ADVERTISEMENT
Tuesday, November 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜ್ಯದಲ್ಲಿ ಗೂಂಡಾ ಸರ್ಕಾರ, ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ: ಪ್ರತಿಪಕ್ಷ ನಾಯಕ ಆರ್‌.ಅಶೋಕ

admin by admin
November 17, 2026
in Newsbeat, State, ರಾಜ್ಯ
r-ashoka-criticizes-karnataka-congress-government-2028-nda-government

r-ashoka-criticizes-karnataka-congress-government-2028-nda-government

Share on FacebookShare on TwitterShare on WhatsappShare on Telegram

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಗೂಂಡಾಗಿರಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಿ, 5 ಲಕ್ಷ ರೂ. ಬಾಂಡ್‌ ಪಡೆಯಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ಹೊರಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರಶ್ನೆ ಕೇಳುವ ಹಕ್ಕಿದೆ. ಕಾಂಗ್ರೆಸ್‌ ಕಾರ್ಯಕರ್ತರು ಕೂಡ ಟೀಕೆಗಳನ್ನು ಮಾಡುತ್ತಿದ್ದು, ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುತ್ತಿಲ್ಲ. ಪೊಲೀಸರು ದೌರ್ಜನ್ಯ ಮಾಡಿದರೆ, ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

Related posts

k-sudhakar-welcomes-collins-aerospace-new-mro-facility-in-karnataka

ಕರ್ನಾಟಕದಲ್ಲಿ ಕಾಲಿನ್ಸ್ ಏರೋಸ್ಪೇಸ್‌ನ ನೂತನ ಎಂಆರ್‌ಒ ಘಟಕಕ್ಕೆ ಶುಭ ಕೋರಿದ ಸಂಸದ ಡಾ.ಕೆ.ಸುಧಾಕರ್, ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲು ಮನವಿ

November 17, 2026
classic-legends-business-growth-55-percent-target-2-lakh-bikes-production

ಕ್ಲಾಸಿಕ್ ಲೆಜೆಂಡ್ಸ್ ವಹಿವಾಟು ಬರೋಬ್ಬರಿ ಶೇ. 55ರಷ್ಟು ಏರಿಕೆ, 2 ಲಕ್ಷ ಬೈಕ್ ಉತ್ಪಾದನೆ ಗುರಿ

November 17, 2026

ಬಿಸಿಯೂಟ ಕಾರ್ಯಕರ್ತರ, ಆಶಾ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಪೌರಕಾರ್ಮಿಕರಿಗೆ ಸಂಬಳ ನೀಡದೆ ಎಲ್ಲೆಡೆ ಕಸದ ರಾಶಿ ಕಾಣುತ್ತಿದೆ. ನಮ್ಮ ಬಳಿ ಹಣ ಇಲ್ಲ ಎಂದು ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪುಸ್ತಕ ಬಿಡುಗಡೆಗೆ ದೆಹಲಿಗೆ ಹೋಗಿದ್ದಾರೆ. ಬರಗಾಲದಿಂದ ಸಂಕಷ್ಟಕ್ಕೊಳಗಾದ ರೈತರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಹೆಚ್ಚಿನ ಸಮಯವನ್ನು ದೆಹಲಿಯಲ್ಲೇ ಕಳೆಯುತ್ತಿದ್ದಾರೆ. ಜನರ ವಿಚಾರಕ್ಕಾಗಿ ಅವರೆಂದೂ ದೆಹಲಿಗೆ ಹೋಗಿಲ್ಲ ಎಂದರು.

ರೈತರ ಆತ್ಮಹತ್ಯೆ ಹೆಚ್ಚಿದ್ದು, ರಾಜ್ಯ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಚಾಮರಾಜನಗರದಲ್ಲಿ ಒಬ್ಬ ರೈತ ಕೆರೆ ನೀರು ತುಂಬಿಲ್ಲ ಎಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾನು ಅದರ ಬಗ್ಗೆ ಧ್ವನಿ ಎತ್ತಿದರೂ ಸರ್ಕಾರ ಕ್ರಮ ವಹಿಸಿಲ್ಲ. ಮುಖ್ಯಮಂತ್ರಿ ಎಲ್ಲೇ ಹೋದರೂ ಸಾವಿರಾರು ಕೋಟಿ ರೂ. ನೀಡುವ ಘೋಷಣೆ ಮಾಡುತ್ತಾರೆ. ಆದರೆ ಆರ್ಥಿಕ ಇಲಾಖೆ ಖಾಲಿ ಡಬ್ಬದಂತಾಗಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ. ಆದರೆ ಉತ್ತರ ಕರ್ನಾಟಕಕ್ಕೆ ಈವರೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದರು.

ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಾಡಂಚಿನಲ್ಲಿ ವಾಸ ಮಾಡುವ ಜನರಿಗೆ ವನ್ಯ ಜೀವಿಗಳಿಂದ ತೊಂದರೆಯಾಗಿದೆ. ಹುಲಿಗಳ ದಾಳಿಯಿಂದ ಜನರು ಸತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಗಮನಹರಿಸಿಲ್ಲ. ಸ್ಟಿಂಗ್‌ ಆಪರೇಶನ್‌ ಪ್ರಕರಣ ಸುದ್ದಿಯಾದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಸುಮ್ಮನಾಗಿದ್ದಾರೆ. ಅವರು ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತಿಲ್ಲ. ಎರಡು ಬಣಗಳು ಇರುವುದರಿಂದ ಆಡಳಿತ ಸರಿಯಾಗಿ ನಡೆಯುತ್ತಿಲ್ಲ ಎಂದರು.

ಬೆಲೆ ಏರಿಕೆ ವಿರುದ್ಧ ಹೋರಾಟ

2,000 ರೂ. ನೀಡುತ್ತೇವೆಂದು ಹೇಳಿ ಒಂದು ಕುಟುಂಬಕ್ಕೆ 10,000 ರೂ. ಹೊರೆ ಹೇರಿದ್ದಾರೆ. ಬೆಲೆ ಏರಿಕೆ ವಿರುದ್ಧ ಬಿಜೆಪಿ ವತಿಯಿಂದ ಮಂಗಳೂರಿನಲ್ಲಿ ನವೆಂಬರ್‌ 19 ರಂದು ಬೃಹತ್‌ ಪ್ರತಿಭಟನೆ ನಡೆಯಲಿದೆ. ತಾಲೂಕು ಮಟ್ಟದಲ್ಲೂ ಈ ಬಗ್ಗೆ ಪ್ರತಿಭಟನೆ ನಡೆಯಲಿದೆ. ಮೈಸೂರು ಮೈಸೂರು ಮತ್ತು ಚಾಮರಾಜನಗರದಲ್ಲಿ ಎಲ್ಲ ಕಡೆ ರಸ್ತೆಗಳಲ್ಲಿ ಗುಂಡಿ ಇದೆ. ಡಾಂಬರೀಕರಣಕ್ಕೂ ಸರ್ಕಾರದ ಬಳಿ ಹಣವಿಲ್ಲ. ಇಡೀ ಮೈಸೂರು, ಚಾಮರಾಜನಗರ ಕಡೆಗಣನೆಯಾಗಿದೆ. ದಸರಾ ಸಮಯದಲ್ಲಿ ಶೋ ಮಾಡಿರುವುದನ್ನು ಬಿಟ್ಟರೆ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ ಎಂದರು.

ಎನ್‌ಡಿಎ ಅಧಿಕಾರಕ್ಕೆ ಬರಲಿದೆ

2028 ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಒಂದಾಗಿ ಸ್ಪರ್ಧೆ ಮಾಡಲಿದೆ. ಸ್ಟಿಂಗ್‌ ಆಪರೇಶನ್‌ ಬಳಿಕ ಕಾಂಗ್ರೆಸ್‌ನಿಂದ ಅನೇಕರು ಬಿಜೆಪಿ ಬರುವ ಪ್ರಕ್ರಿಯೆ ಶುರುವಾಗಿದೆ. ಎನ್‌ಡಿಎ ಸರ್ಕಾರ ಬಹುಮತ ಪಡೆದು ಖಂಡಿತವಾಗಿ ಅಧಿಕಾರಕ್ಕೆ ಬರಲಿದೆ. ಇದು ಸೂರ್ಯ ಚಂದ್ರ ಇರುವಷ್ಟೇ ಖಚಿತ ಎಂದರು.

