ಅಪ್ಪು ನೆನೆದು ಕಣ್ಣೀರಿಟ್ಟ ರಮೇಶ್ ಅರವಿಂದ್
ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದಿಂದ ಕನ್ನಡ ಸಿನಿಮಾರಂಗ , ಕರುನಾಡಿಗರು , ಅಭಿಮಾನಿಗಳು ಇನ್ನೂ ಹೊರಬಂದಿಲ್ಲ. ಈ ನಡುವೆ ಅನೇಕ ಸ್ಟಾರ್ ಗಳನ್ನ ಅಪ್ಪು ನೆನೆದು ಭಾವುಕರಾಗಿ ಮಾತನಾಡುತ್ತಾ, ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಅವರ ಬಗ್ಗೆ ಪೋಸ್ಟ್ ಗಳನ್ನ ಹಂಚಿಕೊಳ್ತಾಯಿದ್ದಾರೆ.
ಇದೀಗ ರಮೇಶ್ ಅರವಿಂದ್ ಅವರು ಅಪ್ಪು ಜೊತೆಗಿನ ಕೊನೆ ಕ್ಷಣವನ್ನ ಬಿಚ್ಚಿಟ್ಟಿದ್ದು, ಭಾವುಕರಾಗಿದ್ದಾರೆ. ಗುರುಕಿರಣ್ ಹುಟ್ಟುಹಬ್ಬ ಆಚರಣೆ ವೇಳೆ ಅಪ್ಪು, ರಮೇಶ್, ಅನಿರುದ್ಧ್ ವೈರಾಗ್ಯದ ಬಗ್ಗೆ ಚರ್ಚೆ ಮಾಡಿದ್ದರು. ಗುರುಕಿರಣ್ ಮನೆಯಲ್ಲಿ 2 ಗಂಟೆಗಳ ಕಾಲ ಮಾತನಾಡಿದ್ವಿ ಎಂದಿದ್ದಾರೆ. ಅಲ್ಲದೇ ಅಂದು ಪುನೀತ್ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ್ದರು. ಮರು ದಿನವೇ ಕಣ್ಣುದಾನ ಮಾಡಿರೋದನ್ನು ನಂಬಲು ಸಾಧ್ಯವಾಗ್ತಿಲ್ಲ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
ಹಂಡ್ರಡ್ ಸಿನಿಮಾ ಪ್ರೆಸ್ ಮೀಟ್ ನಲ್ಲಿ ಅಪ್ಪು ನೆನೆದು ಕಣ್ಣೀರಿಟ್ಟ ರಮೇಶ ಅರವಿಂದ್ , ಪನೀತ್ ರಾಜ್ಕುಮಾರ್ ಸಾವಿನ ಹಿಂದಿನ ದಿನ ಅಪ್ಪು ಜೊತೆ ಸಮಯ ಕಳೆದಿದ್ದ ಕ್ಷಣವನ್ನ ಬಿಚ್ಚಿಟ್ಟಿದ್ದಾರೆ.








