ಕೊರೊನಾ ಲಾಕ್ ಡೌನ್ ನ ಮೂರನೇ ಹಂತದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮದ್ಯದಂಗಡಿ ತೆರೆಯಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿದ್ದು, ತಮಿಳುನಾಡಿನಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಮದ್ಯಪ್ರಿಯರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮದ್ಯ ಖರೀದಿಸಲು ಮುಗಿಬಿದ್ದ ಕಾರಣ ರಾಜ್ಯದ ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸುವಂತೆ ತಮಿಳು ನಾಡು ರಾಜ್ಯ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ ಮಾಡಿದೆ ಮತ್ತು ಆನ್ ಲೈನ್ ಮದ್ಯ ಮಾರಾಟಕ್ಕೆ ಮತ್ತು ಹೋಂ ಡೆಲಿವರಿಗೆ ಮಾತ್ರ ಅವಕಾಶ ನೀಡಿದೆ.
ರಾಜ್ಯ ಸರ್ಕಾರ ಮದ್ರಾಸ್ ಹೈಕೋರ್ಟ್ ನ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಮದ್ಯ ಖರೀದಿಸಲು ಸರತಿ ಸಾಲಿನಲ್ಲಿ ನಿಂತವರ ನಡುವೆ ಆರು ಅಡಿ ಅಂತರ ಇರಬೇಕು. ಮದ್ಯ ಖರೀದಿ ಮಾಡುವವರ ಆಧಾರ್ ಕಾರ್ಡ್ ಗಳನ್ನು ಪರಿಶೀಲನೆ ಮಾಡಬೇಕು ಎಂದು ಈ ಹಿಂದೆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಮದ್ರಾಸ್ ಹೈಕೋರ್ಟ್ ಕೆಲವು ಮಾರ್ಗಸೂಚಿಗಳನ್ನು ಸೂಚಿಸಿತ್ತು. ಅಲ್ಲದೇ ಮಾರ್ಗಸೂಚಿಗಳ ಪಾಲನೆಯಾಗದಿದ್ದಲ್ಲಿ ಮದ್ಯದಂಗಡಿ ಮುಚ್ಚಲು ಆದೇಶ ನೀಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿತ್ತು.
ಈಗಾಗಲೇ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಮದ್ಯದಂಗಡಿಯಲ್ಲಿ ಸಾಮಾಜಿಕ ಅಂತರ ಉಲ್ಲಂಘನೆಯಾಗುತ್ತಿರುವ ಕಾರಣ ಮದ್ಯವನ್ನು ಹೋಂ ಡೆಲಿವರಿ ಮಾಡುವ ಬಗ್ಗೆ ಚಿಂತನೆ ನಡೆಸಲಿ ಎಂದು ಸಲಹೆ ನೀಡಿದೆ.
ಮಳೆಯಿಲ್ಲದ ಹಳ್ಳಿ – ಪ್ರಕೃತಿಯ ವಿಚಿತ್ರ ರಹಸ್ಯ
ಪ್ರಕೃತಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಅನೇಕ ರಹಸ್ಯಗಳಿವೆ. ನಾವು ಪ್ರತಿದಿನವೂ ವಿಭಿನ್ನ ವಾತಾವರಣವನ್ನು ಅನುಭವಿಸುತ್ತೇವೆ. ಕೆಲವೊಮ್ಮೆ ಅತಿಯಾಗಿ ಮಳೆ ಬೀಳುತ್ತದೆ, ಆದರೆ ಇನ್ನೊಂದೆಡೆ ಹನಿ ಮಳೆಯೂ...