ಅತಿ ಸುಲಭವಾಗಿ ಮನೆಯಲ್ಲಿ ತಯಾರಿಸಿ ಮೈಸೂರ್ ಪಾಕ್…!
ರುಚಿಕರ , ಘಮ ಘಮ ಸುವಾಸನೆ ಭರಿತ ಮೈಸೂರು ಪಾಕ್ ತಯಾರಿಸಲು ನಿಮಗೆ ಬೇಕು..
ಸ್ವಲ್ಪ ಪ್ರಮಾಣದಲ್ಲಿ ಮಾಡಲು ಬೇಕಾಗುವಷ್ಟು ಪ್ರಮಾಣ – ಹೆಚ್ಚು ಪ್ರಮಾಣದಲ್ಲಿ ಬೇಕಾದಲ್ಲಿ ಕ್ವಾಂಟಿಯನ್ನ ಡಬಲ್ ಮಾಡಿದರೆ ಆಯ್ತು..
1 ಕಪ್ ತುಪ್ಪ
ಅರ್ಧ ಕಪ್ ಎಣ್ಣೆ
1. 30 ಕಪ್ ಕಡಲೇ ಹಿಟ್ಟು
ಏಲಕ್ಕಿ
ಸಕ್ಕರೆ 2 ಕಪ್
ಅರ್ಧ ಕಪ್ ಅಥವ ಮುಕ್ಕಾಲು ಕಪ್ ನೀರು
ಸ್ವಲ್ಪ ಡ್ರೈ ಪ್ರೂಟ್ಸ್ ಚೂರು ( Optional)
ಮಾಡುವ ವಿಧಾನ : ಮೊದಲಿಗೆ 1 ಕಪ್ ತುಪ್ಪ ಅರ್ಧ ಕಪ್ ಎಣ್ಣೆ ಒಟ್ಟಿಗೆ ಕಾಯಿಸಿ ಪಕ್ಕ ಇಟ್ಟುಕೊಂಡಿರಬೇಕು.. ಇಂದು ಕ್ಯಾಕ್ ಪ್ಯಾನ್ ಅಥವ ಮಿಶ್ರಣ ಹಾಕುವುದಕ್ಕೆ ತಟ್ಟೆಯನ್ನ ತುಪ್ಪದಲ್ಲಿ ಚೆನ್ನಾಗಿ ಸವರಿ ತೆಗೆದು ಇಟ್ಟುಕೊಳ್ಳಿ.. ನಂತರ ಒಂದು ನಾನ್ ಸ್ಟಿಕ್ ಪ್ಯಾನ್ ಗೆ 2 ಕಪ್ ಸಕ್ಕರೆ ಅರ್ಧ ಅಥವ ಮುಕ್ಕಾಲು ಕಪ್ ನೀರು ಹಾಕಿ ಕಲಸಿ ಪಾಕ ತಯಾರಿಸಿ.. ಪಾಕ ತಯಾರಾಗೋವರೆಗೂ ಅದನ್ನ ಸ್ಪೂನಿನ ಸಹಾಯದಿಂದ ಆಡಿಸುತ್ತಿರಬೇಕು.. ಪಾಕ ತಯಾರಾಗಿದ್ಯಾ ಎಂದು ನೋಡಲು ಒಂದು ಸ್ಪೂನ್ ನಲ್ಲಿ ಸ್ವಲ್ಪ ಪಾಕ ತೆಗೆದು ಸ್ವಲ್ಪ ಆರಿಸಿ ನಿನ್ನ ಬೆರಳುಗಳ ಸಹಾಯದಿಂದ ಅದನ್ನ ಮುಟ್ಟಿದಾಗ ಅದು ಒಂದು ಎಳೆ ಬರಬೇಕು.. ಆಗ ಪಾಕ ತಯಾರಾಗಿರುತ್ತೆ.. ಅದನ್ನ ಹಾಗೆಯೇ ಸಣ್ಣ ಉರಿಯಲ್ಲೇ ಬಿಡಿ..
