) ವಿಕ್ರಮ್ ವುಪ್ಪಲ, “ವಿಶ್ವಾದ್ಯಂತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗುತ್ತಿರುವ ಕಾರಣ ಡಯಾಲಿಸಿಸ್ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ನಾವು ಕಜಕಿಸ್ತಾನ ಪ್ರವೇಶಿಸಿರುವುದು ಅತ್ಯಂತ ಖುಷಿ ತಂದಿದೆ. ಸೌದಿ ಅರೇಬಿಯಾದ ಟೆಂಡರ್‌ನಲ್ಲಿ ನಾವು ಅರ್ಹತೆ ಪಡೆದ 12 ಸಂಸ್ಥೆಗಳಲ್ಲಿ ಒಂದಾಗಿದ್ದೇವೆ,” ಎಂದು ಹೇಳಿದ್ದಾರೆ.

ಗ್ರೂಪ್ ಸಿಇಒ ರೋಹಿತ್ ಸಿಂಗ್ ಪ್ರತಿಕ್ರಿಯಿಸಿ, “ಹೊಸ ಮಾರುಕಟ್ಟೆ ಪ್ರವೇಶ ಹಾಗೂ ಸ್ವಾಧೀನ ಪ್ರಕ್ರಿಯೆಗಳ ಮೂಲಕ ನಮ್ಮ ಆದಾಯದಲ್ಲಿ ಸ್ಥಿರವಾದ ಏರಿಕೆ ಕಂಡಿದ್ದೇವೆ. ವಿಸ್ತರಣೆಯ ಜೊತೆಗೆ ರೋಗಿಗಳಿಗೆ ಉತ್ತಮ ಆರೈಕೆ ಒದಗಿಸುವುದೇ ನಮ್ಮ ಗುರಿ” ಎಂದಿದ್ದಾರೆ.

ಅಲ್ಲದೆ, “ನಮ್ಮ ಭಾರತೀಯ ನೆಟ್‌ವರ್ಕ್ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಬೆಳೆಯಲು ಸಹಾಯ ಮಾಡುತ್ತಿದೆ. ಪ್ರಸ್ತುತ ನಮ್ಮ ಬಳಿ ₹500 ಕೋಟಿಗೂ ಅಧಿಕ ನಗದು ಲಭ್ಯತೆಯಿದ್ದು ಮುಂದಿನ ಯೋಜನೆಗಳಿಗೆ ಮತ್ತು ಬೆಳವಣಿಗೆಗೆ ಯಾವುದೇ ಹಣಕಾಸಿನ ಕೊರತೆಯಿಲ್ಲ,” ಎಂದು ಮುಖ್ಯ ಹಣಕಾಸು ಅಧಿಕಾರಿ ಪ್ರಶಾಂತ್ ಗೋಯೆಂಕಾ ವಿವರಿಸಿದ್ದಾರೆ.

ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ನೆಟ್‌ವರ್ಕ್ ಆಗಿರುವ ನೆಪ್ರೋಪ್ಲಸ್‌ ಭಾರತ, ನೇಪಾಳ, ಫಿಲಿಪೈನ್ಸ್, ಉಜ್ಬೇಕಿಸ್ತಾನ್, ಸೌದಿ ಅರೇಬಿಯಾ ಮತ್ತು ಕಜಕಿಸ್ತಾನದಲ್ಲಿ ತನ್ನ ಸೇವೆ ಒದಗಿಸುತ್ತಿದೆ

ShareTweetSendShare
Join us on:

Related Posts

rajinikanth-kamal-haasan-dharman-movie-sreeleela-official-announcement

ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ: ಅಧಿಕೃತ ಘೋಷಣೆ

by admin
November 4, 2026
0

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಹಾಗೂ ಕಮಲ್ ಹಾಸನ್ ನಿರ್ಮಿಸುತ್ತಿರುವ ಬಹುನಿರೀಕ್ಷಿತ 'ಧರ್ಮನ್' ಚಿತ್ರದ ತಾರಾಗಣ ದಿನದಿಂದ ದಿನಕ್ಕೆ ಮತ್ತಷ್ಟು ಬಲಿಷ್ಠಗೊಳ್ಳುತ್ತಿದೆ. ಇದೀಗ ಚಿತ್ರತಂಡಕ್ಕೆ ನಟಿ ಶ್ರೀಲೀಲಾ...

