ಅಪ್ಪು ಪುಣ್ಯಸ್ಮರಣೆ | ಕಂಠೀರವ ಸ್ಟುಡಿಯೋದತ್ತ ಜನ ಸಾಗರ Appu saaksha tv
ಬೆಂಗಳೂರು : ಕನ್ನಡದ ರಾಜರತ್ನ, ಕರುನಾಡ ನಟಸಾರ್ವಭೌಮ ನಟ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ 12 ದಿನ.
ಈ ಹಿನ್ನೆಲೆಯಲ್ಲಿ ಅಪ್ಪು ಸಮಾಧಿ ದರ್ಶನಕ್ಕೆ ಅಭಿಮಾನಿಗಳ ಮಹಾ ಸಾಗರವೇ ಹರಿದುಬರುತ್ತಿದೆ.
ನಗರದ ಕಂಠೀರವ ಸ್ಟುಡಿಯೋ ಬಳಿಗೆ ಇಂದು ಮುಂಜಾನೆಯಿಂದಲೇ ಜನರು ಆಗಮಿಸುತ್ತಿದ್ದಾರೆ.
ಕೊರೆಯುವ ಚಳಿಯನ್ನು ಲೆಕ್ಕಿಸದೇ ಮಕ್ಕಳು, ವೃದ್ಧರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಅಪ್ಪು ಸಮಾಧಿ ದರ್ಶನಕ್ಕೆ ಕಾಯುತ್ತಿದ್ದಾರೆ.
ಇಂದು ಜನರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಂಠೀರವ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಇತ್ತ ಬೆಂಗಳೂರು ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಕಾರ್ಯ ನಡೆಯುತ್ತಿದೆ.
ಸಾವಿರಾರು ಮಂದಿ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ.