ಮತ್ತೊಂದ್ ಕಡೆ ಮತ್ತೊಂದ್ ಪ್ಯಾನ್ ನಲ್ಲಿ 1. 30 ಕಪ್ ಕಡಲೆಹಿಟ್ಟನ್ನ ಸ್ವಲ್ಪ ತುಪ್ಪದ ಸಹಾಯದಿಂದ ಫ್ರೈ ಮಾಡಿ.. ಸೀಯದಂತೆ ಅದನ್ನ ಆಡಿಸುತ್ತಾ ಸಂಪೂರ್ಣವಾಗಿ ಅದರ ಘಮ ಬರಲು ಶುರುವಾದ ನಂತರ ಅದನ್ನ ನಿಧಾನವಾಗಿ ಸಕ್ಕರೆ ಹಾಕಕ್ಕೆ ಸ್ವಲ್ಪ ಸ್ವಲ್ಪವೇ ಹಾಕುತ್ತಾ ಮತ್ತೊಂದು ಕೈನಲ್ಲಿ ಅದನ್ನ ಗಂಟಿಲ್ಲದಂತೆ ಅದನ್ನ ತಿರುಗಿಸಬೇಕು..
ನಂತರ ಆ ಮಿಶ್ರಣ ಇನ್ನೇನು ಸ್ವಲ್ಪ ಗಟ್ಟಿಯಾಗ್ತಿದೆ ಅನ್ನೋ ವಾಗ್ಲೇ ಅದಕ್ಕೆ ನಿದಾನವಾಗಿ ಕಾಯಿಸಿಟ್ಟಿದ್ದ ಎಣ್ಣೆ ತುಪ್ಪದ ಮಿಶ್ರಣವನ್ನ ಹಾಕುತ್ತಾ ನಿರಂತರವಾಗಿ ಮಿಕ್ಸ್ ಮಾಡುತ್ತಲೇ ಇರಬೇಕು.. ಈ ಹಂತದಲ್ಲೇ ಏಲಕ್ಕಿ ಪುಡಿ ಹಾಕಿ ಮತ್ತೆ ಮಿಕ್ಸ್ ಮಾಡುತ್ತಲೇ ಇನ್ನೇನು ತೆಳುವಾಗಿದೆ ಅನ್ನೋವಾಗ್ಲೇ ಆ ಮಿಶ್ರಣವನ್ನ ತುಪ್ಪ ಸವರಿಟ್ಟಿದ್ದ ತಟ್ಟೆ ಅಥವ ಪಾತ್ರಗೆ ಸುರಿದುಬಿಡಿ.. ಅದು ಗಟ್ಟಿಯಾಗೋ ಮೊದಲೇ ಚಾಕುವಿನಲ್ಲಿ ಲಘುವಾಗಿ ನಿಮಗೆ ಬೇಕಾದ ಶೇಪ್ ನಲ್ಲಿ ಕಟ್ ಮಾಡಿ ಬಿಟ್ಟುಬಿಡಿ.. ಅದ್ರ ಮೇಲೆ ಬೇಕಾದ್ರೆ ಗೋಡಂಬಿ, ಪಿಸ್ತಾ , ಬಾದಾಮಿ ಚೂರುಗಳನ್ನ ಹಾಕಿ ಬಿಡಿ.. ಸ್ವಲ್ಪ ಆರಿದ ನಂತರ ಕಟ್ ಹಾಕಿದ್ದ ಭಾಗದಲ್ಲೇ ಚಾಕುವಿನಿಂದ ಅದೇ ಶೇಪ್ ನಲ್ಲಿ ಕಟ್ ಮಾಡಿ.. ಮೃದುವಾದ ಮೈಸೂರು ಪಾಕ್ ಸವಿಯಲು ಸಿದ್ಧ..