swiggy-instamart-ev-rental-battery-swapping-facility-delivery-partners

ಇನ್‌ಸ್ಟಾಮಾರ್ಟ್ ಮಳಿಗೆಗಳಲ್ಲೇ ಬಾಡಿಗೆಗೆ ಸಿಗಲಿದೆ ಇವಿ, ಬ್ಯಾಟರಿ ಸ್ವಾಪಿಂಗ್ ಸೌಲಭ್ಯ; ಸ್ವಿಗ್ಗಿ ನಡೆಗೆ ಗಡ್ಕರಿ ಮೆಚ್ಚುಗೆ

by admin
November 4, 2026
0

* ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ 'ಇವಿ ಮೊಬಿಲಿಟಿ ಕಾನ್‌ಕ್ಲೇವ್'ಗೆ ಚಾಲನೆ * ಡೆಲಿವರಿ ಸಿಬ್ಬಂದಿಯ ಸಮಯ, ಶ್ರಮ ಉಳಿತಾಯದ ಜೊತೆಗೆ ಆದಾಯ ಹೆಚ್ಚಳಕ್ಕೆ ಒತ್ತು...

jio-15-rupees-unlimited-5g-data-plan-24-hours

ಕೇವಲ 15 ರೂ.ಗೆ ಅನಿಯಮಿತ 5ಜಿ ಡೇಟಾ ಪ್ಲಾನ್ ಬಿಡುಗಡೆ ಮಾಡಿದ ಜಿಯೋ

by admin
November 4, 2026
0

* 4K ವೀಡಿಯೊ ಸ್ಟ್ರೀಮಿಂಗ್, ಆನ್ ಲೈನ್ ಗೇಮಿಂಗ್ ಮತ್ತು ದೊಡ್ಡ ಫೈಲ್ ಗಳನ್ನು ಡೌನ್ ಲೋಡ್ ಮಾಡುವುದು ಲಭ್ಯ * ಮೈಜಿಯೋ ಆ್ಯಪ್, ಜಿಯೋ ವೆಬ್ಸೈಟ್...

bharatiya-herbal-bath-traditional-ayurvedic-bathing-benefits

ಭಾರತೀಯ ಪರಂಪರೆಯ ಗಿಡಮೂಲಿಕೆಗಳ ಸ್ನಾನ – ದೇಹ, ಮನಸ್ಸು ಮತ್ತು ಆತ್ಮಕ್ಕೆ ನೈಸರ್ಗಿಕ ನೆಮ್ಮದಿ

by admin
November 4, 2026
0

ಭಾರತೀಯ ಸಂಸ್ಕೃತಿಯಲ್ಲಿ ಸ್ನಾನವೆಂಬುದು ಕೇವಲ ದೇಹದ ಸ್ವಚ್ಛತೆಯ ವಿಧಾನವಲ್ಲ; ಅದೊಂದು ಪವಿತ್ರ ಆಚರಣೆ, ಆತ್ಮಶುದ್ಧಿ ಮತ್ತು ಸ್ವಯಂ ಆರೈಕೆಯ ಸುಂದರ ಸಂಪ್ರದಾಯವಾಗಿದೆ. ತಲೆಮಾರುಗಳಿಂದ ಭಾರತೀಯ ಮನೆಗಳಲ್ಲಿ ಪ್ರಕೃತಿಯ...

kuladevata-swapna-vidhana-for-divine-guidance-and-blessings

ನೀವು ಕುಲದೇವತೆಯೊಂದಿಗೆ ಮಾತನಾಡಲು ಬಯಸುತ್ತೀರಾ? ‘ಸ್ವಪ್ನ ವಿಧಾನ’ದ ರಹಸ್ಯ!

by admin
November 4, 2026
0

"ನಾವು ಕುಲದೇವತೆಯ ಬಳಿ ಒಂದು ವಿಷಯವನ್ನು ಕೇಳಿದರೆ ಅದಕ್ಕೆ ಸೂಕ್ತ ಉತ್ತರ ಅಥವಾ ಮಾರ್ಗದರ್ಶನ ಸಿಗಬೇಕು. ಯಾವುದೇ ಕೆಲಸವನ್ನು ಮಾಡಬೇಕೋ ಅಥವಾ ಬೇಡವೋ ಎಂಬ ಗೊಂದಲವಿದ್ದಾಗ ಕುಲದೇವರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram