ADVERTISEMENT
Saturday, July 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅತೃಪ್ತ ಆತ್ಮಗಳ ಮೋಕ್ಷಕ್ಕಾಗಿ ನಾರಾಯಣ ಬಲಿ ಎನ್ನುವ ಹಿಂದೂಗಳ ಅದಮ್ಯ ಪ್ರಾಚೀನ ನಂಬಿಕೆ:

Mahesh M Dhandu by Mahesh M Dhandu
November 14, 2021
in Newsbeat, Saaksha Special, ಎಸ್ ಸ್ಪೆಷಲ್
narayana bali pooja
Share on FacebookShare on TwitterShare on WhatsappShare on Telegram

ಅತೃಪ್ತ ಆತ್ಮಗಳ ಮೋಕ್ಷಕ್ಕಾಗಿ ನಾರಾಯಣ ಬಲಿ ಎನ್ನುವ
ಹಿಂದೂಗಳ ಅದಮ್ಯ ಪ್ರಾಚೀನ ನಂಬಿಕೆ:

narayana bali pooja ಹಿಂದೂಗಳಲ್ಲಿ ನಾರಾಯಣ ಬಲಿ ಮತ್ತು ನಾಗಬಲಿ, ತ್ರಿಪಿಂಡಿ ಶ್ರಾದ್ಧ ಎಂಬ ಧಾರ್ಮಿಕ ಕ್ರಿಯೆಗಳ ಒಂದು ಅದಮ್ಯ ನಂಬಿಕೆಯಿದೆ. ಇಲ್ಲಿ ನಾರಾಯಣ ಬಲಿ ಪೂಜೆಯನ್ನು ಅತೃಪ್ತ ಆತ್ಮಗಳ ಮೋಕ್ಷಕ್ಕೋಸ್ಕರ ಮಾಡಲಾಗುತ್ತದೆ ಎನ್ನುವುದು ಆ ತರಹದ ಒಂದು ನಂಬಿಕೆ. ಮೋಕ್ಷ ನಾರಾಯಣ ಬಲಿಪೂಜೆಯಿಂದ ಭೂತ ಪ್ರೇತಾವಾಗಿರುವ ಆತ್ಮಗಳು ಮುಕ್ತಿ ಹೊಂದುವ ವಿಧಾನ ಎನ್ನಲಾಗುತ್ತದೆ.
ಮೋಕ್ಷ ನಾರಾಯಣ ಬಲಿ ಪೂಜೆಯನ್ನು ಅತೃಪ್ತ ಆತ್ಮಗಳ ಮೋಕ್ಷಕ್ಕೋಸ್ಕರ ಮಾಡಲಾಗುತ್ತದೆ.

Related posts

ಮೊಹಮ್ಮದ್ ಘಜ್ನಿ ನಂತರ ರಾಮಮಂದಿರ ಲೂಟಿ ಮಾಡಿದ್ದು ಬಿಜೆಪಿ ಮತ್ತು ಆರ್ ಎಸ್ ಎಸ್: ಹರಿಪ್ರಸಾದ್ ಸ್ಫೋಟಕ ಆರೋಪ

ಮೊಹಮ್ಮದ್ ಘಜ್ನಿ ನಂತರ ರಾಮಮಂದಿರ ಲೂಟಿ ಮಾಡಿದ್ದು ಬಿಜೆಪಿ ಮತ್ತು ಆರ್ ಎಸ್ ಎಸ್: ಹರಿಪ್ರಸಾದ್ ಸ್ಫೋಟಕ ಆರೋಪ

July 11, 2026
ರಾಜ್ಯ ಸರ್ಕಾರದ PRC ನಿಯಮಾವಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ಷೇಪ

ರಾಜ್ಯ ಸರ್ಕಾರದ PRC ನಿಯಮಾವಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ಷೇಪ

