ಸೇನಾ ಹೆಲಿಕಾಪ್ಟರ್ ಅಪಘಾತದ ಬ್ಲಾಕ್ ಬಾಕ್ಸ್ ಪತ್ತೆ…..
ಭಾರತೀಯ ಸೇನೆಯ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅಪಘಾತವಾಗಿರು ಹೆಲಿಕಾಪ್ಟರ್ ನ ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ. ಇದರ ಮೂಲಕ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣ ಏನು ಎನ್ನುವುದು ಹೊರಬರಲಿದೆ.
ಹೆಲಿಕಾಪ್ಟರ್ ಬ್ಲಾಕ್ ಬಾಕ್ಸ್ ಎಂದರೇನು?
ಬ್ಲ್ಯಾಕ್ ಬಾಕ್ಸ್ ಎಂಬುದು ಸ್ಟೀಲ್ ಅಥವಾ ಟೈಟಾನಿಯಂನಿಂದ ಮಾಡಲ್ಪಟ್ಟ ಎಲೆಕ್ಟ್ರಾನಿಕ್ ರೆಕಾರ್ಡಿಂಗ್ ಸಾಧನವಾಗಿದ್ದು, ವಿಮಾನವು ಅಪಘಾತಕ್ಕೀಡಾದಾಗ ಅಪಘಾತದ ಕಾರಣವನ್ನು ತಿಳಿಯಲು ತನಿಖಾಧಿಕಾರಿಗಳಿಗೆ ಸಹಾಯ ಮಾಡುತ್ತದೆ.
ಕಪ್ಪು ಪೆಟ್ಟಿಗೆಯನ್ನು ಫ್ಲೈಟ್ ರೆಕಾರ್ಡರ್ ಎಂದೂ ಕರೆಯುತ್ತಾರೆ. ಇದು ಎರಡು ವಿಧವಾಗಿದೆ. ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ಧ್ವನಿ ರೆಕಾರ್ಡರ್ (CVR). ಸಂಯೋಜಿತವಾಗಿರುತ್ತವೆ.
– FDR ಗಾಳಿಯ ವೇಗ, ಕಾಪ್ಟರ್ ಎತ್ತರ, ವೇಗ ಮತ್ತು ಇಂಧನ ಹರಿವಿನ ಮಟ್ಟ ಸೇರಿದಂತೆ ಸೆಕೆಂಡಿಗೆ ಸುಮಾರು 80 ಚಲನೆಗಳನ್ನು ದಾಖಲಿಸುತ್ತದೆ. ಇದು 25 ಗಂಟೆಗಳ ರೆಕಾರ್ಡಿಂಗ್ ಸಂಗ್ರಹಣೆಯನ್ನು ಹೊಂದಿದೆ. CVR ಕಾಕ್‌ಪಿಟ್‌ನ ಶಬ್ದಗಳನ್ನು ದಾಖಲಿಸುತ್ತದೆ. ಪೈಲಟ್‌ಗಳ ನಡುವಿನ ಸಂಭಾಷಣೆಗಳು, ಏರ್ ಟ್ರಾಫಿಕ್ ಕಂಟ್ರೋಲ್‌ನೊಂದಿಗೆ ಅವರ ಸಂವಹನಗಳನ್ನು ದಾಖಲಿಸುತ್ತದೆ. ಇದರೊಂದಿಗೆ ಸ್ವಿಚ್ ಮತ್ತು ಇಂಜಿನ್ ನ ಶಬ್ದವೂ ಇದರಲ್ಲಿ ದಾಖಲಾಗುತ್ತದೆ.