ಕೇಂದ್ರದ ಸಮನ್ವಯ ಸಮಿತಿ ಚುನಾವಣಾ ಅಭ್ಯರ್ಥಿಯನ್ನು ಆರಿಸಲಿದೆ. ಎಲ್ಲಿ ಹೆಚ್ಚು ಮತಗಳು ಬಂದಿವೆಯೋ ಆ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗೆ ಅವಕಾಶ ನೀಡುವಂತೆ ಕೇಳುತ್ತಿದ್ದೇವೆ. ಜೆಡಿಎಸ್‌ ಕೂಡ ಹಾಗೆಯೇ ಕೇಳುತ್ತಿದೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ಹಂಚಿಕೆ ನಡೆಯಲಿದೆ. ಉಪಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಆಯ್ಕೆ ಅಂತಿಮ ಆಗಿಲ್ಲ. ಇಲ್ಲಿನ ನಾಯಕರು ಯಾರೂ ಆ ಬಗ್ಗೆ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ ಎಂದರು.

ಬದುಕಿರುವವರನ್ನು ಮೃತಪಟ್ಟಿದ್ದಾರೆ ಎಂದು ಗೃಹ ಲಕ್ಷ್ಮಿ ಹಣ ನಿಲ್ಲಿಸಿದ್ದಾರೆ. ಇಂತಹ ಸರ್ಕಾರ ಜೀವಂತವಾಗಿದೆ ಎಂದು ಹೇಳಲು ಸಾಧ್ಯವೆ? ಎಂದು ಪ್ರಶ್ನಿಸಿದರು.

ಭಗವಾನ್‌ ಬಿರ್ಸಾ ಮುಂಡಾ ಜಯಂತಿ

ಭಗವಾನ್‌ ಬಿರ್ಸಾ ಮುಂಡಾ ಅವರು ಆದಿವಾಸಿಗಳ ಪರ ಧ್ವನಿ ಎತ್ತಿ ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದರು. ಕಾಡಂಚಿನ ಜನರ ಕೊಡುಗೆಯನ್ನು ಇಡೀ ದೇಶ ಸ್ಮರಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಬಿಜೆಪಿಯ ಎಸ್.ಟಿ. ಮೋರ್ಚಾದಿಂದ ಆಯೋಜಿಸಲಾಗಿದ್ದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಬುಡಕಟ್ಟು ಸಮುದಾಯದ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಗವಾನ್‌ ಬಿರ್ಸಾ ಮುಂಡಾ ಅವರು 25 ನೇ ವಯಸ್ಸಿನಲ್ಲಿ ಆದಿವಾಸಿಗಳ ಪರವಾಗಿ ನಿರಂತರ ಹೋರಾಟ ಮಾಡಿದ್ದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಅವರು, ದೇಶಭಕ್ತಿಯನ್ನು ತೋರಿದರು. ಭಾರತ ಸ್ವತಂತ್ರವಾಗಬೇಕು ಎಂದು ಹೋರಾಟ ಮಾಡಿದರು. ಆ ನೆನಪಿಗಾಗಿ ಅವರನ್ನು ಗೌರವಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಅವರ ಹೆಸರನ್ನು ಶಾಶ್ವತವಾಗಿಸಲು ಜಯಂತಿ ಆಚರಣೆಯನ್ನು ಘೋಷಣೆ ಮಾಡಿದರು ಎಂದರು.

ಆದಿವಾಸಿಗಳಿಗೆ ಕಾಡು ಬಿಟ್ಟರೆ ಏನೂ ಗೊತ್ತಿಲ್ಲ ಎಂಬ ಭಾವನೆ ಸಮಾಜದಲ್ಲಿದೆ. ಆದರೆ ಈ ಸಮುದಾಯದ ಜನರು ದೇಶಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಆ ಜನರು ಕೂಡ ದೇಶದ ಸ್ವಾತಂತ್ರ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಎಲ್ಲರೂ ಅರಿಯಬೇಕು. ನಾನು ಕಂದಾಯ ಸಚಿವನಾಗಿದ್ದಾಗ ಈ ಭಾಗದ ಭೀಮನಕೊಲ್ಲಿಯಲ್ಲಿ ಎರಡು ದಿನ ಗ್ರಾಮ ವಾಸ್ತವ್ಯ ಮಾಡಿದ್ದೆ. ಬೇರೆ ಬೇರೆ ಕಾರಣಕ್ಕಾಗಿ ಈ ಭಾಗದ ಕಾಡಂಚಿನ ಜನರನ್ನು ಹೊರಕ್ಕೆ ಕಳಿಸಲಾಗಿತ್ತು. ಅವರಿಗೆ ಉಳುಮೆಗೆ ಭೂಮಿ ನೀಡಬೇಕು, ಆಶ್ರಯ ಕಲ್ಪಿಸಬೇಕೆಂಬ ಕಾರಣಕ್ಕೆ ನಾನು ಗ್ರಾಮ ವಾಸ್ತವ್ಯ ಮಾಡಿದ್ದೆ ಎಂದರು.

