ಕರ್ನಾಟಕ , ಆಂಧ್ರ , ತಮಿಳುನಾಡಿನಲ್ಲಿ ಧಾರಾಕಾರ ಮಳೆ – ಪರಿಸ್ಥಿತಿ ದುರ್ಬಲವಾಗುವ ಸೂಚನೆ..!
ಕಳೆದ ಹಲವು ದಿನಗಳಿಂದ ಕರರ್ನಾಟಕ , ಆಂಧ್ರಪ್ರದೇಶ , ಕೇರಳ , ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗ್ತಿದ್ದು, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.. ಹಲವೆಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ..
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದಾಗಿ ಇಂದು ಬೆಳಿಗ್ಗೆ ಕೂಡ ಕರ್ನಾಟಕದಲ್ಲಿ ಹಲವೆಡೆ ವರುಣನ ಸಿಂಚನವಾಗಿದೆ.. ಬೆಂಗಳೂರಿನಲ್ಲೂ ಬೆಳಿಗ್ಗಿನಿಂದಲೇ ಜಿಟಿಜಿಟಿ ಮಳೆಯಾಗಿದೆ.. ಇನ್ನೂ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಿದೆ.. ಧಾರಾಕಾರ ಮಳೆಯಿಂದ ತಿರುಪತಿ ತಿಮ್ಮಪ್ಪ ಸನ್ನಿಧಾನವೇ ಜಲಾವೃತವಾಗಿದೆ..
ಕೃಷಿ ಕಾಯ್ದೆ ವಾಪಸ್ : ಮುಂದಿನ ನಿರ್ಧಾರ ಶೀಘ್ರವೇ ಪ್ರಕಟ – ಸಂಯುಕ್ತ ಕಿಸಾನ್ ಮೋರ್ಚಾ
ಈ ನಡುವೆ ಈ ಪರಿಸ್ಥಿತಿ ಮತ್ತಷ್ಟು ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ತಮಿಳುನಾಡಿನಲ್ಲಿ ಹೆಚ್ಚು ಮಳೆಯಾಗಲಿದೆ. ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದೆ.








