ಮಹಾನಗರ ಪಾಲಿಕೆ ಆಯುಕ್ತರ ಲವ್ ಸೆಕ್ಸ್ ದೋಖಾ..!
ಕಲಬುರಗಿ : ಮಹಾನಗರ ಪಾಲಿಕೆ ಆಯುಕ್ತರ ಲವ್ ಸೆಕ್ಸ್ ದೋಖಾ ಪ್ರಕರಣ ಬೆಳಕಿಗೆ ಬಂದಿದೆ.. ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ ದೆಹಲಿ ಮೂಲದ ಯುವತಿಯನ್ನ ಮದುವೆಯಾಗೋದಾಗಿ ನಂಬಿಸಿ ವಂಚಿಸಿದ್ದಾರೆ..
2017ರಲ್ಲಿ ಐಎಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಸ್ನೇಹಲ್ ಲೋಖಂಡೆ 2019ರಲ್ಲಿ ಪರಿಚಯವಾದ ದೆಹಲಿ ಮೂಲದ ಯುವತಿಯನ್ನ ವಂಚಿಸಿರೋದಾಗಿ ಆರೋಪ ಕೇಳಿ ಬಂದಿದೆ..
ಸ್ನೇಹಲ್ ಲೋಖಂಡೆ ಯುವತಿಯನ್ನ ಮದುವೆಯಾಗುವದ್ದಾಗಿ ನಂಬಿಸಿ ಲಾಡ್ಜ್ ಹಾಗು ರೂಂಗೆ ಕರೆದುಕೊಂಡ ಹೋಗಿದ್ದ.. ನಂತರ ಐಪಿಲ್ ಟ್ಯಾಬ್ಲೆಟ್ ನುಂಗಲು ಹೇಳಿದ್ದ ಎನ್ನಲಾಗಿದೆ.. ಇನ್ನು ಯುವತಿಯು ತನ್ನ ಜೊತೆಗೆ ಲೋಖಂಡೆಯ ಅಶ್ಲಿಲ್ ಚಾಟ್ ಅನ್ನ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಟ್ವೀಟರ್ ನಲ್ಲಿ ದೂರು ನೀಡಿದ್ಧಾಳೆ..
ಅಲ್ಲದೇ ಪ್ರಧಾನಿ ಮೋದಿ,ಕೇಂದ್ರ ಗೃಹ ಸಚಿವ ಅಮಿತ್ ಶಾ ,ಸ್ಮೃತಿ ಇರಾನಿ, ಸಿಎಂ ಬೊಮ್ಮಾಯಿ,ಕಲಬುರಗಿ ಉಸ್ತುವಾರಿ ನಿರಾಣಿಗೆ ಟ್ವೀಟರ್ ನಲ್ಲಿ ಟ್ಯಾಗ್ ಮಾಡಿ ದೂರು ಸಲ್ಲಿಸಿದ್ದಾಳೆ.
ಕರ್ನಾಟಕ ಮುಖ್ಯ ಕಾರ್ಯದರ್ಶಿಗೂ ಯುವತಿ ದೂರು ನೀಡಿದ್ದಾಳೆ.. ಆದ್ರೆ ದೂರು ಕೊಟ್ಟು ವಾರವಾದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.. ಈ ಮೂಲಕ ರಾಜ್ಯದಲ್ಲಿ ಐಎಎಸ್ ಲಾಬಿಗೆ ರಾಜ್ಯ ಸರ್ಕಾರ ಮಣಿದಿದೆ ಎಂಬ ಚರ್ಚೆಗಳಾರಂಭವಾಗಿವೆ..
ಆದ್ರೆ ಯುವತಿಯ ಆರೋಪವನ್ನ ತಳ್ಳಿ ಹಾಕಿರುವ ಲೋಖಂಡೆ ಈ ಬಗ್ಗೆ ದೂರು ಯುವತಿ ವಿರುದ್ಧವೇ ದೂರು ನೀಡೋದಾಗಿ ಹೇಳಿದ್ದಾರೆ..








