ಓಮಿಕ್ರಾನ್ ಬಗ್ಗೆ ಜಾಗೃತವಾಗಿರಿ ಜಗತ್ತಿನ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ WHO
ವಿಶ್ವ ಆರೋಗ್ಯ ಸಂಸ್ಥೆ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್ ವೈರಸ್ ನ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಬಗ್ಗೆ ಅತ್ಯಂತ ಜಾಗರೂಕರಾಗಿರುವಂತೆ ಜಗತ್ತಿನ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ.
ಬಿ. 1.1. 529 ಕೊರೊನಾ ರೂಪಾಂತರಿ ಆತಂಕಕಾರಿ ರೂಪಾಂತರಿ ವೈರಸ್ ಪ್ರಬೇಧವಾಗಿದ್ದು, ಇದು ಅತೀ ವೇಗವಾಗಿ ಪ್ರಸರಿಸಲಿದೆ ಎಂದು WHO ಎಲ್ಲ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ. ಇದು ಕೋವಿಡ್ ನಾ ಇನ್ನೊಂದು ರೂಪಾಂತರ ತಳಿ ಡೆಲ್ಟಗಿಂತ ಹೆಚ್ಚು ವೇಗವಾಗಿ ಜನಸಮೂಹದಲ್ಲಿ ಹರಡಲಿದೆ ಎನ್ನುವುದ ಅಂತ್ಯಂತ ಕಳವಳಕಾರಿ ವಿಷಯವಾಗಿದೆ. ಬಿ.1.1.529 ವೈರಸ್ ಗೆ ಓಮಿಕ್ರಾನ್ ಎಂದು ಹೆಸರಿಡಲಾಗಿದ್ದು ಇದು ಗ್ರೀಕ್ ಅಕ್ಷರದ ಪ್ರಭೇಧವಾಗಿದೆ.
ರೋನವೈರಸ್ ರೂಪಾಂತರದ ಪ್ರಕರಣಗಳ ಉಲ್ಬಣ ನಡುವೆಯೇ ಶನಿವಾರ ಆಗ್ನೇಯ ಏಷ್ಯಾ ಪ್ರದೇಶದ ದೇಶಗಳನ್ನು ಕಣ್ಗಾವಲು ಹೆಚ್ಚಿಸಲು ಮತ್ತು ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸುವಂತೆ WHO ಸೂಚಿಸಿದೆ.ಹೊಸ ರೂಪಾಂತರಿ ಓಮಿಕ್ರಾನ್ ಅನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಗುರುತಿಸಲಾಗಿದೆ. ನಂತರ ಬೆಲ್ಜಿಯಂ, ಬೋಟ್ಸ್ವಾನಾ, ಹಾಂಗ್ ಕಾಂಗ್‌ನಲ್ಲಿ ಪ್ರಕರಣಗಳು ವರದಿಯಾಗಿವೆ. ಲಸಿಕೆ ಹಾಕಿಸಿಕೊಂಡವರಿಗೂ ವೈರಸ್‌ಗೆ ತುತ್ತಾಗುವ ಅಪಾಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.








