ಕಳೆದ ನಾಲ್ಕೈದು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ತಗ್ಗಿತ್ತು. ಆದ್ರೆ ಇಂದು ಮತ್ತೆ ಹಿರೇಬಾಗೇವಾಡಿ ಗ್ರಾಮದಲ್ಲಿಯೇ 11 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗುವ ಮೂಲಕ ಕುಂದಾನಗರಿ ಜನರನ್ನು ಬೆಚ್ಚಿ ಬೀಳಿಸಿದೆ. ಹೌದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದೆ. ಇದರಲ್ಲಿ ಇಂದು ಒಂದೇ ದಿನ ಬೆಳಗಾವಿ ತಾಲೂಕಿನ ಕೊರೊನಾ ಹಾಟ್‍ಸ್ಪಾಟ್ ಎಂದೇ ಗುರುತಿಸಿಕೊಂಡಿರುವ ಹಿರೇಬಾಗೇವಾಡಿ ಗ್ರಾಮದಲ್ಲಿಯೇ ಹೊಸದಾಗಿ 11 ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ. ಇವರೆಲ್ಲರನ್ನು ಕಳೆದ ಎಪ್ರಿಲ್ 26ರಿಂದ ಬೆಳಗಾವಿಯ ವಿವಿಧ ಹೋಟೆಲ್‍ಗಳಲ್ಲಿ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಈ ಮೂಲಕ ಹಿರೇಬಾಗೇವಾಡಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 49ಕ್ಕೆ ಏರಿಕೆಯಾದ್ರೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 85 ಕೊರೊನಾ ಸೋಂಕಿತರು ಈವರೆಗೆ ದೃಢಪಟ್ಟಿದ್ದಾರೆ. ಕಳೆದ ನಾಲ್ಕೈದು ದಿನಗಳಲ್ಲಿ ನಿನ್ನೆ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಹೊರತುಪಡಿಸಿದ್ರೆ ಯಾವುದೇ ಕೇಸ್‍ಗಳು ಕಂಡು ಬಂದಿರಲಿಲ್ಲ. ಆದ್ರೆ ಇಂದು ಒಂದೇ ದಿನ ಮತ್ತೆ 11 ಕೊರೊನಾ ಪಾಸಿಟಿವ್ ಕೇಸ್‍ಗಳು ಕಂಡು ಬಂದಿದ್ದು ಜಿಲ್ಲೆಯ ಜನರಲ್ಲಿ ದಿಗಿಲು ಮೂಡಿಸಿದೆ. ಇನ್ನು ರಾಜ್ಯದಲ್ಲಿ ಇಂದು ಒಂದೇ ದಿನ ಸೋಂಕಿತರು ಕಂಡು ಬಂದಿದ್ದು.
fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು
ಸಿಆರ್ & ಎಲ್‍ಎಂ..! ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ ಎರಡು ಅತ್ಯದ್ಭುತವಾದ ಮಾನವ ಯಂತ್ರಗಳು. ಹೌದು, 1985 ಮಾಡೆಲ್, ಪೋರ್ಚ್‍ಗಲ್ ಬ್ರ್ಯಾಂಡ್, ಚಾಸಿಸ್ ನಂಬರ್...








