ಅಪ್ಪುಗೆ 650 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಶ್ರದ್ಧಾಂಜಲಿ
ಬೆಂಗಳೂರು : ಇಂದಿಗೆ ಅಪ್ಪು ನಮ್ಮನ್ನೆಲ್ಲ ಅಗಲಿ 11 ದಿನಗಳು ಕಳೆದಿವೆ.. ಆದ್ರೂ ಅಪ್ಪು ಅಕಾಲಿಕ ನಿಧನದ ನೋವಿನಿಂದ ಅವರ ಕುಟುಂಬ ಹಾಗೂ ಕರುನಾಡು ಹೊರ ಬಂದಿಲ್ಲ. ಇಂದಿಗೂ ದೇವರ ಅನ್ಯಾಯ ನೆನಯುತ್ತಾ ವಿಧಿಗೆ ಶಾಪ ಹಾಕ್ತಾಯಿದ್ದಾರೆ ಅಭಿಮಾನಿಗಳು.. ಇಂದು ದೊಡ್ಮನೆ ಸದಸ್ಯರು ಅಪ್ಪು 11 ನೇ ಪುಣ್ಯರಾಧನೆ ನೆರವೇರಿಸಿದ್ರು. ಅಲ್ಲದೇ ನವೆಂಬರ್ 07ರಂದು ಚಿತ್ರಮಂದಿರ, ಪ್ರದರ್ಶಕರ ವಲಯದಿಂದ ಥಿಯೇಟರ್ ಮಾಲೀಕರು ಹಾಗೂ ಚಿತ್ರಮಂದಿರದ ಸಿಬ್ಬಂದಿಗಳಿಂದ ಅಪ್ಪುಗೆ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕದಾದ್ಯಂತ ಏಕಕಾಲಕ್ಕೆ 650ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಮೊದಲೇ ನಿರ್ಧರಿಸಿದಂತೆ ಏಕಕಾಲಕ್ಕೆ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಚಿತ್ರಮಂದಿರದ ಮಾಲೀಕರು ತಮ್ಮ ಚಿತ್ರಮಂದಿರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಫೋಟೊ ಇಟ್ಟು ಪುಷ್ಪ ನಮನ ಸಲ್ಲಿಸಿದ್ದಾರೆ. ಅಂತಯೇ ಪೋಟೋಗೆ ದೀಪ ಬೆಳಗಿ ಶ್ರದ್ಧಾಂಜಲಿ ಕೋರಲಾಗಿದೆ. ಸಂಜೆ ಆರು ಗಂಟೆಯಿಂದಲೇ ಚಿತ್ರಮಂದಿರದಲ್ಲಿ ಶ್ರದ್ಧಾಂಜಲಿ ನೆರವೇರಿಸಲಾಗಿದೆ.
ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿಯೇ ಕನ್ನಡದ ಖ್ಯಾತ ಸಿನಿ ಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಗೀತೆಯೊಂದನ್ನು ರಚಿಸಿದ್ದರು. ಅಪ್ಪು ಶ್ರದ್ಧಾಂಜಲಿ ಎಂಬ ಹಾಡನ್ನು ಥಿಯೇಟರ್‌ಗಳ ಮುಂದೆ ಹಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಚಿತ್ರಮಂದಿರ ಮುಂದೆ ಸೇರಿದ್ದ ಅಭಿಮಾನಿಗಳು ಚಿತ್ರಮಂದಿರದ ಒಳಗೆ ಮೊಬೈಲ್ ಲೈಟ್ ಬಳಸಿಯೂ ಪವರ್ ಸ್ಟಾರ್‌ಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.
ನಿನ್ನೆಯ NCB ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಕೊರೊನಾ ಕಾರಣ ಕೊಟ್ಟ ಶಾರುಖ್ ಪುತ್ರ..?
ಪುನೀತ್ ಗೆ “ಪದ್ಮಶ್ರೀ” ಯಾಕೆ…? ಅಪ್ಪು “ಅಮಶ್ರೀ” : ಶಿವಣ್ಣ