‘ಮೇಡ್ ಇನ್ ಇಂಡಿಯಾ’ : ಶೇ.90 ರಷ್ಟು ರಕ್ಷಣಾ ಉತ್ಪನ್ನಗಳು ಭಾರತದಲ್ಲೇ ತಯಾರಿ’..!
ನವದೆಹಲಿ: ರಕ್ಷಣಾ ಉತ್ಪನ್ನಗಳ ಶೇಕಡಾ 90ರಷ್ಟನ್ನು ದೇಶವೇ ಉತ್ಪಾದನೆ ಮಾಡಲಾಗವುದು.. 2024-25ರ ಹೊತ್ತಿಗೆ 5 ಬಿಲಿಯನ್ ಅಮೆರಿಕ ಡಾಲರ್ ಮೊತ್ತದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವಷ್ಟು ಸಮರ್ಥವಾಗಿ ಬೆಳೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅಲ್ಲದೇ ಈ ಹಿಂದೆ ಶೇಕಡಾ 65ರಿಂದ ಶೇಕಡಾ 70ರಷ್ಟು ರಕ್ಷಣಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ನಾವು ಆತ್ಮನಿರ್ಭರತೆಯತ್ತ ಸಾಗುತ್ತಿರುವಾಗ, ಶೇಕಡಾ 65ರಷ್ಟು ರಕ್ಷಣಾ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಹಿಂದೆ ನಾವು ವಿದೇಶಗಳಿಂದ ಆಮದು ಮೇಲೆ ಹೆಚ್ಚು ಅವಲಂಬಿತವಾಗುತ್ತಿದ್ದೆವು. ಇಂದು ನಾವು 70 ದೇಶಗಳಿಗೆ ರಫ್ತು ಮಾಡುವಷ್ಟು ಬೆಳೆದಿದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ರಾಷ್ಟ್ರ ರಕ್ಷಾ ಸಮರ್ಪಣ್ ಪರ್ವ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2024-25ರ ಹೊತ್ತಿಗೆ 5 ಬಿಲಿಯನ್ ಡಾಲರ್ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ಗುರಿಯನ್ನು ನಾವು ತಲುಪಲಿದ್ದೇವೆ. ಪ್ರಧಾನಿ ಮೋದಿಯವರು ಇದೇ ಆಶಯವನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲಿ ನಾನು ಪ್ರಧಾನಿಯವರಿಗೆ ಭರವಸೆ ನೀಡುತ್ತಿದ್ದೇನೆ, ಇನ್ನು ನಾಲ್ಕೈದು ವರ್ಷಗಳಲ್ಲಿ ಶೇಕಡಾ 90ರಷ್ಟು ರಕ್ಷಣಾ ಉತ್ಪನ್ನಗಳನ್ನು ನಮ್ಮ ಭಾರತದಲ್ಲಿಯೇ ಉತ್ಪಾದಿಸುವಷ್ಟು ನಾವು ಸಮರ್ಥರಾಗುತ್ತೇವೆ ಎಂದರು.
ನ್ಯಾಯಕ್ಕಾಗಿ ಮೋದಿಗೆ ಪತ್ರ ಬರೆದ ಪ್ರಿಯಾಂಕಾ ಗಾಂಧಿ..!








