ನೊಬೆಲ್ ವಿಶ್ವ ದಾಖಲೆ ಬರೆದ ಅಲ್ಲು ಅರ್ಜುನ್ ಪುತ್ರಿ..!
ಹೈದರಾಬಾದ್ : ಟಾಲಿವುಡ್ ನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹಾ ಚೆಸ್ ನಲ್ಲಿ ಹೊಸ ಸಾಧನೆ ಮಾಡಿದ್ದಾಳೆ.. ಚೆಸ್ ನಲ್ಲಿ ನೊಬೆಲ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದಾಳೆ. ಅಲ್ಲು ಅರ್ಹಾ ಕುಟುಂಬದ ಸದಸ್ಯರ ಎದುರು ಚೆಸ್ ಆಡಿದ್ದಾಳೆ. ಈ ವೀಡಿಯೋವನ್ನು ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಅಲ್ಲು ಅರ್ಹಾಗೆ ನೊಬೆಲ್ ವರ್ಲ್ಡ್ ರೆಕಾರ್ಡ್ ನೀಡಿ ಗೌರವಿಸಲಾಗಿದೆ. ಅತಿ ಚಿಕ್ಕ ವಯಸ್ಸಿಗೆ (5 ವರ್ಷ ) ಅಲ್ಲು ಅರ್ಹಾ ಚೆಸ್ ಟ್ರೇನರ್ ಆಗಿ ರೆಕಾರ್ಡ್ ಮಾಡಿದ್ದಾಳೆ. ಅಂದ್ಹಾಗೆ ಅಲ್ಲು ಪುತ್ರಿ ಅರ್ಹಾ ಪೌರಾಣಿಕ ಕಥಾಹಂದರ ಇರುವ ಸಮಂತಾ ನಟನೆಯ ಶಾಕುಂತಲಂ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾಳೆ..
https://www.instagram.com/reel/CWhhPDWlrIf/?utm_source=ig_web_copy_link
ಮತ್ತೊಂದೆಡೆ ಅಲ್ಲು ಅರ್ಜುನ್ ಅವರು ಬುನಿರೀಕ್ಷೆಯ ಪದಯಾನ್ ಇಂಡಿಯಾ ಸಿನಿಮಾ ಪುಷ್ಪದಲ್ಲಿ ಬ್ಯುಸಿಯಾಗಿದ್ದಾರೆ.. ಸಿನಿಮಾದ ನಾಲ್ಕು ಹಾಡುಗಳು ಈಗಾಗಲೇ 5 ಭಾಷೆಗಳಲ್ಲಿಯೂ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ.. ಡಿಸೆಂಬರ್ 17 ಕ್ಕೆ ಸಿನಿಮಾ ರಿಲೀಸ್ ಆಗಲಿದೆ.. ಈ ಸಿನಿಮಾಗೆ ಸುಕುಮಾರನ್ ಡೈರೆಕ್ಷನ್ ಹೇಳಿದ್ದು, ಅಲ್ಲು ವಿಭಿನ್ನ ಲುಕ್ ನಲ್ಲಿ ದರ್ಶನ ನೀಡಲು ಸಜ್ಜಾಗ್ತಾಯಿದ್ದಾರೆ.. ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ..
https://www.instagram.com/reel/CWhhPDWlrIf/?utm_source=ig_web_copy_link








