ಓಮಿಕ್ರಾನ್ ಆತಂಕ | ಶಾಲಾ-ಕಾಲೇಜುಗಳಿಗೆ ರಜೆ ನೀಡಿ Vatal Nagaraj saaksha tv
ಚಾಮರಾಜನಗರ : ರಾಜ್ಯದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗುತ್ತಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಶಾಲಾ-ಕಾಲೇಜುಗಳಿಗೆ ರಜೆ ನೀಡಬೇಕೆಂದು ಒತ್ತಾಯಿಸಿ ಚಾಮರಾಜನಗರದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ರಾಜ್ಯದಲ್ಲಿ ಶಾಲಾ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಬೇಕು ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ಅವರು, ನನ್ನ ಮೇಲೆ ಕಾಂಗ್ರೆಸ್ ನವರಿಗೆ ಬಹಳ ಪ್ರೀತಿಯಿದೆ. ಎಮ್ ಎಲ್ ಸಿ ಗೆ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಮತ ಹಾಕುವ ಹಕ್ಕಿದೆ. ಎಲ್ಲಾ ಪಕ್ಷಗಳು ಒಂದು ಓಟ್ ಹಾಕಿ ಸಾಕು ಎಂದು ಹೇಳುತ್ತಿದ್ದಾರೆ. ಎರಡನೇ ಓಟ್ ಏನ್ ಮಾಡೋದು ಎಂದು ಪ್ರಶ್ನಿಸಿದರು. ಒಂದು ಮತ ಹಾಕಿ ಎರಡನೇ ಮತ ಹಾಕಬೇಡಿ ಎನ್ನುವುದು ಮತದಾರರ ಹಕ್ಕನ್ನು ಕಿತ್ತುಕೊಂಡಗಾಗುತ್ತದೆ. ಕ್ಷೇತ್ರದ ಎಲ್ಲಾ ಒಂದು ಮತವನ್ನು ವಾಟಳ್ ನಾಗರಾಜ್ ಗೆ ಕೊಡುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿದ್ದಾರೆ.