July 11, 2026

ಮನೆಯಲ್ಲಿನ ಹಣಕಾಸಿನ ಸಮಸ್ಯೆ, ಹೆಣ್ಣು ಮಕ್ಕಳು ಕೂಗಾಡುವುದು ಮಕ್ಕಳಿಂದ ತೊಂದರೆ,
ಮದುವೆಗೆ ವಿಘ್ನ, ಅಳಿಯನ ಕಿರಿಕಿರಿ, ಹೀಗೆಲ್ಲ ಆಗುವುದು ಆತ್ಮಗಳು ಅತೃಪ್ತರಾಗಿ ಕಾಡುವಂತಹ ವಿಚಾರ. ಪರಾಶರ ಸ್ಮೃತಿ ಗ್ರಂಥಗಳು ಆಧಾರವಾಗಿದೆ. ಪರಾಶರ ಗ್ರಂಥಗಳಲ್ಲಿ ಹೇಳಿದ ಹಾಗೆ ಕಲಿಯುಗದಲ್ಲಿ ಮನುಷ್ಯನು 60 ವರ್ಷ ಬದುಕಿದರೆ ಅದು ದೀರ್ಘಾಯುಷ್ಯವೆಂದು ಹೇಳಲಾಗುತ್ತದೆ
ಈ ಆಧಾರದಲ್ಲಿ ಹೇಳುವುದಾದರೆ, ಯಾರು 60 ವರ್ಷ ಬದುಕುವುದಿಲ್ಲವೋ ಅಂದರೆ 60 ವರ್ಷ ಮೊದಲೇ ಸಾವನ್ನಪ್ಪಿದರೆ ಅದು ದುರ್ಮರಣವೆಂದು ಪರಿಗಣಿಸಲ್ಪಡುತ್ತದೆ. ಈ ರೀತಿ 60 ವರ್ಷ ಮೊದಲು ಅಥವಾ ಮನೆಯಲ್ಲಿ ಪೂರ್ವಜರು ಯಾರಾದರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಬಾಣಂತಿ ತೀರಿಕೊಂಡಿದ್ದರೆ, ಅಕಸ್ಮಾತ್ತಾಗಿ ಆಕ್ಸಿಡೆಂಟ್ ತರಹ ಅವಘಡದಲ್ಲಿ ತೀರಿಕೊಂಡಿದ್ದರೆ, ಕೊಲೆ ಆಗಿದ್ದರೆ ಇಂತಹ ಆತ್ಮಗಳಿಗೆ ಮೊಕ್ಷ ಇರುವುದಿಲ್ಲ ಆ ಆತ್ಮ ನರಳಿದಾಗ ಆ ಒಂದು ವಂಶಕ್ಕೆ ಪಿತೃಶಾಪ ತಟ್ಟುತ್ತದೆ ಅನ್ನುವ ನಂಬಿಕೆ ಹಿಂದಿನಿಂದಲೂ ಚಾಲ್ತಿಯಲ್ಲಿದೆ.

narayana bali pooja ಈ ಒಂದು ಶಾಪದಿಂದ ಆರ್ಥಿಕ ಕುಂದಾಗುತ್ತದೆ, ಮನೆತನದಲ್ಲಿ ಕಾದಾಟ, ಸಂತಾನ ಹೀನತೆ, ವಂಶ ಅಭಿವೃದ್ಧಿ ಕುಂಠಿತ, ಮಕ್ಕಳಾಗದಿರುವದು, ಮಕ್ಕಳು ಮದುವೆಯಲ್ಲಿ ಬಾಧೆ ಈ ಎಲ್ಲ ತೊಂದರೆಗಳಿಗೆ ಪರಿಹಾರ ನಾಗಬಲಿ, ನಾರಾಯಣ ಬಲಿ, ಮತ್ತು ತ್ರಿಪಿಂಡಿ ಶ್ರಾದ್ಧ ಅಂದರೆ ಹವನದ ಮೂಲಕ ಪಿತೃಗಳಿಗೆ ಅನ್ನ ದೊರಕಿಸಿ ಕೊಡುವುದು, ಇದರಿಂದ ಸ್ತ್ರೀ ಶಾಪ ಕೂಡ ಪರಿಹಾರವಾಗುತ್ತದೆ ಅನ್ನುವ ನಂಬಿಕೆಯನ್ನು ಪೋಷಿಸಿಕೊಂಡು ಬರಲಾಗುತ್ತಿದೆ. ಜೊತೆಗೆ ಶಾಸ್ತ್ರಗಳನ್ನು ಅನುಸರಿಸುವವರು
ಆರು ವರ್ಷಕ್ಕೊಮ್ಮೆ ತ್ರಿಪಿಂಡಿ ಶ್ರಾದ್ಧವನ್ನು, ಪಕ್ಷಮಾಸದಲ್ಲಿ ತಿಳಿಯದೆ ತಪ್ಪಾಗಿದ್ದಲ್ಲಿ ಪಿತೃಗಳಿಗೆ ನೋವಾಗಿದ್ದರೆ ಆ ತ್ರಿಪಿಂಡಿ ಶ್ರಾದ್ಧದಿಂದ ಮೋಕ್ಷ ಸಿಗುತ್ತದೆ ಎನ್ನುವ ಪರಂಪರೆಯನ್ನು ಅನುಸರಿಸುತ್ತಾರೆ.

