ದೇಶದಲ್ಲಿ ಬಿಹಾರ, ಯುಪಿ ಅತಿ ಬಡ ರಾಜ್ಯ | ಕರ್ನಾಟಕದ ಕಥೆ ಏನು..? Poverty Index
ನವದೆಹಲಿ : ಬಿಹಾರ, ಜಾಖರ್ಂಡ್ ಮತ್ತು ಉತ್ತರ ಪ್ರದೇಶ ಭಾರತದಲ್ಲಿಯೇ ಅತಿ ಹೆಚ್ಚು ಬಡವರನ್ನು ಹೊಂದಿರುವ ರಾಜ್ಯಗಳೆಂದು ನೀತಿ ಆಯೋಗ ಬಹು ಆಯಾಮದ ಬಡತನ ಸೂಚ್ಯಂಕ ವರದಿ ತಿಳಿಸಿದೆ.
ಇಂದು ನೀತಿ ಆಯೋಗದ ಬಡತನ ಸೂಚ್ಯಂಕ ವರದಿಯನ್ನು ಪ್ರಕಟವಾಗಿದೆ.
ಇದರ ಪ್ರಕಾರ ದೇಶದಲ್ಲಿ ಬಿಹಾರ, ಜಾಖರ್ಂಡ್ ಮತ್ತು ಉತ್ತರ ಪ್ರದೇಶಗಳು ಅತಿ ಹೆಚ್ಚು ಬಡವರನ್ನು ಹೊಂದಿರುವ ರಾಜ್ಯಗಳು ಎಂಬ ಹಣೆಪಟ್ಟಿಗೆ ಭಾಜನವಾಗಿವೆ.
ಸೂಚ್ಯಂಕ ಪಟ್ಟಿಯಲ್ಲಿ ಬಿಹಾರ ಮೊದಲ ಸ್ಥಾನ ಪಡೆದಿದ್ದರೇ ಕೇರಳ ರಾಜ್ಯ ಅತಿ ಕಡಿಮೆ ಬಡವರನ್ನು ಹೊಂದಿರುವ ಪಟ್ಟಿಗೆ ಸೇರಿದೆ.
ಇನ್ನು ಈ ಪಟ್ಟಿಯಲ್ಲಿ ಕರ್ನಾಟಕ 19ನೇ ಸ್ಥಾನವನ್ನು ಪಡೆದಿದೆ.
ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ 51.91% ಬಡವರಿದ್ದಾರೆ.
ಇನ್ನು ಎರಡನೇ ಸ್ಥಾನದಲ್ಲಿರುವ ಜಾರ್ಖಂಡ್ ನಲ್ಲಿ 42.16% ಬಡವರಿದ್ದರೇ ಉತ್ತರ ಪ್ರದೇಶ 37.79% ಬಡವರಿದ್ದಾರೆ.









