ಕೋವ್ಯಾಕ್ಸಿನ್ ಗೆ ಅನುಮೋದನೆ ಕೊಟ್ಟ ಬ್ರಿಟನ್ ಸರ್ಕಾರ
ಭಾರತದಲ್ಲಿ ಉತ್ಪಾದಿಸಲಾಗುತ್ತಿರುವ ಕರೋನ ಲಸಿಕೆ ಕೋವ್ಯಾಕ್ಸಿನ್ ಗೆ ಬ್ರಿಟನ್ ದೇಶ ಅನುಮೋದನೆ ನೀಡಿದೆ. ಇತ್ತೀಚೆಗಷ್ಟೆ ಆಸ್ಟ್ರೆಲಿಯಾ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸಹ ಭಾರತದ ಲಸಿಕೆಗೆ ಅನುಮೋದನೆಯನ್ನ ಕೊಟ್ಟಿದ್ದವು.
ನವೆಂಬರ್.22ರಿಂದ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡು ಬ್ರಿಟನ್ ಗೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಸ್ವಯಂ ಐಸೊಲೇಷನ್‍ಗೆ ಒಳಪಡುವ ಅವಶ್ಯಕತೆ ಇರುವುದಿಲ್ಲ ಎಂದು ಭಾರತದಲ್ಲಿ ಬ್ರಿಟನ್ ಹೈ ಕಮಿಷನರ್ ಆಗಿರುವ ಅಲೆಕ್ಸ್ ಎಲ್ಲಿಸ್ ಟ್ವಿಟ್ ಮಾಡಿದ್ದಾರೆ.
ಕಳೆದ ತಿಂಗಳ ಹಿಂದಷ್ಟೆ ಕೋವಿಶೀಲ್ಡ್ ಕೊರೊನಾ ಲಸಿಕೆಗೆ ಮಾನ್ಯತೆ ನೀಡಿದ್ದ ಬ್ರಿಟನ್ ಇದೀಗ ಕೋವ್ಯಾಕ್ಸಿನ್ ಗೂ ಮಾನ್ಯತೆ ನೀಡಿದೆ.