ಆದರೆ ಅರಣ್ಯಾಧಿಕಾರಿಗಳಿಗೆ ಏನೂ ಗೊತ್ತಾಗುವುದಿಲ್ಲ. ಹಾಡಿಗಳಲ್ಲಿರುವ ಜನರು ಸ್ವಾತಂತ್ರ್ಯಕ್ಕೆ ಮೊದಲು ಕೂಡ ಇಲ್ಲಿ ವಾಸ ಮಾಡುತ್ತಿದ್ದರು. ಹೊರಕ್ಕೆ ಕಳಿಸಿದ ಬಳಿಕ ಅವರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಅದಕ್ಕಾಗಿ ಬಿರ್ಸಾ ಮುಂಡಾ ಹೋರಾಟ ಮಾಡಿದ್ದರು. ಪರಿಶಿಷ್ಟ ಪಂಗಡದ ಜನರ ಪ್ರಗತಿಗಾಗಿ ಒಂದೂವರೆ ಲಕ್ಷ ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ರಾಷ್ಟ್ರಪತಿಯವರು ಕೂಡ ಇದೇ ಸಮುದಾಯದವರಾಗಿದ್ದಾರೆ. ವಿಧಾನಪರಿಷತ್‌ನಲ್ಲೂ ಈ ಸಮುದಾಯದ ನಾಯಕರಿಗೆ ಬಿಜೆಪಿಯಿಂದ ಅವಕಾಶ ನೀಡಲಾಗಿದೆ. ಪರಿಶಿಷ್ಟ ಪಂಗಡದ ಅನುದಾನ ಅವರಿಗೇ ಸಿಗಬೇಕು. ಹುಲಿ, ಚಿರತೆ, ಮೊದಲಾದ ಕಾಡುಪ್ರಾಣಿಗಳು ಜನರ ಮೇಲೆ ದಾಳಿ ಮಾಡುತ್ತಿದೆ. ಜನರು ಜಾನುವಾರುಗಳನ್ನು ಬೋನಿನಲ್ಲಿ ಇರಿಸುತ್ತಿದ್ದಾರೆ ಎಂದರು.

ನಾನು ಗ್ರಾಮ ವಾಸ್ತವ್ಯ ಮಾಡಿದ್ದಾಗ ಇಲ್ಲಿ ಜನರು ಬೇಯಿಸಿದ ಗೆಣಸು, ರೊಟ್ಟಿ, ಜೇನು ನೀಡಿದ್ದರು. ಆ ಪ್ರೀತಿ ವಿಶ್ವಾಸವನ್ನು ಎಂದೂ ಮರೆಯಲು ಆಗಲ್ಲ. ಇವರೆಲ್ಲರೂ ಕಪಟ ಇಲ್ಲದ ಜನರು. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಹಾಡಿಗಳಲ್ಲಿ ವಾಸಿಸುವ ಜನರ ಜಮೀನುಗಳ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ShareTweetSendShare
Join us on:

Related Posts

k-sudhakar-welcomes-collins-aerospace-new-mro-facility-in-karnataka

ಕರ್ನಾಟಕದಲ್ಲಿ ಕಾಲಿನ್ಸ್ ಏರೋಸ್ಪೇಸ್‌ನ ನೂತನ ಎಂಆರ್‌ಒ ಘಟಕಕ್ಕೆ ಶುಭ ಕೋರಿದ ಸಂಸದ ಡಾ.ಕೆ.ಸುಧಾಕರ್, ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲು ಮನವಿ

by admin
November 17, 2026
0

ಭಾರತ ಕೇವಲ ವೈಮಾನಿಕ ಮಾರುಕಟ್ಟೆಯಾಗದೆ, ಜಾಗತಿಕ ಏರೋಸ್ಪೇಸ್ ಉತ್ಪಾದನೆ, ನಿರ್ವಹಣೆ ಮತ್ತು ಆವಿಷ್ಕಾರದ ಕೇಂದ್ರವಾಗಿ ಬೆಳೆಯಬೇಕು ಬೆಂಗಳೂರು,  ಕಾಲಿನ್ಸ್ ಏರೋಸ್ಪೇಸ್‌ನ ನೂತನ ಎಂಆರ್‌ಒ ಘಟಕದಿಂದಾಗಿ ಭಾರತದ ವೈಮಾನಿಕ...