ಚಿಕನ್ ಮಂಚೂರಿ
ಬೇಕಾಗುವ ಸಾಮಾಗ್ರಿಗಳು
ಬೋನ್‌ಲೆಸ್ ಚಿಕನ್ – 1/2 ಕೆಜಿ
ಮೈದಾಹಿಟ್ಟು – 5 ಚಮಚ
ಕಾರ್ನ್ ಸ್ಟಾರ್ಚ್ – 3 ಚಮಚ
ಕಾಳುಮೆಣಸಿನ ಹುಡಿ – 1/4 ಚಮಚ
ನೀರು – 1/4 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಹುರಿಯಲು ಎಣ್ಣೆ
ಎಣ್ಣೆ – 1 ಟೇಬಲ್ ಚಮಚ
ಸಣ್ಣಗೆ ಹೆಚ್ಚಿದ ಈರುಳ್ಳಿ – 1/2 ಕಪ್
ಹಸಿಮೆಣಸಿನಕಾಯಿ – 5-6
ಬೆಳ್ಳುಳ್ಳಿ – 4 ರಿಂದ 5 ಎಸಳು
ಟೊಮೆಟೊ ಕೆಚಪ್ – 3 ಚಮಚ
ರೆಡ್ ಚಿಲ್ಲಿ ಸಾಸ್ – 2 ಚಮಚ
ಸೋಯಾ ಸಾಸ್ – 4 ಚಮಚ
ವಿನಿಗರ್ – 2 ಚಮಚ
ನೀರು – 6 ಟೇಬಲ್ ಚಮಚ
ಕಾರ್ನ್ ಸ್ಟ್ರ್ಯಾಚ್ – 1 ಚಮಚ

ಮಾಡುವ ವಿಧಾನ
ಮೊದಲಿಗೆ ಮೈದಾಹಿಟ್ಟು, ಕಾರ್ನ್ ಸ್ಟಾರ್ಚ್, ಉಪ್ಪು, ಕಾಳುಮೆಣಸಿನ ಹುಡಿ ಬೆರೆಸಿ, ನಿಧಾನವಾಗಿ ಅಗತ್ಯವಿರುವಷ್ಟು ನೀರು ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಂತರ ಅದಕ್ಕೆ ಸ್ವಚ್ಛಗೊಳಿಸಿದ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕಲಸಿ. 15 – 20 ನಿಮಿಷಗಳ ಕಾಲ ಹಾಗೆಯೇ ಬಿಡಿ
ಬಳಿಕ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ ಅದಕ್ಕೆ ಕಲೆಸಿಟ್ಟುಕೊಂಡ ಚಿಕನ್ ತುಂಡುಗಳನ್ನು ಹಾಕಿ ಹೊಂಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ.
ನಂತರ ಪಾನ್ ಗೆ 1 ಟೇಬಲ್ ಚಮಚ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ನಂತರ ಅದಕ್ಕೆ ಈರುಳ್ಳಿ, ಹಸಿಮೆಣಸು, ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಬಳಿಕ ಟೊಮೆಟೊ ಕೆಚಪ್, ರೆಡ್ ಚಿಲ್ಲಿ ಸಾಸ್ ಸೇರಿಸಿ ಎಣ್ಣೆ ಬಿಡುವವರೆಗೂ ಕಲಸಿ.
ನಂತರ ಅದಕ್ಕೆ ಸೋಯಾ ಸಾಸ್, ವಿನಿಗರ್ ಬೆರೆಸಿ ಮಿಶ್ರ ಮಾಡಿ. ಬಳಿಕ ಕಾರ್ನ್ ಸ್ಟಾರ್ಚ್ ಗೆ ನೀರು ಸೇರಿಸಿ ಬೆರೆಸಿ. ಮಿಶ್ರಣ ದಪ್ಪಗಾಗುವವರೆಗೂ ಚೆನ್ನಾಗಿ ಕಲಸಿ. ಅದಕ್ಕೆ ಹುರಿದಿಟ್ಟುಕೊಂಡ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಚಿಕನ್ ಮಂಚೂರಿ ಸಿದ್ಧವಾಗಿದೆ. ಇದನ್ನು ಫ್ರೈಡ್ ರೈಸ್ ಅಥವಾ ನೂಡಲ್ಸ್ ಜೊತೆ ಸವಿಯಿರಿ.
