2ನೇ ಟೆಸ್ಟ್ ಪಂದ್ಯ : ಕಿವೀಸ್ ಗೆ 540 ರನ್ ಗುರಿ
ಮುಂಬೈನಲ್ಲಿ ನಡೆಯುತ್ತಿರುವ ಇಂಡೋ – ಕಿವೀಸ್ ಎರಡನೇ ಟೆಸ್ಟ್ ಪಂದ್ಯದ ಮೇಲೆ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ.
ನ್ಯೂಜಿಲೆಂಡ್ ತಂಡಕ್ಕೆ ಭಾರತ ಬರೋಬ್ಬರಿ 540 ರನ್ ಟಾರ್ಗೆಟ್ ನೀಡಿದೆ.
ಸದ್ಯ ನ್ಯೂಜಿಲೆಂಡ್ ತಂಡ ಒಂದು ವಿಕೆಟ್ ಕಳೆದುಕೊಂಡ 13 ಗಳಿಸಿದೆ.
ಇನ್ನು ಮುನ್ನ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು.
327 ರನ್ ಗಳ ಲೀಡ್ ನೊಂದಿಗೆ ಕ್ರೀಸ್ ಗೆ ಬಂದ ಟೀಂ ಇಂಡಿಯಾದ ಬ್ಯಾಟರ್ ಗಳು ಬೃಹತ್ ಮೊತ್ತವನ್ನು ಕಲೆಹಾಕುವತ್ತ ಗಮನ ಹರಿಸಿದರು.
ಈ ಹಂತದಲ್ಲಿ ಮಯಾಂಕ್ ಅಗಲ್ ವಾಲ್ ಅರ್ಧಶತಕ ಸಿಡಿಸಿ ಔಟ್ ಆದರು.
ಇದಾದ ಬಳಿಕ ಪುಜಾರ 47 ರನ್ , ಶುಭ್ ಮನ್ ಗಿಲ್ 47 ರನ್, ಕೊಹ್ಲಿ 36 ರನ್, ಅಕ್ಸರ್ ಪಟೇಲ್ 41 ರನ್ ಸಿಡಿಸಿ ಔಟ್ ಆದರು.
ಈ ವೇಳೆ ವಿರಾಟ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.
ಆ ಮೂಲಕ ನ್ಯೂಜಿಲೆಂಡ್ ತಂಡಕ್ಕೆ 540 ರನ್ ಗಳ ಗುರಿಯನ್ನು ನೀಡಿದರು.