classic-legends-business-growth-55-percent-target-2-lakh-bikes-production

ಕ್ಲಾಸಿಕ್ ಲೆಜೆಂಡ್ಸ್ ವಹಿವಾಟು ಬರೋಬ್ಬರಿ ಶೇ. 55ರಷ್ಟು ಏರಿಕೆ, 2 ಲಕ್ಷ ಬೈಕ್ ಉತ್ಪಾದನೆ ಗುರಿ

by admin
November 17, 2026
0

ಬೆಂಗಳೂರು: ಮಹೀಂದ್ರಾ ಸಮೂಹದ ‘ಕ್ಲಾಸಿಕ್ ಲೆಜೆಂಡ್ಸ್’ ಸಂಸ್ಥೆಯ ವಹಿವಾಟು 2026ನೇ ಆರ್ಥಿಕ ವರ್ಷದಲ್ಲಿ ಶೇ. 55ರಷ್ಟು ಭಾರೀ ಏರಿಕೆ ಕಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಶೇ. 40ರಷ್ಟು ಪ್ರಗತಿ...

diageo-learning-for-life-86-specially-abled-trainees-get-jobs-in-bengaluru

ಬೆಂಗಳೂರಿನ 86 ವಿಶೇಷಚೇತನರಿಗೆ ಆಸರೆಯಾದ ‘ಲರ್ನಿಂಗ್ ಫಾರ್ ಲೈಫ್’: ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ

by admin
November 17, 2026
0

ಬೆಂಗಳೂರು: ದೇಶದ ಪ್ರಮುಖ ಆಲ್ಕೋಹಾಲ್ ಪಾನೀಯ ಉತ್ಪಾದನಾ ಸಂಸ್ಥೆಯಾದ ಡಿಯಾಜಿಯೋ ಇಂಡಿಯಾ (ಯುನೈಟೆಡ್ ಸ್ಪಿರಿಟ್ಸ್ ಲಿ.), ತನ್ನ ‘ಲರ್ನಿಂಗ್ ಫಾರ್ ಲೈಫ್’ ಕಾರ್ಯಕ್ರಮದಡಿ ವಿಶೇಷಚೇತನರಿಗೆ ಆತಿಥ್ಯ ಮತ್ತು...

ee-bannada-purse-annu-endigu-nimma-bali-ittukollabedi

ಈ ಬಣ್ಣದ ಪರ್ಸ್ ಅನ್ನು ಎಂದಿಗೂ ನಿಮ್ಮ ಬಳಿ ಇಟ್ಟುಕೊಳ್ಳಬೇಡಿ.

by admin
November 17, 2026
0

​"ನಿಮ್ಮ ಬಳಿ ಇರುವ ಪರ್ಸ್‌ನ ಬಣ್ಣವನ್ನು ನೀವು ಸರಿಯಾಗಿ ಗುರುತಿಸದಿದ್ದರೆ, ನೀವು ಬಡವರಾಗಿಬಿಡುತ್ತೀರಿ. "ನಿಮ್ಮಲ್ಲಿರುವ ಪರ್ಸ್‌ನ ಬಣ್ಣ ನಿಮಗೆ ಗುರುತಿಸದಿದ್ದರೆ, ನೀವು ಕೆಟ್ಟದಾಗಿ ಕಾಣುತ್ತೀರಿ. ಒಬ್ಬ ವ್ಯಕ್ತಿ...

ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಹಕ್ಕು ಯಾರಿಗೂ ಇಲ್ಲ: ರಾಹುಲ್ ಪರ ನಿಂತ ಇಟಲಿ ನಾಯಕನ ಬೆವರಿಳಿಸಿದ ಇಟಲಿ ನಾಯಕಿ

ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಹಕ್ಕು ಯಾರಿಗೂ ಇಲ್ಲ: ರಾಹುಲ್ ಪರ ನಿಂತ ಇಟಲಿ ನಾಯಕನ ಬೆವರಿಳಿಸಿದ ಇಟಲಿ ನಾಯಕಿ

by Shwetha
November 17, 2026
0

ತೆಲಂಗಾಣದ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಭಾರತ್ ಶೃಂಗಸಭೆಯಲ್ಲಿ ವಿದೇಶಿ ರಾಜಕಾರಣಿಯೊಬ್ಬರು ಭಾರತದ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿರುವ ಪ್ರಕರಣವು ಇದೀಗ ರಾಷ್ಟ್ರೀಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram