ಮೈಸೂರಿನಲ್ಲಿ ಕ್ಲೋರಿನ್ ಅನಿಲ ಸೋರಿಕೆ 6 ಅಗ್ನಿ ಶಾಮಕ ದಳದ ಸಿಬ್ಬಂದಿ ಅಸ್ವಸ್ಥ.
ಶುದ್ಧ ಕುಡಿಯುವ ನೀರಿನ ಘಟಕದಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿದೆ. ಈ ಅವಘಡವನ್ನ ತಪ್ಪಿಸಲೆಂದು ಬಂದ 6 ಅಗ್ನಿಶಾಮಕ ದಳದ ಸಿಬ್ಬಂದಿ ಅಸ್ವಸ್ಥಗೊಂಡಿರುವ ಘಟನೆ ತಿ.ನರಸಿಪುರದಲ್ಲಿ ನಡೆದಿದೆ.
ತಿ.ನರಸಿಪುರ ಪಟ್ಟಣದ ತ್ರಿವೇಣಿ ನಗರ ಬಡಾವಣೆಯಲ್ಲಿ ನೂತನಾಗಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕದಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿದೆ..ಈ ರಾಸಾಯನಿಕದ ಪರಿಣಾಮವನ್ನ ತಪ್ಪಿಸಲು ಸುಣ್ಣದ ನೀರನ್ನ ಕಲಸಿಕೊಂಡು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನ ಘಟಕದ ಹತ್ತಿರ ಹೋಗುವಾಗ ಕ್ಲೋರಿನ್ ಅನಿಲದ ತೀವ್ರತೆಯಿಂದಾಗಿ ಕುಸಿದು ಬಿದ್ದಿದ್ದಾರೆ. ದರ್ಶನ್, ಪ್ರದೀಪ್, ಕಿಶೋರ್, ನಾಗರಾಜ್, ಯೋಗೇಶ್, ನಿಜಗುಣ ಎಂಬುವವರು ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ತಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತ್ರೀವೇಣಿ ನಗರ ಸೀಲ್ ಡೌನ್
ಕ್ಲೋರಿನ್ ಸೋರಿಯಾಗಿರುವ ಹಿನ್ನೆಲೆಯಲ್ಲಿ ತ್ರಿವೇಣಿ ನಗರ ಬಡಾವಣೆ ಸೀಲ್ ಡೌನ್ ಮಾಡಲಾಗಿದೆ. ಮನೆಯಿಂದ ಯಾರೂ ಹೊರಗೆ ಬಾರದಂತೆ ಮತ್ತು ಎಚ್ಚರಿಕೆ ವಹಿಸುವಂತೆ ಧ್ವನಿವರ್ಧಕದ ಮೂಲಕ ಸೂಚನೆ ನೀಡಲಾಗಿದೆ.








