ADVERTISEMENT
Thursday, November 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಬೆಳ್ಳಿತೆರೆಗೆ ‘ಬ್ರೋ ಗೌಡ’ ಎಂಟ್ರಿ: ಎಂ. ಆನಂದ್ ರಾಜ್ ನಿರ್ದೇಶನದ ‘ಕದ್ರಿ’ ಚಿತ್ರದಲ್ಲಿ ಹೀರೋ

admin by admin
November 19, 2026
in Cinema, Newsbeat, ಮನರಂಜನೆ
kadri-movie-shamanth-bro-gowda-m-anand-raj-folklore-horror

kadri-movie-shamanth-bro-gowda-m-anand-raj-folklore-horror

Share on FacebookShare on TwitterShare on WhatsappShare on Telegram

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ಕನ್ನಡಿಗರ ಮನೆಮಾತಾಗಿ, ಬಳಿಕ ‘ಲಕ್ಷ್ಮೀ ಬಾರಮ್ಮ’,ʻಅಗ್ನಿಸಾಕ್ಷಿʼ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿರುವ ನಟ ಶಮಂತ್ ಬ್ರೋ ಗೌಡ, ಇದೀಗ ಪೂರ್ಣಪ್ರಮಾಣದ ನಾಯಕನಟನಾಗಿ ಚಂದನವನಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ವಿಭಿನ್ನ ಕಥಾಹಂದರದ ‘ರಾಘು’ ಹಾಗೂ ‘ಶೆಫ್ ಚಿದಂಬರ’ ಚಿತ್ರಗಳ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಎಂ. ಆನಂದ್ ರಾಜ್ ಅವರು ಶಮಂತ್ ಅವರ ಚೊಚ್ಚಲ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಈ ಚಿತ್ರಕ್ಕೆ ‘ಕದ್ರಿ’ ಎಂದು ಶೀರ್ಷಿಕೆ ಇಡಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಪ್ರಯೋಗವಾಗಿ ಮೂಡಿಬರುತ್ತಿರುವ ‘ಕದ್ರಿ’ ಚಿತ್ರವನ್ನು ‘ಕನ್ನಡದ ಜಾನಪದ ಭಯಾನಕ’ (Kannada’s Folklore Horror) ಜಾನರ್‌ನಲ್ಲಿ ನಿರ್ಮಿಸಲಾಗುತ್ತಿದೆ. “ಕಲ್ಪನೆಗೂ ಮೀರಿದ ಕತ್ತಲೆ, ಕಾಲದಿಂದ ಅಚ್ಚಳಿಯದೆ ಉಳಿದಿರುವ ಭಯ” ಎಂಬ ಕುತೂಹಲಕಾರಿ ಅಡಿಬರಹದೊಂದಿಗೆ ಚಿತ್ರತಂಡ ಸಿನಿಮಾವನ್ನು ಘೋಷಿಸಿದ್ದು, ಇದು ಪ್ರೇಕ್ಷಕರಿಗೆ ಹೊಸ ಬಗೆಯ ಭಯಾನಕ ಹಾಗೂ ರೋಚಕ ಅನುಭವ ನೀಡುವ ಸುಳಿವು ನೀಡಿದೆ.

Related posts

devi-mahatme-movie-december-4-release-krg-studios-hombale-music

ಡಿ.4 ರಂದು ತೆರೆಗೆ ಬರಲಿದೆ ‘ದೇವಿ ಮಹಾತ್ಮೆ’: ಹೊಂಬಾಳೆ ಮ್ಯೂಸಿಕ್ ಬೆನ್ನಲ್ಲೇ ಕೆಆರ್‌ಜಿ ಸ್ಟುಡಿಯೋಸ್ ಸಾಥ್!

