ಶಾಲೆಗಳಲ್ಲಿ ಕರೋನಾ ಹೆಚ್ಚಳ, ಅಗತ್ಯ ಬಿದ್ದರೆ ಶಾಲೆ ಮುಚ್ಚಲು ಸಿದ್ಧ- ಸಚಿವ ಬಿ ಸಿ ನಾಗೇಶ್
ಹಲವು ಶಾಲೆ, ಕಾಲೇಜುಗಳಲ್ಲಿ ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸುದ್ದಿಗೋಷ್ಟಿ ನಡೆಸಿದರು
ಸೋಂಕು ಹೆಚ್ಚಳ ಸ್ವಲ್ಪ ಆತಂಕ ತಂದಿದೆ ಆದರೆ ಸೋಂಕು ಕಂಡುಬಂದಿರುವುದು ವಸತಿ ಶಾಲೆಗಳಲ್ಲಿ , ನವೋದಯ ಶಾಲೆಗಳಲ್ಲಿ. 1-10 ತರಗತಿಯ ಸಾಮನ್ಯ ಸರ್ಕಾರಿ ಶಾಲೆಗಳಲ್ಲಿ ಸೋಂಕು ಕಂಡುಬಂದಿಲ್ಲ. ವಸತಿ, ನವೋದಯ ಶಾಲೆಗಳಲ್ಲಿ ಸೋಂಕು ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬಿ ಸಿ ನಾಗೇಶ ಹೇಳಿದರು.
ಇವತ್ತು ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ಇರುವ ಮಾರ್ಗಸೂಚಿಗಳನ್ನು ಕಠಿಣವಾಗಿ ಪಾಲಿಸುತ್ತೇವೆ. ನಾಳೆ ನಾಡಿದ್ದು ಸೋಂಕಿತ ವಸತಿ, ನವೋದಯ ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲಿಸಲಿದ್ದೇವೆ. ನೀತಿ ಸಂಹಿತೆ ಮುಗಿದ ಬಳಿಕ ಭೇಟಿ, ವಸತಿ ಶಾಲೆಗಳಲ್ಲಿ ಎಸ್.ಓ.ಪಿ ಪಾಲನೆ ಆಗ್ತಿದೆಯಾ ಇಲ್ಲವಾ ಸ್ಚತಃ ಡಿಸಿಗಳೇ ಚೆಕ್ ಮಾಡೋದಕ್ಕೆ ಹೇಳಿದ್ದೇನೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ
ತಜ್ಞರಿಂದ ಪ್ರತಿದಿನವೂ ವರದಿ ಪಡೆದುಕೊಳ್ಳುತ್ತಿದ್ದೇವೆ, ವರದಿ ಪ್ರಕಾರ ತಕ್ಷಣಕ್ಕೆ ಯಾವುದೇ ಆತಂಕ ಬೇಡ ಅಂತಲೇ ಹೇಳುತ್ತಿದ್ದಾರೆ, ಅಕಸ್ಮಾತ್ ತೀವ್ರ ಹೆಚ್ಚಳ ಕಂಡು ಬಂದರೆ ಶಾಲೆಗಳನ್ನು ಕ್ಲೋಸ್ ಮಾಡೋದಕ್ಕೂ ಕೂಡ ನಾವು ಸಿದ್ದರಿದ್ದೇವೆ. ಯಾವುದೇ ರೀತಿಯ ಆತಂಕ ಪೋಷಕರಿಗೆ ಬೇಡ.
ಪರೀಕ್ಷೆಗಳಲ್ಲಿಯೇ ಹೆಚ್ಚು ಸಾಮಾಜಿಕ ಅಂತರ ನಿಯಮಗಳ ಪಾಲನೆ ಆಗುತ್ತದೆ. ಫೆಬ್ರವರಿ ಅಂತ್ಯದ ವೇಳೆಗೆ ಸ್ವಲ್ಪ ಕೋವಿಡ್ ಹೆಚ್ಚಾಗಬಹುದು, ಆದರೆ ಆ ವೇಳೆಗೆ ಮಕ್ಕಳಿಗೇ ಲಸಿಕೆ ಬರುವ ಸಾಧ್ಯತೆ ನಿರೀಕ್ಷೆ ಹೆಚ್ಚಿದೆ. ಹೀಗಾಗಿ ಪ್ರತಿ ಕ್ಷಣವೂ ಸರ್ಕಾರ ವಾಚ್ ಮಾಡ್ತಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದರು.