ವಂದೇ ಮಾತರಂ ಹಾಡಲ್ಲ : ಅದಕ್ಕೆ ನಮ್ಮ ಆಕ್ಷೇಪವಿದೆ ಎಂದ ಅಖ್ತರ್
ಪಾಟ್ನಾ: ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನದ ಕಡೆಯ ದಿನದಂದು ಐವರು ಶಾಸಕರು ವಂದೇ ಮಾತರಂ ಹಾಡುವುದಕ್ಕೆ ನಿರಾಕರಿಸಿದ್ದಾರೆ.. ಶಾಸಕ ಅಖ್ತರ್ ಉಲ್ ಇಮಾನ್ ರಾಷ್ಟ್ರಗೀತೆ ಹಾಡುವುದಕ್ಕೆ ನಮಗೆ ಸಮಸ್ಯೆ ಇಲ್ಲ. ಆದರೆ ವಂದೇ ಮಾತರಂ ಹಾಡುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಹೇಳಿದ್ದಾರೆ.
ಅಧಿವೇಶನದ ಕೊನೆಯ ದಿನದಂದು ವಂದೇ ಮಾತರಂ ಹಾಡುವುದಕ್ಕೆ ಎಂಐಎಂ ಶಾಸಕರು ನಿರಾಕರಿಸಿದ್ದಾರೆ. ರಾಷ್ಟ್ರಗೀತೆ ಹಾಡುವುದಕ್ಕೆ ನಮಗೆ ಸಮಸ್ಯೆ ಇಲ್ಲ. ಆದರೆ ವಂದೇ ಮಾತರಂ ಹಾಡುವುದಕ್ಕೆ ನಮ್ಮ ಆಕ್ಷೇಪವಿದೆ ಎಂದಿದ್ದಾರೆ.
ವಿಧಾನಸಭಾಧ್ಯಕ್ಷರು ವಂದೇ ಮಾತರಂ ಹೇಳುವಂತೆ ಸಭಾಸದಸ್ಯರಿಗೆ ಸೂಚಿಸುವ ಹೊಸ ಪದ್ಧತಿಯನ್ನು ಪ್ರಾರಂಭಿಸಿದ್ದಾರೆ. ಆದರೆ ಹಳೆಯ ಪದ್ಧತಿ ಮುಂದುವರಿಯಬೇಕು. ಪ್ರತಿ ಸಂದರ್ಭದಲ್ಲಿಯೂ ರಾಷ್ಟ್ರಗೀತೆ ಅಥವಾ ರಾಷ್ಟ್ರೀಯ ಹಾಡನ್ನು ಹಾಡುವ ಕಾರಣವನ್ನು ಕೇಳಿದ್ದಾರೆ. ಕೆಲವರು ಸಸ್ಯಾಹಾರಿಗಳಾಗಿರುತ್ತಾರೆ. ಕೆಲವರು ಮಾಂಸಾಹಾರಿಗಳಾಗಿರುತ್ತಾರೆ. ಆಯ್ಕೆ ಮಾಡಿಕೊಳ್ಳುವುದು ಆ ವ್ಯಕ್ತಿಗೆ ಬಿಟ್ಟ ವಿಷಯ ಅಂತೆಯೇ ಹೊಸ ಪದ್ಧತಿಯನ್ನು ಪ್ರತಿ ಸಭಾಸದಸ್ಯನ ಮೇಲೆಯೂ ಹೇರುವಂತಿಲ್ಲ. ವಂದೇ ಮಾತರಂ ಹೇಳುವುದಕ್ಕೆ ನನ್ನ ಆಕ್ಷೇಪವಿದೆ ಎಂದು ತಿಳಿಸಿದ್ದಾರೆ.
ದೇಶದ ಸಂವಿಧಾನದಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿರುವ ಅಖ್ತರ್ ಉಲ್ ಇಮಾನ್ , ನಂಬಿಕೆ ಇರುವುದರಿಂದಲೇ ಚುನಾವಣೆ ಎದುರಿಸಿ ಪ್ರಜಾಪ್ರಭುತ್ವದ ಆಧಾರದಲ್ಲಿ ಗೆದ್ದು ಬಂದಿದ್ದೇನೆ. ಆದರೆ ನಮ್ಮ ಸಂವಿಧಾನ ಪ್ರತಿಯೊಬ್ಬ ನಾಗರಿಕನೂ ರಾಷ್ಟ್ರಗೀತೆಯನ್ನು ಹಾಡಬೇಕೆಂಬುದನ್ನು ಕಡ್ಡಾಯಗೊಳಿಸಿಲ್ಲ ಎಂದು ಹೇಳಿದ್ದಾರೆ. ಇವರ ನಡೆಯನ್ನ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಅಲ್ಲದೇ ಇಮಾನ್ ಅವರ ಉದ್ದೇಶ, ಆಂತರ್ಯವನ್ನು ಸ್ಪಷ್ಟಪಡಿಸುತ್ತಿದೆ ವಂದೇ ಮಾತರಂ ಹಾಡಲು ನಿರಾಕರಿಸಿರುವುದು ಆತಂಕಕಾರಿ ಎಂದಿದೆ..
ಕೊರೊನಾದಿಂದ ಚೇತರಿಸಿಕೊಂಡ ಕಮಲ್ ಹಾಸನ್ : ಆಸ್ಪತ್ರೆಯಿಂದ ಡಿಸ್ಚಾರ್ಜ್








