‘ಲಾಲ್ ಸಿಂಗ್ ಚಡ್ಡಾ’ ಜೊತೆಗೆ ಓಟಿಟಿಗೆ ನಾಗಚೈತನ್ಯ…!
ಓಟಿಟಿ ವೆಬ್ ಸರಣಿಯಲ್ಲಿ ಟಾಲಿವುಡ್ ಸ್ಟಾರ್ ನಾಗಚೈತನ್ಯ…!
ಹೈದ್ರಾಬಾದ್ : ಟಾಲಿವುಡ್ ನ ಸ್ಟಾರ್ ನಟ ನಾಗಚೈತನ್ಯ ಅವರು ಮಾಜಿ ಪತ್ನಿ ಸಮಂತಾ ಜೊತೆಗಿನ ದಾಂಪತ್ಯದಿಂದ ವಿಚ್ಛೇದನ ಪಡೆದುಕೊಂಡ ನಂತರದಿಂದ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.. ಸಮಂತಾ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ನೋವಿನಿಂದ ಹೊರ ಬರುವ ಪ್ರಯತ್ನದಲ್ಲಿದ್ದಾರೆ..
ಈ ನಡುವೆ ನಾಗ ಚೈತನ್ಯ ಬಾಲಿವುಡ್ ನ ಅಮಿರ್ ಖಾನ್ ನಟನೆಯ ಲಾಲ್ ಚಡ್ಡಾ ಸಿಂಗ್ ವೆಬ್ ಸರಣಿಯ ಮೂಲಕ ಓಟಿಟಿ ಪ್ರವೇಶಿಸಿಸಲು ತಯಾರಾಗಿದ್ದಾರೆ.. ಈ ಸಿನಿಮಾದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ.. ಈ ವೆಬ್ ಸರಣಿಗೆ ವಿಕ್ರಮ್ ಕೆ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ನಾಗ ಚೈತನ್ಯ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಓಟಿಟಿಯಲ್ಲಿ ಇದು ನಾಗಚೈತನ್ಯಗೆ ಇದು ಚೊಚ್ಚಲ ಸಿನಿಮಾವಾಗಿದೆ.
ಈ ಸರಣಿಯು ಥ್ರಿಲ್ಲರ್ ಆಗಿದ್ದು, ನಾಗಾಚೈತನ್ಯಗೆ ಜೋಡಿಯಾಗಿ ತಮಿಳು ನಟಿ ಪ್ರಿಯಾ ಭವಾನಿ ಶಂಕರ್ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ದಕ್ಷಿಣದ ಹಲವಾರು ಪ್ರಮುಖ ನಟರು ಸಹ ನಟಿಸಲಿದ್ದಾರೆ. ನಾಗಾರ್ಜುನ ಅಕ್ಕಿನೇನಿ ಮತ್ತು ಅವರ ಮಗ ನಾಗ ಚೈತನ್ಯ ಮುಂಬರುವ ಬಂಗಾರರಾಜು ಚಿತ್ರದಲ್ಲಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ನಾಗಾರ್ಜುನ ಅವರ ಜೊತೆ ಹಿರಿಯ ನಟಿ ರಮ್ಯಾ ಕೃಷ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಉಪ್ಪೇನ ಖ್ಯಾತಿಯ ಕೃತಿ ಶೆಟ್ಟಿ ಈ ಸಿನಿಮಾದಲ್ಲಿ ನಾಗ ಚೈತನ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.