ಕುಟುಂಬದಿಂದ ಒಬ್ಬರೇ ಚುನಾವಣೆಗೆ ನಿಲ್ಲಲಿ ಎಂದು ಕಾನೂನು ತರಲಿ : ರೇವಣ್ಣ ಗರಂ hd-revanna saaksha tv
ಹಾಸನ : ಸೂರಜ್ ರೇವಣ್ಣ ರಾಜಕೀಯ ಪ್ರವೇಶ ವಿಚಾರವಾಗಿ ಎದ್ದಿರುವ ಟೀಕೆಗಳಿಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ, ಕುಟುಂಬದಿಂದ ಒಬ್ಬರೇ ಚುನಾವಣೆಗೆ ನಿಲ್ಲಲಿ ಎಂದು ಕಾನೂನು ತರಲಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಯಾವುದು..? ಇಂಧಿರಾಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಬಂದರು.
ಯಡಿಯೂರಪ್ಪ ಅವರ ಮಕ್ಕಳು ರಾಜಕೀಯಕ್ಕೆ ಬಂದರು. ನಾವೇನು ಹಿಂದುಗಡೆ ಬಾಗಿಲಿನಿಂದ ಬರುತ್ತಿದ್ದೇವಾ ಎಂದು ಪ್ರಶ್ನಿಸಿದರು.
ಇನ್ನು ರಾಜಕೀಯ ಪಕ್ಷಗಳೇ ಒಂದು ಕಾನೂನು ತರಲಿ. ಕುಟುಂಬದಿಂದ ಒಬ್ಬರೇ ನಿಲ್ಲಲಿ ಎಂದು ಕಾನೂನು ತರಲಿ. ಆ ಕಾನೂನನ್ನು ನಾನು ಒಪ್ಪುತ್ತೇನೆ ಎಂದು ಬಿಜೆಪಿ-ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಜೆಡಿಎಸ್ ಪೆÇ್ರಡಕ್ಷನ್ ಪಾರ್ಟಿ. ಕಾಂಗ್ರೆಸ್-ಬಿಜೆಪಿಯಲ್ಲಿರುವವರೆಲ್ಲಾ ದೇವೇಗೌಡರ ಕಂಪನಿಲಿ ಸರ್ವಿಸ್ ಆಗಿರುವವರು. ಪೆÇ್ರಡಕ್ಷನ್ ಬೈ ಎಚ್.ಡಿ.ದೇವೇಗೌಡ ಬಿಜೆಪಿ-ಕಾಂಗ್ರೆಸ್ ನಲ್ಲಿರೋದು ಜೆಡಿಎಸ್ ಪೆÇ್ರಡಕ್ಷನ್ ನವರು ಎಂದರು.
ಇನ್ನು ಹಾಸನದಿಂದ ಸೂರಜ್ ರೇವಣ್ಣ ಎಂಎಲ್ ಎ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರ ಈಗ ಭಾರಿ ಸದ್ದು ಮಾಡುತ್ತಿದೆ. ಈ ಬಗ್ಗೆ ಬಿಜೆಪಿ ಟ್ವಿಟ್ಟರ್ ನಲ್ಲಿ ಕುಟುಂಬರಾಜಕಾರಣಜೆಡಿಎಸ್ ಎಂದು ಕುಟುಕಿದೆ









