ಇಂದು ಸಂಜೆ ಬಿಡುಗಡೆಯಾಗಲಿದೆ ಪುಷ್ಪ ಚಿತ್ರದ ಟ್ರೈಲರ್
ಸ್ಟೈಲಿಶ್ ಸ್ಟಾರ್, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ, ಸುಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮ ‘ಪುಷ್ಪ’ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಲಿದೆ. ಡಿಸೆಂಬರ್ 6 ರಂದು ಅಂದರೇ ಇಂದು ಸಂಜೆ 6 ಗಂಟೆ 3 ನಿಮಿಷಕ್ಕೆ ಟ್ರೈಲರ್ ಬಿಡುಗಡೆಯಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ಯುಟ್ಯೂಬ್ ಚಾನೆಲ್ ತೆಲುಗು ಟ್ರೈಲರ್, ಗೋಲ್ಡ್ ಮೈನ್ ಟಲಿಪಿಲಂಸ್ ಚಾನೆಲ್ ನಲ್ಲಿ ಹಿಂದಿ, ಲೈಕಾ ಪ್ರೊಡಕ್ಷನ್ ಚಾನೆಲ್ ನಲ್ಲಿ ತಮಿಳು, ಅಲ್ಲು ಅರ್ಜುನ್ ಅವರ ಸ್ವಂತ ಯ್ಯೂಟೂಬ್ ಚಾನೆಲ್ ನಲ್ಲಿ ಕನ್ನಡ ಮತ್ತು ಇ4ಎಂಟರಟೆನ್ಮೆಂಟ್ ಚಾನೆಲ್ ಮಲಯಾಳಂ ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ.
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿರುವ ಹಾಡುಗಳು ಎಲ್ಲಾ ಭಾಷೆಗಳಲ್ಲೂ ಸದ್ದು ಮಾಡುತ್ತಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ್ದು, ಫಹಾದ್ ಫಾಸಿಲ್, ಡಾಲಿ ಧನಂಜಯ್, ಅನಸೂಯ ಭಾರದ್ವಾಜ್, ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.