ವಿಷಪ್ರಾಶನ ಮರಣ, ನೇಣು ಹಾಕಿಕೊಳ್ಳುವುದು, ನೀರಿನಲ್ಲಿ ಮುಳುಗಿ ಸಾಯುವುದು,
ಮರ ಅಥವಾ ಕಟ್ಟಡದಿಂದ ಬಿದ್ದು ಸಾಯುವುದು, ಬೆಂಕಿ ಅವಘಡಗಳಲ್ಲಿ ಸಾವು, ವಿದ್ಯುತ್
ಸ್ಪರ್ಶದಿಂದ ಸಂಭವಿಸುವ ಸಾವು, ಮದುವೆ ಆಗದೆ ಬ್ರಹ್ಮಚಾರಿ ಮರಣ, ಪ್ರಸೂತಿಕಾ ಅಂದರೆ ಬಾಣಂತಿ ಮರಣ, ಮಕ್ಕಳು, ಸಂತಾನ ಇಲ್ಲದೆ ಸಾವು, ಕ್ಯಾನ್ಸರ್, ಕುಷ್ಠ, ಇತ್ಯಾದಿ ಮಾರಕ ರೋಗಗಳಿಂದ ಸಾವು, ಕೊಲೆಯಂತಹ ದುರ್ಮರಣವನ್ನು ಅಕಾಲ ಮರಣವೆನ್ನಲಾಗುತ್ತದೆ. ಈ ರೀತಿ ಅಕಾಲ ಮರಣ ಹೊಂದಿದರೆ ಅಂತಹ ಆತ್ಮಗಳ ಸದ್ಗತಿಗೋಸ್ಕರ ಮಾಡುವ ಪೂಜೆಯೇ ನಾರಾಯಣ ಬಲಿ.
ನಾರಾಯಣಬಲಿ ಪೂಜೆಯ ಸ್ಥಾನಗಳು: ಗೋಕರ್ಣ, ಅಯೋಧ್ಯಾ, ಮಥುರಾ ಮಾಯಾ, ಕಾಶಿ, ಕಾಂಚಿ ಹರಿದ್ವಾರ ದ್ವಾರಕಾ ಬದರಿ ಗಯಾ ಇತ್ಯಾದಿ ಮೋಕ್ಷ ಕ್ಷೇತ್ರಗಳಲ್ಲಿ ಮಾಡಬೇಕೆಂದು ಪುರಾಣಗಳಲ್ಲಿ ಹೇಳಲಾಗಿದೆ. ಇನ್ನು ನಾರಾಯಣ ಬಲಿ ಪೂಜೆಯನ್ನು ವರ್ಷದ ವಿಶೇಷ ಮಾಸಗಳಲ್ಲಿ ಅಂದರೆ ಪ್ರತಿ ಮಾಸದ ಶುಕ್ಲ ಮತ್ತು ಕೃಷ್ಣ ಪಕ್ಷದ ಪಂಚಮಿ, ಷಷ್ಠಿ, ಸಪ್ತಮಿ, ದಶಮಿ ಏಕಾದಶಿ, ದ್ವಾದಶಿ, ಚತುರ್ದರ್ಶಿ, ಹುಣ್ಣಿಮೆ ಅಥವಾ ಅಮಾವಾಸ್ಯೆ ಗಳಲ್ಲಿ ವಿಶೇಷವಾಗಿ ಮಾಡಬಹುದು. ʻಆಶಾಢಾದಿ ಅಪರ ಪಂಚ ಪಕ್ಷಸು’ ಎನ್ನುವಂತೆ ಆಶಾಢ, ಶ್ರಾವಣ, ಭಾದ್ರಪದ, ಅಶ್ವಿನ, ಕಾರ್ತಿಕ-ಈ ಐದು ಮಾಸಗಳು ಪಿತೃಗಳಿಗೆ ಪ್ರಿಯವಾದುದಾಗಿದೆ.

narayana bali pooja ಈ ರೀತಿ ದುರ್ಮರಣ, ಅಕಾಲ ಮರಣದಿಂದ ಸಾವನ್ನಪ್ಪಿದರೆ, ಅಂತಹ ಆತ್ಮಗಳಿಗೆ ಮೋಕ್ಷ ಸಿಗಲು ಈ ಪೂಜೆಯನ್ನು ಮಾಡಬೇಕು. ಇಲ್ಲವಾದರೆ ಅಂತಹ ಅತೃಪ್ತ ಆತ್ಮಗಳ ಶಾಪವೇ ಕಾಲಕ್ರಮೇಣ ಪಿತೃಶಾಪ, ಪ್ರೇತಶಾಪ, ಪಿತೃದೋಷ, ಪ್ರೇತದೋಷ, ಸ್ತ್ರೀ ಶಾಪ ಇತ್ಯಾದಿ ಶಾಪಗಳಾಗಿ ಕುಟುಂಬಕ್ಕೆ ಕಾಡುವುದು. ಈ ಶಾಪದ ಪರಿಹಾರಕ್ಕಾಗಿ
ಮಾಡುವ ಪೂಜೆಯೇ ನಾರಾಯಣ ಬಲಿ ಪೂಜೆ.

ನಾರಾಯಣ ಬಲಿ ಪೂಜೆಯ ವಿವರವನ್ನು ಗರುಡ ಪುರಾಣದಲ್ಲಿಯೂ ವಿವರಿಸಲಾಗಿದ್ದು, ಇದನ್ನು ಹೀಗೆ ವ್ಯಾಖ್ಯಾನಿಸಲಾಗಿದೆ: ಉಪವಾಸದಿಂದ, ಪ್ರಾಣಿಗಳಿಂದ, ಆಕಸ್ಮಿಕವಾಗಿ, ಅಗ್ನಿಸ್ಪರ್ಶದಿಂದ, ಶಾಪದಿಂದ ಸಾವು, ಕಾಲರಾ ಅಥವಾ ಕಾಯಿಲೆಯಿಂದ, ಅಕಾಲಿಕ ಮರಣ, ಆತ್ಮಹತ್ಯೆ, ಪರ್ವತ, ಮರ ಅಥವಾ ಯಾವುದೇ ಎತ್ತರದಿಂದ ಬಿದ್ದು, ಮುಳುಗುವುದು, ದರೋಡೆಕೋರರಿಂದ ಸಾವು, ಹಾವು ಕಚ್ಚುವಿಕೆಯಿಂದ, ಗುಡುಗು-ಮಿಂಚಿನಿಂದ, ಕೊಲೆ, ಜಾತಕದಲ್ಲಿ ಪಿತೃ ದೋಷ, ಮದುವೆಯಲ್ಲಿ ವಿಳಂಬ, ಮಗುವನ್ನು ಗರ್ಭಧರಿಸುವಲ್ಲಿ ತೊಂದರೆಗಳು, ವ್ಯವಹಾರ ನಷ್ಟ, ಕೌಟಂಬಿಕ ಸಮಸ್ಯೆಗಳು, ಇತ್ಯಾದಿ. ಅಲ್ಪಾವಧಿ ಅಸ್ವಾಭಾವಿಕ ಸಾವಿಗೆ ಶ್ರಾದ್ಧ ಆಚರಣೆಗಳಿಲ್ಲ. ಇದಕ್ಕೆ ನಾರಾಯಣ ಬಲಿ ಪರಿಹಾರ.

ನಾರಾಯಣ ಬಲಿ ಪೂಜೆಯಲ್ಲಿ ವೈದಿಕ ಮಂತ್ರಗಳನ್ನು ಪಠಣ ಮಾಡಿ ಆತ್ಮಗಳನ್ನು ತ್ರಪ್ತಿ ಮಾಡಲಾಗುತ್ತದೆ.  ಕುಟುಂಬದಲ್ಲಿ ಅಸ್ವಾಭಾವಿಕ ಸಾವು, ಜಾತಕದಲ್ಲಿ ಪಿತ್ರ ದೋಷ ಇದ್ದಾಗ, ಜೀವನ ಸಂಬಂಧಿತ ಘಟನೆಗಳ ಕಾರಣದಿಂದಾಗಿ ತಮ್ಮ ಪೂರ್ವಜರಿಗಾಗಿ ಕೆಲವು ರೀತಿಯ ಪೂಜೆಗಳನ್ನು ಮಾಡಬೇಕು ಎಂದು ನೀವು ಸಂಕಲ್ಪಮಾಡಿಕೊಂಡಾಗ, ಅವಿವಾಹಿತ ಪುರುಷ/ಮಹಿಳೆಯ ಸಾವು ಸಂಭವಿಸಿದಾಗ, ಮದುವೆಯಲ್ಲಿ ವಿಳಂಬ /ಗರ್ಭಧರಿಸುವಲ್ಲಿ ತೊಂದರೆ ಆದಾಗ, ಅಸಹಜ ಸಾವು /ಜಾತಕದಲ್ಲಿ ಪಿತ್ರ ದೋಷ ಕಂಡು ಬಂದಾಗ ನಾರಾಯಣ ಬಲಿ ಪೂಜೆಯ ಅಗತ್ಯದ ಕುರಿತು ಧಾರ್ಮಿಕ ವಿದ್ವಾಂಸರು ಸಲಹ ನೀಡುತ್ತಾರೆ. ನಾರಾಯಣ ಬಲಿ ಪೂಜೆಯಲ್ಲಿ ಈ ಕೆಳಗಿನ ಹಂತಗಳಿವೆ

.
ನಾರಾಯಣ ಬಲಿ ಸಂಕಲ್ಪ: ಪೂಜೆ ಮಾಡುವರ ಹೆಸರು, ನಕ್ಷತ್ರ, ಗೋತ್ರ ಮತ್ತು ನಾರಾಯಣ ಬಲಿ ಪೂಜೆಯ ಉದ್ದೇಶವನ್ನು ಹೇಳುವ ವೈದಿಕ ಮಂತ್ರ ಪ್ರಕ್ರಿಯೆ.

ಪ್ರೇತ ಸಂಕಲ್ಪ: ಅಗಲಿದ ಆತ್ಮಗಳ ಹೆಸರು ಮತ್ತು ಪೂಜೆ ಮಾಡುವರೊಂದಗೆ ಅವರ ಸಂಬಂಧವನ್ನು ಹೇಳುವದು ಮತ್ತು ಸಾವಿನ ಕಾರಣ ಉಲ್ಲೇಖಿಸುವುದು.
ವಿನಾಯಕ ಪೂಜೆ: ಶಿವ ಪುರಾಣದ ಪ್ರಕಾರ, ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ವಿನಾಯಕನನ್ನು ಪೂಜಿಸುವುದು ಆಚರಣೆ.
ಶ್ರೀಫಲ (ತೆಂಗಿನಕಾಯಿ) ಬಳಸಿ ಅಗಲಿದ ಆತ್ಮಗಳಿಗೆ ಪ್ರೇತ ಆಹ್ವಾನ: ನಿರ್ಗಮಿಸಿದ ಆತ್ಮಗಳನ್ನು ನಿಗದಿತ ಕ್ರಮದಲ್ಲಿ ಒಂದೊಂದಾಗಿ ಕರೆಯುವ ವೈದಿಕ ಪ್ರಕ್ರಿಯೆ.
ದಶ ಪಿಂಡ ಪ್ರಧಾನ: ಅಗಲಿದ ಆತ್ಮಗಳಿಗೆ ಆಹಾರವನ್ನು ಅರ್ಪಿಸುವುದು.
ಬ್ರಹ್ಮ, ವಿಷ್ಣು, ರುದ್ರ, ಯಮ, ಸವಿತ್ರ ದೇವತಾ ಕಲಶ ಸ್ಥಾಪನೆ ಮತ್ತು ಪೂಜೆ.
ಪಂಚಕ ಶ್ರಾದ್ಧ: ವಿಷ್ಣು ದೇವರಿಗೆ ಐದು ಪಿಂಡ ಪ್ರಧಾನ.
ನಾರಾಯಣ ಬಲಿ ಹೋಮ: ನಾರಾಯಣ ಬಲಿ ಮಂತ್ರಗಳನ್ನು ಹೋಮ ರೂಪದಲ್ಲಿ ಪಠಿಸುವುದು.
ಪ್ರಾಯಶ್ಚಿತ ತಿಲ ಹೋಮ, ಪಂಚ ಸೂಕ್ತ ಪಾರಾಯಣ: ಪಾರಾಯಣ ಮತ್ತು ನಿರ್ಧಾರಿತ ಸಂಖ್ಯೆಯ ಪ್ರಾಯಶ್ಚಿತ ತಿಲ ಹೋಮ.
ದಶದಾನ: ಅನುಕೂಲಕ್ಕೆ ಅನುಗುಣವಾಗಿ 10 ರೀತಿಯ ದೇಣಿಗೆ ನೀಡಲಾಗುತ್ತದೆ.
ಪ್ರಯೋಜನಗಳು. ಆತ್ಮವು ಶಾಂತಿಯುತವಾಗಿ ಸರಿಯಾದ ಸ್ಥಾನವನ್ನು ತಲಪುತ್ತದೆ, ಕುಟುಂಬಕ್ಕೆ ಉತ್ತಮ ಆರೋಗ್ಯ,
ಮನಸ್ಸಿನ ಶಾಂತಿ, ವ್ಯವಹಾರ ಮತ್ತು ಶಿಕ್ಷಣದಲ್ಲಿ ಯಶಸ್ಸು, ವಿವಾಹಿತ ಜೀವನ (ಗರ್ಭಧಾರಣೆ ಮತ್ತು
ಸಂಬಂಧ), ವಿವಾಹದ ಅಡಚಣೆಗಳ ಪರಿಹಾರ, ಎಲ್ಲಾ ಶುಭ ಕಾರ್ಯಗಳು ಸಮಯಕ್ಕೆ ಸರಿಯಾಗಿ
ಆಗುತ್ತದೆ, ಕುಟಂಬದಲ್ಲಿ ಅಸಹಜ ಮರಣಗಳು ಸಂಭವಿಸುವದನ್ನ ತಪ್ಪಿಸುತ್ತದೆ.

ಕೃಪೆ:  ಹಿಂದವೀ ಸ್ವರಾಜ್ಯ

Tags: #astrology#gokarnabengaluruhoroscopekarnatakanarayana bali pooja
ShareTweetSendShare
Join us on:

Related Posts

ಮೊಹಮ್ಮದ್ ಘಜ್ನಿ ನಂತರ ರಾಮಮಂದಿರ ಲೂಟಿ ಮಾಡಿದ್ದು ಬಿಜೆಪಿ ಮತ್ತು ಆರ್ ಎಸ್ ಎಸ್: ಹರಿಪ್ರಸಾದ್ ಸ್ಫೋಟಕ ಆರೋಪ

ಮೊಹಮ್ಮದ್ ಘಜ್ನಿ ನಂತರ ರಾಮಮಂದಿರ ಲೂಟಿ ಮಾಡಿದ್ದು ಬಿಜೆಪಿ ಮತ್ತು ಆರ್ ಎಸ್ ಎಸ್: ಹರಿಪ್ರಸಾದ್ ಸ್ಫೋಟಕ ಆರೋಪ

by Shwetha
July 11, 2026
0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಅತ್ಯಂತ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ....

