ಸ್ನೇಹಿತರ ಜೊತೆ ಚಾಮುಂಡಿ ಬೆಟ್ಟಕ್ಕೆ ಭೇಟಿ – ಫೋಟೋ ಶೇರ್ ಮಾಡಿಕೊಂಡ ಶ್ವೇತಾ ಚಂಗಪ್ಪ..!
ಮಜಾ ಟಾಕೀಸ್ ಖ್ಯಾತಿಯ ನಟಿ ಶ್ವೇತಾ ಚಂಗಪ್ಪ ಸ್ನೇಹಿತರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.. ಬಳಿಕ ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡಿರುವ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ದರ್ಶನ ಪಡೆದ ನಂತರ ನಟ ಮಂಡ್ಯ ರಮೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಒಟ್ಟಿಗೆ ಸ್ನೇಹಿತೊಂದಿಗೆ ಕುಳಿತು ಊಟ ಮಾಡಿದ್ದಾರೆ.
https://www.instagram.com/p/CWF-OM-hA0g/?utm_source=ig_web_copy_link
ರಗಡ್ ಆಗಿದೆ ಮದಗಜ ಟೈಟಲ್ ಟ್ರಾಕ್
ಶ್ವೇತಾ ಅವರು ಶೇರ್ ಮಾಡಿಕೊಂಡಿರುವ ಫೋಟೋಗಳಲ್ಲಿ ಕುರಿ ಪ್ರತಾಪ್, ಅಪರ್ಣ ವಸ್ತಾರೆ, ಮಾಲಿನಿ ಜಯಪ್ರಕಾಶ್, ರೆಮೋ, ಶಾಲಿನಿ ಜಯಪ್ರಕಾಶ್ ಇದ್ದಾರೆ. ಫೋಟೋ ಜೊತೆಗೆ ನಾನು ನಗಲು ಬಯಸದಿದ್ದರೂ ಸಹ ನನ್ನನ್ನು ನಗಿಸುವವರನ್ನು ನಾನು ಪ್ರೀತಿಸುತ್ತೇನೆ ಮತ್ತು ಯಾವಾಗಲೂ ನಂಬುತ್ತೇನೆ. ಜಗತ್ತನ್ನು ವಿಭಿನ್ನವಾಗಿ ಕಾಣುವಂತೆ ಮಾಡುವ ಜನರೊಂದಿಗೆ ನಿಮ್ಮ ಸಮಯವನ್ನು ಕಳೆಯಿರಿ. ನಿಮ್ಮೆಲ್ಲರನ್ನು ಭೇಟಿಯಾಗಿದ್ದು ಮತ್ತು ನಿಮ್ಮೆಲ್ಲರ ಜೊತೆ ಸಮಯ ಕಳೆದಿದ್ದು, ಬಹಳ ಸಂತಸ ತಂದಿದೆ. ಲವ್ ಯು ಆಲ್ ಎಂದು ಬರೆದುಕೊಂಡಿದ್ದಾರೆ.
ದುನಿಯಾ ವಿಜಿ ಕಾಣಿಸಿಕೊಳ್ತಿರುವ ತೆಲುಗಿನ ಸಿನಿಮಾದ ಮುಹೂರ್ತದ ಡೇಟ್ ಫಿಕ್ಸ್..!








