ಅಭಿಮಾನಿಯ ಮುಖಕ್ಕೆ ಮೂತ್ರ ವಿಸರ್ಜನೆ ಮಾಡಿದ ಖ್ಯಾತ ಗಾಯಕಿ…! VIDEO
ಅಮೆರಿಕಾ : ಅಮೆರಿಕದ ಖ್ಯಾತ ಗಾಯಕಿ ತನ್ನ ಲೈವ್ ಕಾನ್ಸರ್ಟ್ನಲ್ಲಿ ಅಭಿಮಾನಿಗಳ ಜೊತೆಗೆ ಅಸಹ್ಯಕರವಾಗಿ ವರ್ತಿಸಿ ತನ್ನ ವರ್ಚಸ್ಸು ಕಳೆದುಕೊಂಡಿದ್ಧಾರೆ.. ಈ ರೀತಿಯಾದ ದುರ್ವತನೆಯಿಂದಾಗಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಗಾಯಕಿ, ಬರಹಗಾರ್ತಿ ಸೋಫಿಯಾ ಉರಿಸ್ಟ ಅವರ ಲೈವ್ ಕಾನ್ಸರ್ಟ್ ನಲ್ಲಿ ಈ ಘಟನೆ ನಡೆದಿದೆ.. ಅಪಾರ ಪ್ರಮಾಣದಲ್ಲಿ ಸೋಫಿಯಾ ಉರಿಸ್ಟ ಅಭಿಮಾನಿಗಳನ್ನ ಹೊಂದಿದ್ದು ಈ ಕಾನ್ಸರ್ಟ್ ಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ಈ ಸಂದರ್ಭದಲ್ಲಿ ಗಾಯಕಿ ಸೋಫಿಯಾ ಉರಿಸ್ಟ ತನ್ನ ಅಭಿಮಾನಿಯೊಬ್ಬನ್ನನ್ನು ವೇದಿಕೆಗೆ ಕರೆದು ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಎಲ್ಲರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಹೌದು ಇತ್ತೀಚೆಗೆ ನಡೆದ ಈ ಕಾರ್ಯಕ್ರಮದಲ್ಲಿ ಸೋಫಿಯಾ ಈ ರೀತಿಯಾಗಿ ಅಸಹ್ಯವಾಗಿ ವರ್ತಿಸಿದ್ದಾರೆ.. ಅಭಿಮಾನಿಯೊಬ್ಬನನ್ನ ಸ್ಟೇಜ್ ಮೇಲೆ ಕರೆದಿರುವ ಸೋಫಿಯಾ ಖುಷಿಯಿಂದ ಅಭಿಮಾನಿ ಆಗಮಿಸುತ್ತಿದ್ದಂತೆ ಅವನನ್ನ ಅಲ್ಲೇ ಕೆಳಗೆ ಮಲಗಿಸಿ ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದಕ್ಕೆ ಅಲ್ಲಿ ನೆರೆದಿದ್ದವರು ಕೂಡ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.
https://youtu.be/-ytsOuEj2Pk
ಅಲ್ಲದೇ ಸೋಫಿಯಾ ಹೀಗೆ ಮಾಡಿರುವುದಕ್ಕೆ ಕ್ಷಮೆ ಯಾಚಿಸಬೇಕು ಎಂಬ ಒತ್ತಾಯ ಹೆಚ್ಚಾದ ಬೆನ್ನಲ್ಲೆ ಸೋಫಿಯಾ ಕೂಡ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ತನ್ನ ನಡೆಯ ಬಗ್ಗೆ ಕ್ಷಮೆ ಕೇಳಿರುವ ಸೋಫಿಯಾ, ಯಾರನ್ನೂ ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲಾ ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ ಸೋಫಿಯಾ ವರ್ತನೆ ವಿರುದ್ಧ ಅವರ ಕಾನ್ಸರ್ಟ್ ವೇಳೆ ಸ್ಟೇಜ್ ಮೇಲೆ ಇದ್ದ ಮ್ಯೂಸಿಕ್ ಟೀಮ್ ನ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಫಿಯಾ ಈ ಕಾರ್ಯಕ್ರಮ ಮಾಡುವಾಗ ತುಂಬಾ ಉತ್ಸುಕರಾಗಿದ್ದರು. ಆದರೆ ಅವರಿಂದ ನಾವು ಈ ರೀತಿಯಾದ ವರ್ತನೆಯನ್ನ ನಿರೀಕ್ಷೆ ಮಾಡಿರಲಿಲ್ಲಾ. ನಮ್ಮ ಮುಂದಿನ ಕಾರ್ಯಕ್ರಮದಲ್ಲಿ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.