ಛೇ..! ಮತ್ತೆ ಮಾತು ತಪ್ಪಿದ ರಾಜಮೌಳಿ Rajamouli saaksha tv
ಎಸ್.ಎಸ್. ರಾಜಮೌಳಿ.. ಇಂಡಿಯನ್ ಸಿನಿಮಾ ಇಂಡಸ್ಟ್ರೀಯ ಸ್ಟಾರ ಡೈರಕ್ಟರ್. ಬಾಹುಬಲಿ ಸಿನಿಮಾದ ಮೂಲಕ ಹಾಲಿವುಡ್ ಬಾಸ್ ಗಳಿಗೆ ಹಾಗೇ ಬಾಲಿವುಡ್ ಬಡಾಮಿಯಾಗಳಿಗೆ ಸೌತ್ ಸಿನಿಮಾದ ತಾಕತ್ತು ತೋರಿಸಿಕೊಟ್ಟವರು.
ಹಾಗೇ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬ್ರ್ಯಾಂಡ್ ತಂದಕೊಟ್ಟವರು. ರಾಜಮೌಳಿ ಸಿನಿಮಾದ ಬಗ್ಗೆ ಅಪಾರ ಶಿಸ್ತು ಹೊಂದಿರುವ ವ್ಯಕ್ತಿ.
ತಮ್ಮ ಸಿನಿಮಾಗಳ ಮೂಲಕ ಸಿನಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವ ರಾಜಮೌಳಿ ಪದೇ ಪದೇ ಅಭಿಮಾನಿಗಳಿಗೆ ನಿರಾಸೆ ಮಾಡುತ್ತಲೇ ಇರುತ್ತಾರೆ. ಅವರು ಸಿನಿಮಾ ರಿಲೀಸ್ ಡೇಟ್ ಗಳ ಬಗ್ಗೆ ಆಗಾಗ ಮಾತುತಪ್ಪುತ್ತಲೇ ಇರುತ್ತಾರೆ.
ಅದರಂತೆ ಇದೀಗ ಆರ್ ಆರ್ ಆರ್ ಸಿನಿಮಾ ವಿಷಯದಲ್ಲೂ ರಾಜಮೌಳಿ ಮಾತು ತಪ್ಪಿದ್ದಾರೆ.
ಈ ಹಿಂದೆ ಕೊರೊನಾ ಸೋಂಕು ಕಾರಣದಿಂದಾಗಿ ಆರ್ ಆರ್ ಆರ್ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು, ಇದರಲ್ಲಿ ರಾಜಮೌಳಿಯ ತಪೇನು ಇರಲಿಲ್ಲ. ಆದ್ರೆ ಇದೀಗ ಆರ್ ಆರ್ ಆರ್ ಟ್ರೈಲರ್ ರಿಲೀಸ್ ವಿಚಾರವಾಗಿ ರಾಜಮೌಳಿ ಮಾತು ತಪ್ಪಿದ್ದಾರೆ.
ಈ ಮೊದಲೇ ಹೇಳಿರುವಂತೆ ಡಿಸೆಂಬರ್ 03ಕ್ಕೆ ಆರ್ ಆರ್ ಆರ್ ಸಿನಿಮಾದ ಟ್ರೇಲರ್ ರಿಲೀಸ್ ಆಗಬೇಕಿತ್ತು. ಆದ್ರೆ ಇದೀಗ ಡಿಸೆಂಬರ್ ಮೂರಕ್ಕೆ ಟ್ರೈಲರ್ ರಿಲೀಸ್ ಆಗಲ್ಲ ಎಂದು ಚಿತ್ರತಂಡ ಹೇಳಿದೆ.
”ಕೆಲವು ಅನಿರೀಕ್ಷಿತ ಕಾರಣಗಳಿಂದಾಗಿ ‘ಆರ್ ಆರ್ ಆರ್ ‘ ಸಿನಿಮಾದ ಟ್ರೇಲರ್ ಅನ್ನು ಡಿಸೆಂಬರ್ 03ರಂದು ಬಿಡುಗಡೆ ಮಾಡಲಾಗುತ್ತಿಲ್ಲ.
ಟ್ರೇಲರ್ ಬಿಡುಗಡೆ ಮಾಡುವ ಮುಂದಿನ ದಿನಾಂಕವನ್ನು ಶೀಘ್ರದಲ್ಲಿಯೇ ಘೋಷಿಸಲಾಗುವುದು” ಎಂದು ‘ಆರ್ ಆರ್ ಆರ್’ ಚಿತ್ರತಂಡ ಟ್ವೀಟ್ ಮಾಡಿದೆ.
ಆರ್ ಆರ್ ಆರ್ ತಂಡದ ಈ ಟ್ವೀಟ್ ಅಭಿಮಾನಿಗಳಲ್ಲಿ ಬೇಸರ ಮಾತ್ರವಲ್ಲದೇ ಮತ್ತೊಂದು ಅನುಮಾನಕ್ಕೂ ದಾರಿ ಮಾಡಿಕೊಟ್ಟಿದೆ.
ಅದೇನಂದರೇ ಮುಂದಿನ ವರ್ಷ ಜನವರಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ.
ಈಗ ಟ್ರೈಲರ್ ರಿಲೀಸ್ ಮುಂದಕ್ಕೆ ಹೋಗಿರುವುದರಿಂದ ಸಿನಿಮಾ ರಿಲೀಸ್ ಕೂಡ ಮುಂದಕ್ಕೆ ಹೋಗುತ್ತಾ ಅನ್ನೋ ಸಣ್ಣ ಅನುಮಾನದಲ್ಲಿದ್ದಾರೆ ಅಭಿಮಾನಿಗಳು.
ಇನ್ನು ಆರ್ ಆರ್ ಆರ್ ಸಿನಿಮಾದ ಟೀಸರ್‍ಗಳು, ಪೆÇೀಸ್ಟರ್‍ಗಳು, ಹಾಡಿನ ತುಣುಕುಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಸದ್ಯ ‘ಆರ್ ಆರ್ ಆರ್’ ಸಿನಿಮಾದ ‘ಸೋಲ್ ಸಾಂಗ್’ ಎಲ್ಲರ ಗಮನ ಸೆಳೆಯುತ್ತಿದೆ.









