ಹರಿಣಗಳ ಬೇಟೆಗೆ ಹುಲಿಗಳು : ಪ್ರೋಮೋ ಅದುರ್ಸ್ india
ಮೂರು ಟೆಸ್ಟ್ ಗಳ ಸರಣಿಯನ್ನು ಆಡಲು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕೊಹ್ಲಿ ಸೇನೆ ಸಿದ್ಧವಾಗಿದೆ. ಬಿಸಿಸಿಐ 18 ಸದಸ್ಯರ ತಂಡವನ್ನು ನಿನ್ನೆ ಪ್ರಕಟ ಮಾಡಿದೆ.
ತಂಡದಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗಿದ್ದು, ರೋಹಿತ್ ಶರ್ಮಾ ಅವರಿಗೆ ಉಪನಾಯಕನ ಪಟ್ಟವನ್ನು ನೀಡಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಹೊರಗಿದ್ದ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ರಿಷಬ್ ಪಂತ್, ಜಸ್ಪ್ರಿತ್ ಬೂಮ್ರಾ ತಂಡಕ್ಕೆ ವಾಪಸ್ ಆಗಿದ್ದಾರೆ.
ಇನ್ನು ಹರಿಣಗಳ ಬೇಟೆಗೆ ಸಜ್ಜಾಗಿರುವ ಭಾರತದ ಹುಲಿಗಳನ್ನು ಹುರಿದುಂಬಿಸಲು ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ‘ಫಸ್ಟ್ ಕಾ ಥರ್ಸ್ಟ್’ ಎಂಬ ಶೀರ್ಷಿಕೆಯ ಪ್ರೋಮೋವನ್ನು ಬಿಡುಗಡೆ ಮಾಡಿದೆ.
#FirstKaThirst begins as #TeamIndia looks for their maiden Test series victory in 🇿🇦
Do you #BelieveinBlue to create history?#SAvIND Test Series | Starts Dec 26 I Star Sports Network & Disney+Hotstar pic.twitter.com/PC8UEgI2cS
— Star Sports (@StarSportsIndia) December 8, 2021
ಪ್ರೋಮೋ ಇಂಗ್ಲೆಂಡ್ (1971), ಪಾಕಿಸ್ತಾನ (2004) ಮತ್ತು ಆಸೀಸ್ (2018) ವಿರುದ್ಧ ಟೀಂ ಇಂಡಿಯಾದ ಮೊದಲ ಸರಣಿ ವಿಜಯಗಳ ದೃಶ್ಯಗಳನ್ನು ಒಳಗೊಂಡಿದೆ.
ಭಾರತೀಯ ಕ್ರಿಕೆಟ್ ತಂಡಕ್ಕೆ ಆಲ್ ದಿ ಬೆಸ್ಟ್. #BelieveinBlue ಎಂಬ ಹ್ಯಾಶ್‌ಟ್ಯಾಗ್ ನೊಂದಿಗೆ ಪ್ರೋಮೋವನ್ನು ಪೋಸ್ಟ್ ಮಾಡಲಾಗಿದೆ.