ರಾಜ್ಯ ಸರ್ಕಾರದ PRC ನಿಯಮಾವಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ಷೇಪ

ರಾಜ್ಯ ಸರ್ಕಾರದ PRC ನಿಯಮಾವಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ಷೇಪ

by Shwetha
July 11, 2026
0

ಶೋಭಾ ಕರಂದ್ಲಾಜೆ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ 'ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರ (PRC)–2026' ನಿಯಮಾವಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಈ ನಿಯಮಾವಳಿಯು...

ಬಂಗಾಳದಲ್ಲಿ ಯೋಗಿ ಮಾಡೆಲ್ ದರ್ಬಾರ್- ಕಾಮುಕನಿಗೆ ಎನ್‌ಕೌಂಟರ್ ಮೂಲಕ ಯಮಲೋಕದ ದರ್ಶನ: ಮಮತಾ ಬ್ಯಾನರ್ಜಿಗೆ ಮೊಟ್ಟೆ ಏಟು- ಎನ್‌ಕೌಂಟರ್ ವಿರೋಧಿಸಿದ ಟಿಎಂಸಿಗೆ ಸಾರ್ವಜನಿಕರ ಆಕ್ರೋಶದ ಬಿಸಿ

ಬಂಗಾಳದಲ್ಲಿ ಯೋಗಿ ಮಾಡೆಲ್ ದರ್ಬಾರ್- ಕಾಮುಕನಿಗೆ ಎನ್‌ಕೌಂಟರ್ ಮೂಲಕ ಯಮಲೋಕದ ದರ್ಶನ: ಮಮತಾ ಬ್ಯಾನರ್ಜಿಗೆ ಮೊಟ್ಟೆ ಏಟು- ಎನ್‌ಕೌಂಟರ್ ವಿರೋಧಿಸಿದ ಟಿಎಂಸಿಗೆ ಸಾರ್ವಜನಿಕರ ಆಕ್ರೋಶದ ಬಿಸಿ

by Shwetha
July 11, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ನಡೆದ 12 ವರ್ಷದ ಬಾಲಕಿಯ ಮೇಲಿನ ಅಮಾನುಷ ಗ್ಯಾಂಗ್‌ರೇಪ್ ಮತ್ತು ಕೊಲೆ ಪ್ರಕರಣದ ಮುಖ್ಯ ಆರೋಪಿ ಪ್ರಭಾಸ್ ಮೊಂಡಲ್ ಈಗ ಇತಿಹಾಸ....

ಉದಯನಿಧಿ ಆರೋಪಕ್ಕೆ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು

ಉದಯನಿಧಿ ಆರೋಪಕ್ಕೆ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು

by Shwetha
July 11, 2026
0

ರಾಮಲಿಂಗಾ ರೆಡ್ಡಿ ಅವರು, ಉದಯನಿಧಿ ಸ್ಟಾಲಿನ್ ಅವರ ಕಾವೇರಿ ನೀರು ಬಿಡುಗಡೆ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದಿಲ್ಲ ಎಂದು ನಾವು...

ಬಿಜೆಪಿ ಗೆಲ್ಲಿಸಲು ಚುನಾವಣಾ ಆಯೋಗದ ಸಂಚು: ಆಯೋಗ ಕೇಂದ್ರದ ಕಪಿಮುಷ್ಠಿಯಲ್ಲಿದೆ – ಪ್ರಿಯಾಂಕ್ ಖರ್ಗೆ ಸ್ಫೋಟಕ ಆರೋಪ

ಬಿಜೆಪಿ ಗೆಲ್ಲಿಸಲು ಚುನಾವಣಾ ಆಯೋಗದ ಸಂಚು: ಆಯೋಗ ಕೇಂದ್ರದ ಕಪಿಮುಷ್ಠಿಯಲ್ಲಿದೆ – ಪ್ರಿಯಾಂಕ್ ಖರ್ಗೆ ಸ್ಫೋಟಕ ಆರೋಪ

by Shwetha
July 11, 2026
0

ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಏಕಕಾಲಕ್ಕೆ ಹಲವು ಗಂಭೀರ ಆರೋಪಗಳನ್ನು ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram