ವಿರಾಟ್ ನಾಯಕತ್ವ, ಬಲವಂತವಾಗಿ ವಜಾ ಮಾಡಿತಾ ಬಿಸಿಸಿಐ ?
ಬಿಸಿಸಿಐ, ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ವಜಾಮಾಡಿದೆ, ಕೊಹ್ಲಿಗೆ ಇಷ್ಟವಿಲ್ಲದಿದ್ದರೂ, ಸ್ವತಃ ರಾಜಿನಾಮೆ ನೀಡುವಂತೆ ಬಿಸಿಸಿಐ 48 ಗಂಟೆಗಳ ಸಮಯಾಕಶವನ್ನ ನೀಡಿತ್ತು. ಆದರೆ ಕೊಹ್ಲಿ ಕಡಯಿಂದ ಯಾವುದೇ ಉತ್ತರ ಭಾರದಿದ್ದಾಗ, ಬಿ ಸಿ ಸಿ ಐ ಧೈರ್ಯ ತೋರಿಸಿ ಕೊಹ್ಲಿಯನ್ನ ನಾಯಕತ್ವ ಹುದ್ದೆಯಿಂದ ಕೆಳಗಿಳಿಸಿದೆ. ಆ ಜಾಗಕ್ಕೆ ರೋಹಿತ ಶರ್ಮ ಅವರನ್ನ ನಾಯಕನಾಗಿ ಪಟ್ಟ ಕಟ್ಟಲಾಗಿದೆ. ಈ ಮೂಲಕ ನಾಲ್ಕುವರೆ ವರ್ಷಗಳ ಕಾಲ ಭಾರತ ತಂಡವನ್ನ ಮುನ್ನಡೆಸಿದ್ದ ವಿರಾಟ್ ಗೆ ಗೌರವಯುತ ವಿದಾಯ ಸಿಗದೆ ಹೋಗಿದೆ.
2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನ ನಡೆಸುವ ಬಗ್ಗೆ ಕೊಹ್ಲಿ ಉತ್ಸುಕರಾಗಿದ್ದರು ಎಂದು ತಿಳಿದು ಬಂದಿದೆ, ಆದರೆ ಬಿಸಿಸಿಐ ಈ ಆಸೆಗೆ ತಣ್ಣೀರು ಎರಚಿದೆ.
ಕೊಹ್ಲಿ ಸ್ವಯಂಪ್ರೇರಣೆಯಿಂದ ಟಿ20 ನಾಯಕತ್ವ ತ್ಯಜಿಸಿದ್ದರು
ಕೊಹ್ಲಿ ಸ್ವಯಂಪ್ರೇರಣೆಯಿಂದ ಟಿ20 ನಾಯಕತ್ವ ತ್ಯಜಿಸಿದ್ದರು. ಏಕದಿನ ಮಾದರಿಯಲ್ಲೂ ಬಿಸಿಸಿಐ ಅವರಿಂದಲೂ ಅದನ್ನೆ ನಿರೀಕ್ಷಿಸಿತ್ತು. ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡದ ದಾಖಲೆ ಅದ್ಭುತವಾಗಿದೆ. ಕೊಹ್ಲಿ ನಾಯಕತ್ವದಲ್ಲಿ ತಂಡವು 95 ಏಕದಿನ ಪಂದ್ಯಗಳನ್ನು ಆಡಿದ್ದು ಅದರಲ್ಲಿ 65 ಗೆದ್ದು 27 ಸೋತಿದೆ. ಮೂರು ಪ ಂದ್ಯಳಲ್ಲಿ ಯಾವುದೇ ಫಲಿತಾಂಶ ಸಿಕ್ಕಿರಲಿಲ್ಲ. ಆದಾಗ್ಯೂ, ಅವರು ತಂಡಕ್ಕೆ ಯಾವುದೇ ಐಸಿಸಿ ಟ್ರೋಫಿಯನ್ನು ತಂದುಕೊಡುವಲ್ಲಿ ವಿಫಲರಾಗಿದ್ದರು.
2017ರ ನಂತರ ಟೀಂ ಇಂಡಿಯಾ ಮೊದಲ ಬಾರಿಗೆ ಇಬ್ಬರು ನಾಯಕರನ್ನು ಹೊಂದಲಿದೆ. ಇದಕ್ಕೂ ಮೊದಲು 2014ರಿಂದ 2017ರವರೆಗೆ ಭಾರತ ತಂಡದಲ್ಲಿ ಇಬ್ಬರು ನಾಯಕರಿದ್ದರು. 2014 ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು ಮತ್ತು ವಿರಾಟ್ ಕೊಹ್ಲಿ ತಂಡದ ಹೊಸ ನಾಯಕರಾದರು. ಧೋನಿ ಕಡಿಮೆ ಮಾದರಿಯಲ್ಲಿ ನಾಯಕನಾಗಿ ಆಡುತ್ತಿದ್ದರು. ಇದರ ನಂತರ, ಕೊಹ್ಲಿ 2017 ರಿಂದ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಇದೀಗ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ ನಂತರ ರೋಹಿತ್ ಮತ್ತು ಕೊಹ್ಲಿ ಭಾರತದ ಇಬ್ಬರು ವಿಭಿನ್ನ ನಾಯಕರಾಗಲಿದ್ದಾರೆ.








