ಒಂದೇ ಹಾಡಲ್ಲಿ ಇಡೀ ಸ್ಯಾಂಡಲ್ ವುಡ್ ತೋರಿಸಿಬಿಟ್ಟ “ಧೀರನ್”..!
ಬೆಂಗಳೂರು : ಬೆಳಗು ನೀ ಸೂರ್ಯನಂತೆ.. ಮಿನುಗು ನೀ ಚಂದ್ರನಂತೆ… ಮಿಂಚಾಗು ಕ್ಷಿಪಣಿಯಂತೆ.. ಮೆರೆಯೋ ನೀ ರಾಜನಂತೆ.. ಅಂತ ಒಂದೇ ಒಂದು ಹಾಡಿನಲ್ಲಿ ಇಡೀ ಸ್ಯಾಂಡಲ್ ವುಡ್ ದರ್ಶನ ಮಾಡಿಸಿದೆ “ಧೀರನ್” ಸಿನಿಮಾ..
ಒಂದೇ ಒಂದು ಹಾಡು ಇಡೀ ಸ್ಯಾಂಡಲ್ ನಟರ ಅಭಿಮಾನಿಗಳನ್ನ ಒಂದು ಮಾಡಿದೆ.. ಅದ್ರಲ್ಲೂ ಉಪೇಂದ್ರ ಅವರ ಧ್ವನಿಯಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ.. ಭರ್ಜರಿ ಚೇತನ್ ಅವರ ಲಿರಿಕ್ಸ್ ಬಗ್ಗೆ ಅಂತು ಹೇಳೋದೇ ಬೇಡ…
ಕಷ್ಟಾನ ಪಟ್ಟೋನೆ ಎಂದೆದೂ ಬೆಳೆಯೋದು… ನೀಯತ್ತು ಇದ್ದೋನೆ ಕೊನೆಗೆಂದು ಉಳಿಯೋದು ಅನ್ನೋ ಸಾಲುಗಳನ್ನ ಮನಸ್ಸಿಗೆ ನಾಟೋ ಹಾಗೆ ಬರೆದಿದ್ದಾರೆ ಚೇತನ್..
ಸಾಧನೆ ಮಾಡಿ ಕನ್ನಡದ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿರುವ ನಮ್ಮ ದಿಗ್ಗಜರು ಈ ಮಟ್ಟದ ಸಾಧನೆ ಮಾಡಲಿಕ್ಕೆ ಅವರು ಪಟ್ಟಿರುವ ಶ್ರಮ , ಕಷ್ಟವನ್ನ ಸುಲಭವಾಗಿ ಬರಹವಾಗಿ ಇಳಿಸಿ , ಅದನ್ನ ಗಾನವಾಗಿಸಿ ದಿಗ್ಗಜರಿಗೆ ಗೌರವ ಸಲ್ಲಿಸಲಾಗಿದೆ..
ಅಷ್ಟೇ ಅಲ್ಲ ಈ ಹಾಡಿನ ಸಾಲುಗಳ ಮೂಲಕ ಇಂತಹ ದಿಗ್ಗಜರಂತೆಯೇ ತಮ್ಮ ವ್ಯಕ್ತಿತ್ವವನ್ನ ರೂಪಿಸಿಕೊಳ್ಳುವಂತೆ ಯುವ ನಟರು , ಯುವ ಪೀಳಿಗೆಗೆ ಪ್ರೇರಣೆ ನೀಡಲಾಗಿದೆ..
ಸಾಂಗ್ ಅಲ್ಲಿನ ಪವರ್ ಅದನ್ನ ನೋಡಿದಾಗ್ಲೇ ಅರಿವಾಗೋದು.. ಹಾಡಿನ ಕೊನೆವರೆಗೂ ಕಣ್ಣು ಮಿಟುಕಿಸದೇ ಹಾಡನ್ನೇ ನೋಡ್ತಿರಬೇಕು ಅನ್ನಿಸುವಂತೆ ಕನ್ನಡಾಭಿಮಾನಿಗಳ ಮನಸ್ಸಿಗೆ ಹಾಡು ಹಿಡಿಸಿದೆ ಅನ್ನೋದ್ರಲ್ಲಿ ನೋ ಡೌಟ್..
ವರನಟ ಡಾ ರಾಜ್ ಕುಮಾರ್ , ವಿಷ್ಣವರ್ಧನ್ , ಶಂಕರ್ ನಾಗ್ , ಅಂಬರೀಷ್ , ರವಿಚಂದ್ರನ್ , ಉಪೇಂದ್ರ , ಶಿವರಾಜ್ ಕುಮಾರ್ , ಜಗ್ಗೇಶ್ , ಪುನೀತ್ ರಾಜ್ ಕುಮಾರ್ , ಸುದೀಪ್ , ಯಶ್ , ದರ್ಶನ್ , ಶ್ರೀ ಮುರುಳಿ , ಗಣೇಶ್ , ರಕ್ಷಿತ್ ಶೆಟ್ಟಿ , ಧ್ರುವ ಸರ್ಜಾ , ವಿಜಯ್ ರಾಘವೇಂದ್ರ , ಪ್ರಜ್ವಲ್ ದೇವರಾಜ್ , ಡಾಲಿ ಧನಂಜಯ್ , ದುನಿಯಾ ವಿಜಯ್ ಹೀಗೆ ಎಲ್ಲಾ ಸಮಯದ ದಿಗ್ಗಜರಿಗೆ ಸಿನಿಮಾದಲ್ಲಿ ಗೌರವಿಸಲಾಗಿದೆ..
ಬರಿ ಸಿನಿಮಾ ರಂಗವಷ್ಟೇ ಅಲ್ಲ ಉದ್ಯಮ ಲೋಕದ ಸಾಧಕರು, ದಾನಿಗಳು , ಕಾಲಜ್ಞಾನಿಗಳು , ಹೋರಾಟಗಾರರಿಗೂ ಕೂಡ ಈ ಹಾಡಿನ ಮೂಲಕವೇ ಗೌರವ ಸಲ್ಲಿಸಲಾಗಿರೋದೇ ವಿಶೇಷ.. ಅಷ್ಟೇ ಅಲ್ಲ ನಮ್ಮ ಕ್ರಿಕೆಟ್ ಹೆಮ್ಮೆ RCB , ಇನ್ಫೋಸಿಸ್ ನ ಸುಧಾಮೂರ್ತಿ , ರಾಹುಲ್ ದ್ರಾವಿಡ್ ಅದ್ರಲ್ಲೂ ವಿಶೇಷವಾಗಿ ಕನ್ನಡದ ಸಾಧಕರಿಗೆ ಗೌರವ ಸಲ್ಲಿಸಲಾಗಿದೆ..
ಇನ್ನೂ “ಧೀರನ್” ಸಿನಿಮಾ ಬಗ್ಗೆ ಮಾತನಾಡೋದಾದ್ರೆ , YBN ಸ್ವಾಮಿ , ಲಕ್ಷಾ ಶೆಟ್ಟಿ, BV ಬಾಸ್ಕರ್ , ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಾಯಿದ್ದಾರೆ. ರಘು ಪಾಂಡವೇಶ್ವರ್ , ತೇಜಶ್ವಿನಿ ಪ್ರಕಾಶ್ , ವೀಣಾ ಸುಂದರ್ , ವಿದ್ಯಾ ಮೂರ್ತಿ, ದಯಾನಂದ್ , ರವೀಂದ್ರ ಸೇರಿದಂತೆ ಹಲವರ ತಾರಾಬಳಗವಿದೆ..
YBN ಸ್ವಾಮಿ ಅವರೇ ಸಿನಿಮಾವನ್ನ ನಿರ್ದೇಶಿಸಿದ್ದು, “ಧೀರನ್” ಸಿನಿ ಸರ್ವೀಸಸ್ ಸಿನಿಮಾ ನಿರ್ಮಾಣ ಮಾಡಿದೆ..