ರಸ್ತೆ ಬದಿ ಮಾಂಸಾಹಾರ ಮಾರುವುದು ಭೂಕಬಳಿಕೆಗೆ ಸಮ ಎಂದ ಗುಜರಾತ್ ಸಚಿವ
ಗುಜರಾತ್ : ರಸ್ತೆ ಬದಿಯಲ್ಲಿ ಮೊಟ್ಟೆ ಹಾಗೂ ಮಾಂಸಾಹಾರಿ ಖಾದ್ಯಗಳನ್ನು ಮಾರದಂತೆ ರಾಜ್ ಕೋಟ್ ಮತ್ತು ವಡೋದರಾ ನಗರ ಪಾಲಿಕೆಗಳು ಮೌಖಿಕ ಆದೇಶ ಹೊರಡಿಸಿವೆ. ಈ ನಡೆ ವಿರುದ್ಧ ಸಾಕಷ್ಟು ಜನ ಆಕ್ರೋಶ ಹೊರಹಾಕಿದ್ದಾರೆ..
ಆದ್ರೆ ಈ ಕ್ರಮವನ್ನು ಗುಜರಾತ್ ಕಂದಾಯ ಸಚಿವ ರಾಜೇಂದ್ರ ತ್ರಿವೇದಿ ಸಮರ್ಥಿಸಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ಮಾಂಸಾಹಾರಿ ಖಾದ್ಯಗಳನ್ನು ಮಾರಾಟ ಮಾಡುವುದು ತಾತ್ಕಾಲಿಕ ಸ್ವರೂಪದ ಭೂಕಬಳಿಕೆಯ ಕೃತ್ಯ ಎಂದು ಹೇಳಿದ್ದಾರೆ.
ಇನ್ನೂ ಮುಂದಿನ ದಿನಗಳಲ್ಲಿ ಇತರ ನಗರಗಳಲ್ಲೂ ಈ ರೀತಿಯ ಆದೇಶಗಳನ್ನು ಹೊರಡಿಸಬಹುದು ಎಂಬ ಮುನ್ಸೂಚನೆಯನ್ನೂ ನೀಡಿದ್ದಾರೆ.








