ಬಸ್ ಪ್ರಯಾಣಿಕರೆ ಎಚ್ಚರ – ಚಿಲ್ಲರೆ ಕೇಳುವುದು ಶಿಕ್ಷಾರ್ಹ ಅಫರಾಧ
ಸರ್ಕಾರಿ ಬಸ್ ಪ್ರಯಾಣಿಕರೆ ಎಚ್ಚರ ಬಸ್ ನಲ್ಲಿ ಚಿಲ್ಲರೆ ಕೇಳಿದರೆ 3 ವರ್ಷ ಜೈಲು ಕಂಬಿ ಎಣಿಸಬೇಕಾದೀತು, ಇಂಥಹ ವಿವಾದಾತ್ಮಕ ಕೆಲಸಕ್ಕೆ ಮುಂಧಾಗಿರುವುದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ.
ತನ್ನ ಬಸ್ಸುಗಳಲ್ಲಿ ಸಂಚರಿಸುವಾಗ ಚಿಲ್ಲರೆ ಕೇಳುವಾಗ ಜಗಳ ಮಾಡುವುದು ‘ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು’ ಎಂದು ಭಾವಿಸಲಾಗುವುದು ಹಾಗೂ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಮೂರು ವರ್ಷಗಳವರೆಗೂ ಜೈಲು ಶಿಕ್ಷೆಯಾಗುವ ಸಾಧ್ಯತೆ ಇರುವುದಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪೋಸ್ಟರ್‌ಗಳನ್ನು ತನ್ನೆಲ್ಲಾ ವಾಹನಗಳ ಮೇಲೆ ಅಂಟಿಸಿದೆ.
ವಾಯುವ್ಯ ಕರ್ನಾಟಕ ಸಾರಿಗೆಯು ರಾಜ್ಯದ ಆರು ಜಿಲ್ಲೆಗಳಲ್ಲಿ ಎಂಟು ವಿಭಾಗಗಳನ್ನು ಹೊಂದಿರುವ ವಾ.ಕ.ರ.ಸಾ.ಸಂ, 4,428 ಗ್ರಾಮಗಳಿಗೆ ತನ್ನ ಸೇವೆ ಒದಗಿಸುತ್ತಿದೆ.ಇತ್ತೀಚೆಗೆ ಬಸ್ಸುಗಳಲ್ಲಿ ಟಿಕೆಟ್ ಪಡೆಯುವ ವೇಳೆ ಚಿಲ್ಲರೆಗಾಗಿ ಪ್ರಯಾಣಿಕರು ಮತ್ತು ಕಂಡಕ್ಟರ್‌ಗಳ ನಡುವೆ ಜಗಳ ಉಂಟಾಗುತ್ತಿದೆ.
ಸರಿಯಾದ ಕೆಲವೊಂದು ಮುಖಬೆಲೆಯ ನಾಣ್ಯಗಳು ಸಿಗದೇ ಇದ್ದಾಗ ಕಂಡಕ್ಟರ್‌ಗಳು ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಇದರಿಂದ ಬಸ್ಸುಗಳ ಸಂಚಾರವೇ ಗಂಟೆಗಳ ಕಾಲ ಬಸ್ ಸಂಚಾರಗಳಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಇದನ್ನ ತಪ್ಪಿಸಲು ಸಾರಿಗೆ ಸಂಸ್ಥೆ ಈ ಕೆಲಸಕ್ಕೆ ಮುಂದಾಗಿದೆ.