ಸೂಪರ್ ಟೇಸ್ಟಿ ಮಿಕ್ಸೆಡ್ ವೆಜ್ ಫ್ರೈಡ್ ರೈಸ್
ಬೇಕಾಗುವ ಸಾಮಗ್ರಿಗಳು
ಅಕ್ಕಿ – 1 ಕಪ್
ದೊಡ್ಡ ಈರುಳ್ಳಿ – 1
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ – 1/2 ಕಪ್
ಸಣ್ಣಗೆ ಹೆಚ್ಚಿದ ಕ್ಯಾರೆಟ್ – 1/2 ಕಪ್
ಸಣ್ಣಗೆ ಹೆಚ್ಚಿದ ಬೀನ್ಸ್ – 1/4 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಟೊಮೆಟೊ ಸಾಸ್ – 1 ಚಮಚ
ಸೋಯಾ ಸಾಸ್ – 1 ಚಮಚ
ರೆಡ್ ಚಿಲ್ಲಿ ಸಾಸ್ – 1 ಚಮಚ
ಗಾರ್ಲಿಕ್ ಫ್ರೈಡ್ ರೈಸ್ ಹುಡಿ – 1 ಚಮಚ
ಎಣ್ಣೆ – 3 ಚಮಚ
ಮಾಡುವ ವಿಧಾನ

ಮೊದಲಿಗೆ ಅಕ್ಕಿಯನ್ನು ತೊಳೆದು ಉದುರಾಗಿ ಅನ್ನವನ್ನು ಮಾಡಿಟ್ಟುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಕ್ಯಾಪ್ಸಿಕಂ, ಕ್ಯಾರೆಟ್, ಬೀನ್ಸ್ ಸೇರಿಸಿ ಹುರಿಯಿರಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಈಗ ಟೊಮೆಟೊ ಸಾಸ್, ಸೋಯಾ ಸಾಸ್, ರೆಡ್ ಚಿಲ್ಲಿ ಸಾಸ್, ಗಾರ್ಲಿಕ್ ಫ್ರೈಡ್ ರೈಸ್ ಪೌಡರ್ ಸೇರಿಸಿ ಚೆನ್ನಾಗಿ ಬೆರೆಸಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಅದಕ್ಕೆ ಮಾಡಿಟ್ಟುಕೊಂಡ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈಗ ಸೂಪರ್ ಟೇಸ್ಟಿ ಫ್ರೈಡ್ ರೈಸ್ ಸವಿಯಲು ಸಿದ್ಧವಾಗಿದೆ.
ಸೋಯಾ ಚಂಕ್ಸ್ ಮಂಚೂರಿ
ಬೇಕಾಗುವ ಸಾಮಾಗ್ರಿಗಳು
ಸೋಯಾ ಚಂಕ್ಸ್ – 1 ಕಪ್
ಮೊಸರು – 4 ಚಮಚ
ಮೈದಾ ಹಿಟ್ಟು – 2 ಚಮಚ
ಕಾರ್ನ್ ಫ್ಲೋರ್ – 2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಮೆಣಸಿನ ಪುಡಿ – 1 ಚಮಚ
ಗರಂ ಮಸಾಲ – 1/2 ಚಮಚ
ಚಾಟ್ ಮಸಾಲಾ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – 2 ಚಮಚ
ಬೆಳ್ಳುಳ್ಳಿ – 5 ಎಸಳು
ಈರುಳ್ಳಿ – 1
ಹಸಿಮೆಣಸು – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1/2 ಚಮಚ
ರೆಡ್ ಚಿಲ್ಲಿ ಸಾಸ್ – 1 ಚಮಚ
ಟೊಮೆಟೊ ಸಾಸ್ – 1 ಚಮಚ
ಸೋಯಾ ಸಾಸ್ – 1 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಹುರಿಯಲು ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಸೋಯಾ ಚಂಕ್ಸ್ ಅನ್ನು ಬಿಸಿನೀರಿನಲ್ಲಿ 10 ನಿಮಿಷ ನೆನೆಸಿಡಿ. ಬಳಿಕ ತಣ್ಣೀರಿನಲ್ಲಿ ತೊಳೆದು ನೀರನ್ನು ಹಿಂಡಿ ತೆಗೆಯಿರಿ.
ನಂತರ ಒಂದು ಪಾತ್ರೆಗೆ ಮೊಸರು, ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಮೆಣಸಿನ ಪುಡಿ, ಗರಂ ಮಸಾಲಾ, ಚಾಟ್ ಮಸಾಲಾ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಸೋಯಾ ಚಂಕ್ಸ್ ಹಾಕಿ ಚೆನ್ನಾಗಿ ಬೆರೆಸಿ, ಅರ್ಧ ಗಂಟೆ ಹಾಗೆಯೇ ಬಿಡಿ.
ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸೋಯಾ ಚಂಕ್ಸ್ ಗಳನ್ನು ಡೀಪ್ ಫ್ರೈ ಮಾಡಿ ಪಕ್ಕದಲ್ಲಿರಿಸಿಕೊಳ್ಳಿ.
ಈಗ ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸು ಹಾಕಿ ಹುರಿಯಿರಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ ರೆಡ್ ಚಿಲ್ಲಿ ಸಾಸ್, ಟೊಮೆಟೊ ಸಾಸ್, ಸೋಯಾ ಸಾಸ್ ಸೇರಿಸಿ. ಇದಕ್ಕೆ ಕಾರ್ನ್ ಫ್ಲೋರ್ ನೀರಿನಲ್ಲಿ ಕಲೆಸಿ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಹುರಿದಿಟ್ಟುಕೊಂಡ ಸೋಯಾ ಚಂಕ್ಸ್ ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿದರೆ ಸೋಯಾ ಚಂಕ್ಸ್ ಮಂಚೂರಿ ಸವಿಯಲು ಸಿದ್ಧ.
ಎಗ್ ಕಬಾಬ್
ಬೇಕಾಗುವ ಸಾಮಗ್ರಿಗಳು
ಮೊಟ್ಟೆಗಳು – 6
ಕೆಂಪು ಮೆಣಸಿನ ಪುಡಿ 2 ಟೀಸ್ಪೂನ್,
ಕಡ್ಲೆಹಿಟ್ಟು 2 ಚಮಚ
ಕೊತ್ತಂಬರಿ ಹುಡಿ 1 ಟೀಚಮಚ
ಗರಂ ಮಸಾಲ 1/2 ಟೀಸ್ಪೂನ್
ಸಣ್ಣದಾಗಿ ಕತ್ತರಿಸಿದ ಈರುಳ್ಳಿ -1
ಕರಿಮೆಣಸು ಪುಡಿ 1 ಟೀಸ್ಪೂನ್
ಬ್ರೆಡ್ ಹುಡಿ – 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಹುರಿಯಲು ಎಣ್ಣೆ
ಮಾಡುವ ವಿಧಾನ

ಎಗ್ ಕಬಾಬ್ ತಯಾರಿಸಲು, ಮೊದಲು ಮೊಟ್ಟೆಗಳನ್ನು 15 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ, ಒಂದು ಬಟ್ಟಲಿನಲ್ಲಿ ಮೊಟ್ಟೆಯ ಸಿಪ್ಪೆ ತೆಗೆದು ಅವುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
ಇದರ ನಂತರ, ಕರಿಮೆಣಸು ಪುಡಿ, ಕೊತ್ತಂಬರಿ ಹುಡಿ, ಈರುಳ್ಳಿ, ಗರಂ ಮಸಾಲ, ಕಡ್ಲೆಹಿಟ್ಟು, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ನಂತರ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕತ್ತರಿಸಿದ ಮೊಟ್ಟೆಗಳನ್ನು ಸೇರಿಸಿ ಮಿಶ್ರ ಮಾಡಿ.
ಈಗ ಈ ಮಿಶ್ರಣದಿಂದ ಸಣ್ಣ ಕಬಾಬ್‌ಗಳನ್ನು ತಯಾರಿಸಿ ಅದಕ್ಕೆ ಬ್ರೆಡ್ ಹುಡಿ ಲೇಪಿಸಿ.
ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದ, ನಂತರ ಕಬಾಬ್‌ಗಳನ್ನು ಬಾಣಲೆಯಲ್ಲಿ ಹಾಕಿ ಹೊಂಬಣ್ಣಕ್ಕೆ ಬರುವವರೆಗೆ ಡೀಪ್ ಫ್ರೈ ಮಾಡಿ. ಬಿಸಿಯಾದ ಮೊಟ್ಟೆಯ ಕಬಾಬ್‌ಗಳನ್ನು ಹಸಿರು ಚಟ್ನಿಯೊಂದಿಗೆ ಸೇವಿಸಿ.








