ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಕೇಳಿ ಥೂ… ಥೂ… ಎಂದು ಲೇವಡಿ ಮಾಡಿದ ರಮೇಶ್ ಜಾರಕಿಹೊಳಿ.
ವಿಧಾನ ಪರಿಷತ್ ಎಲೆಕ್ಷನ್ ಗೆ ಮಹಾಂತೇಶ ಕವಟಗಿಮಠ ಪರ ನಾಮಪತ್ರ ಸಲ್ಲಿಕೆಗೆ ಬಂದಿದ್ದ ರಮೇಶ್ ಜಾರಕಿಹೊಳಿಯವರು, ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಕೇಳಿದ ತಕ್ಷಣ ಥೂ.. ಥೂ ಎಂದು ಹೇಳಿ ಉತ್ತರ ನೀಡದೆ ವ್ಯಂಗ್ಯ ಮಾಡಿದ ಘಟನೆ ಮಂಗಳವಾರ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಸ್ಥಳೀಯ ಸಂಘ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆ ರಮೇಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಹಣಾಹಣಿ ಎನ್ನುವಂತೆ ಬಿಂಬಿಸಲಾಗುತ್ತಿದೆ.
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮಂಗಳವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ರಮೇಶ್ ಜಾರಕಿಹೊಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದೊಂದೆ ನಮ್ಮ ಗುರಿ. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೊದಲ ಪ್ರಾಶಸ್ತ್ಯ ಮತದಲ್ಲಿ ಗೆಲವು ಸಾಧಿಸಲಿದ್ದಾರೆ ಎಂದರು.
ಈ ಚುನಾವಣೆ ರಮೇಶ ಜಾರಕಿಹೊಳಿವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್ ಚುನಾವಣೆಯಾ ಎಂಬ ಪ್ರಶ್ನೆಗೆ ಥೂ.. ಥೂ.. ಎಂದು ಲೇವಡಿ ಮಾಡಿ ಪ್ರಶ್ನೆಗೆ ಉತ್ತರಿಸದೆ ಮುಂದೆ ಸಾಗಿದರು.







