ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ ಎಸ್ ನಾರಾಯಣ್ ಪುತ್ರ..!
ಸ್ಟಾರ್ ನಿರ್ದೇಶಕ ಹಾಗೂ ನಟ ಎಸ್ ನಾರಾಯಣ್ ಪುತ್ರ ಪಂಕಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಸಮಾರಂಭದಲ್ಲಿ ಅನೇಕ ಚಿತ್ರರಂಗದ ತಾರೆಯರು , ರಾಯಕೀಯ ನಾಯಕರು, ಗಣ್ಯರು ಭಾಗಿಯಾಗಿದ್ರು..ಮೈಸೂರಿನಲ್ಲಿ ಸರಳವಾಗಿ ಮದುವೆ ಸಮಾರಂಭ ನೆರವೇರಿದೆ.. ಮದುವೆಗೆ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕೊರೊನಾ ಕಾರಣಕ್ಕೆ ಕೇವಲ ಕುಟುಂಬಸ್ಥರು ಮತ್ತು ಆಪ್ತರನ್ನು ಮಾತ್ರ ಆಹ್ವಾನಸಲಾಗಿತ್ತು.ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‌ನಲ್ಲಿ ಪಂಕಜ್ ಮದುವೆ ನಡೆದಿದೆ.
ಎಸ್ ನಾರಾಯಣ್ ಅವರ ಮಗ ಪಂಕಜ್ ರಕ್ಷಿತಾ ಎನ್ನುವವರ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಮದುವೆಗೆ ನಟ ದರ್ಶನ್ ಕೂಡ ಸಾಕ್ಷಿಯಾದರು. ಹಿರಿಯ ನಟಿ ಶ್ರುತಿ, ವಿನೋದ್ ಪ್ರಭಾಕರ್, ಚಿಕ್ಕಣ್ಣ, ನಟಿ ಸುಧಾರಾಣಿ, ಸೃಜನ್ ಲೋಕೇಶ್, ಗಿರಿಜಾ ಲೋಕೇಶ್, ಯೋಗರಾಜ್ ಭಟ್, ದರ್ಶನ್, ವಿನೋದ್ ಪ್ರಭಾಕರ್,ಚಿಕ್ಕಣ್ಣ, ವಿಷ್ಣುವರ್ಧನ್ ಕುಟುಂಬ, ಶ್ವೇತಾ ಚೆಂಗಪ್ಪ ಸೇರಿದಂತೆ ಹಲವರು ಮದುವೆಗೆ ಬಂದು ನವ ವಧು ವರರಿಗೆ ಹರಸಿದ್ದಾರೆ.
ಪಂಕಜ್ 16 ವರ್ಷ ಇದ್ದಾಗಲೇ ಚೈತ್ರದ ಚಂದ್ರಮ ಸಿನಿಮಾ ಮೂಲಕ ನಟನಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ರು. ಆ ನಂತರ ಚೆಲುವಿನ ಚಿಲಿಪಿಲಿ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ನಂತರ ದುಷ್ಟ , ದಾಂಡಿಗ ಸಿನಿಮಾದಲ್ಲಿ ನಟಿಸಿದ್ದಾರೆ. ದಕ್ಷ, ಒಡೆಯ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
“ದಿಲ್ ಪಸಂದ್” ಫಸ್ಟ್ ಲುಕ್ ಗೆ ಜನಮನ್ನಣೆ