November 19, 2026
lakshmiputra-trailer-release-chikkanna-shivarajkumar-ap-arjun lakshmiputra-trailer-release-chikkanna-shivarajkumar-ap-arjun

ಎ.ಪಿ. ಅರ್ಜುನ್‌ ನಿರ್ಮಾಣದ ‘ಲಕ್ಷ್ಮೀಪುತ್ರ’ ಟ್ರೇಲರ್ ರಿಲೀಸ್: ಚಿಕ್ಕಣ್ಣನ ಡ್ಯಾನ್ಸ್-ನಟನೆಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಫಿದಾ

November 19, 2026

ಈ ಚಿತ್ರಕ್ಕೆ ಎಂ. ಆನಂದ್ ರಾಜ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅಷ್ಟೇ ಅಲ್ಲದೆ, ನಾಗರಾಜ್ ಸಿ. ಅವರೊಂದಿಗೆ ಕೈಜೋಡಿಸಿ ಆನಂದ್ ರಾಜ್ ಅವರೇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಿರುತೆರೆಯಲ್ಲಿ ತಮ್ಮ ನಟನೆ ಮತ್ತು ವಿಭಿನ್ನ ಮ್ಯಾನರಿಸಂ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಶಮಂತ್ ಅವರಿಗೆ, ಈ ಜಾನಪದ ಹಾರರ್ ಕಥಾಹಂದರವು ಬೆಳ್ಳಿತೆರೆಯಲ್ಲಿ ಭದ್ರ ಬುನಾದಿ ಹಾಕಿಕೊಡುವ ನಿರೀಕ್ಷೆಯಿದೆ.

ತಾಂತ್ರಿಕವಾಗಿಯೂ ‘ಕದ್ರಿ’ ಚಿತ್ರಕ್ಕೆ ಅನುಭವಿ ತಂಡವೇ ಕೆಲಸ ಮಾಡುತ್ತಿದೆ. ಚಿತ್ರಕ್ಕೆ ಉದಯ ಲೀಲಾ ಅವರ ಛಾಯಾಗ್ರಹಣವಿದ್ದು, ವಿಜಯೇಂದ್ರ ಜೋಡಿದಾರ ಸಂಭಾಷಣೆ ಬರೆದಿದ್ದಾರೆ. ಸೂರಜ್ ಜೋಯಿಸ್ ಮತ್ತು ಜುಬೈರ್ ಮುಹಮ್ಮದ್ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದು, ಸೂರಜ್ ಜೋಯಿಸ್ ಹಿನ್ನೆಲೆ ಸಂಗೀತದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಉಳಿದಂತೆ ನಾಗೇಂದ್ರ ಉಜ್ಜನಿ ಸಂಕಲನ, ಅನಿಲ್ ಕಬೀರ್ ಕಲಾ ನಿರ್ದೇಶನ, ರಾ ಸೀನಾ ಸಾಹಸ ನಿರ್ದೇಶನ ಹಾಗೂ ಅಭಿಷೇಕ್ ಮಠದ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಶೀರ್ಷಿಕೆಯ ಮೂಲಕವೇ ಸದ್ದು ಮಾಡುತ್ತಿರುವ ‘ಕದ್ರಿ’ ಚಿತ್ರತಂಡ, ಶೀಘ್ರದಲ್ಲೇ ಚಿತ್ರದ ಕುರಿತಾದ ಮತ್ತಷ್ಟು ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಲಿದೆ.

ShareTweetSendShare
Join us on:

Related Posts

devi-mahatme-movie-december-4-release-krg-studios-hombale-music

ಡಿ.4 ರಂದು ತೆರೆಗೆ ಬರಲಿದೆ ‘ದೇವಿ ಮಹಾತ್ಮೆ’: ಹೊಂಬಾಳೆ ಮ್ಯೂಸಿಕ್ ಬೆನ್ನಲ್ಲೇ ಕೆಆರ್‌ಜಿ ಸ್ಟುಡಿಯೋಸ್ ಸಾಥ್!

by admin
November 19, 2026
0

​ಬೆಂಗಳೂರು: ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ದೇವಿ ಮಹಾತ್ಮೆ' ಚಿತ್ರವು ಡಿಸೆಂಬರ್ 4 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಎರಡು...

lakshmiputra-trailer-release-chikkanna-shivarajkumar-ap-arjun lakshmiputra-trailer-release-chikkanna-shivarajkumar-ap-arjun

ಎ.ಪಿ. ಅರ್ಜುನ್‌ ನಿರ್ಮಾಣದ ‘ಲಕ್ಷ್ಮೀಪುತ್ರ’ ಟ್ರೇಲರ್ ರಿಲೀಸ್: ಚಿಕ್ಕಣ್ಣನ ಡ್ಯಾನ್ಸ್-ನಟನೆಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಫಿದಾ

by admin
November 19, 2026
0

ಬೆಂಗಳೂರು: ಎ.ಪಿ. ಅರ್ಜುನ್ ಸಾರಥ್ಯದಲ್ಲಿ ಮೂಡಿಬಂದಿರುವ 'ಲಕ್ಷ್ಮೀಪುತ್ರ' ಚಿತ್ರವನ್ನು ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಾಣ ಮಾಡಿದ್ದು, ರವಿಕುಮಾರ್ ಅವರು ಸಹ ನಿರ್ಮಾಪಕರಾಗಿದ್ದಾರೆ. ​ಎ.ಪಿ. ಅರ್ಜುನ್ ಕಥೆ, ಚಿತ್ರಕಥೆ,...

parak-movie-poster-childrens-day-davanagere-students-sriimurali-halesh-kogundi

ಮಕ್ಕಳ ದಿನಾಚರಣೆಯಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ‘ಪರಾಕ್’ ಚಿತ್ರದ ಪೋಸ್ಟರ್ ಬಿಡಿಸಿದ ದಾವಣಗೆರೆ ವಿದ್ಯಾರ್ಥಿಗಳು; ನಿರ್ದೇಶಕ ಹಾಲೇಶ್ ಕೋಗುಂಡಿಗೆ ವಿಶೇಷ ಗೌರವ

by admin
November 19, 2026
0

  ದಾವಣಗೆರೆ: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಪರಾಕ್’ ಬಿಡುಗಡೆಗೂ ಮುನ್ನವೇ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಇದೀಗ ಮಕ್ಕಳ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ...

sathya-son-of-harishchandra-ga-garaga-song-release-niroop-bhandari-kailash-kher

ನಿರೂಪ್ ಭಂಡಾರಿ ಅಭಿನಯದ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ‘ಗಾ ಗರಗ’ ಹಾಡು ಬಿಡುಗಡೆ: ಕೈಲಾಶ್ ಖೇರ್ ಧ್ವನಿ ಹಾಗೂ ಸಚಿನ್ ಬಸ್ರೂರ್ ಸಂಗೀತದ ಮೋಡಿ

by admin
November 19, 2026
0

ಬೆಂಗಳೂರು: ನಟ ನಿರೂಪ್ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ‘ಗಾ ಗರಗ’ ಎಂಬ ಭಾವನಾತ್ಮಕ ಹಾಗೂ ಅರ್ಥಪೂರ್ಣ ಗೀತೆ ಅಧಿಕೃತವಾಗಿ...

anna-from-mexico-hogona-bara-mexico-lyrical-song-dolly-dhananjay

ಡಾಲಿʼ ಧನಂಜಯ್ ‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರದ ‘ಹೋಗೋಣ ಬಾರಾ ಮೆಕ್ಸಿಕೋ’ ಲಿರಿಕಲ್ ಸಾಂಗ್ ರಿಲೀಸ್: ಯೋಗರಾಜ್ ಭಟ್ ಸಾಹಿತ್ಯಕ್ಕೆ ಭರ್ಜರಿ ರೆಸ್ಪಾನ್ಸ್

by admin
November 19, 2026
0

ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ 'ಅಣ್ಣ ಫ್ರಂ ಮೆಕ್ಸಿಕೋ' ಸಿನಿಮಾ ಇದೇ ಡಿಸೆಂಬರ್ 24ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರದ ಭರಾಟೆಯನ್ನು ಜೋರಾಗಿಸಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram